ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮೇಲೆ ಬಿಜೆಪಿಯು ಸಂದೇಶಖಾಲಿ ಅತ್ಯಾಚಾರ ಪ್ರಕರಣದ ವಿಚಾರದಲ್ಲಿ ನಿರಂತರ ದಾಳಿಯನ್ನು ನಡೆದುತ್ತಿದ್ದು, ಲೋಕಸಭೆ ಚುನಾವಣೆಯ ಪ್ರಮುಖ ವಿಚಾರವೇ ಇದಾಗಿತ್ತು. ಆದರೆ ಶನಿವಾರ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ಶನಿವಾರ ಈ ಪ್ರಕರಣಕ್ಕೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ಒಂದರಲ್ಲಿ “ಸಂದೇಶ್‌ಖಾಲಿಯಲ್ಲಿ ಯಾವುದೇ ಅತ್ಯಾಚಾರ ನಡೆದಿಲ್ಲ” ಎಂದು ಬಿಜೆಪಿ ನಾಯಕರೊಬ್ಬರು ಒಪ್ಪಿಕೊಂಡಿರುವುದು ಕಂಡು ಬಂದಿದೆ.
“ಇಲ್ಲಿ ಯಾವುದೇ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳಗಳು ನಡೆದಿಲ್ಲ. ಪಕ್ಷದ ಹಿರಿಯ ನಾಯಕ ಸುವೇಂದು ಅಧಿಕಾರಿ ಅವರ ನಿರ್ದೇಶನದ ಮೇರೆಗೆ ಮಹಿಳೆಯರು ಅಂತಹ ದೂರುಗಳನ್ನು ನೀಡುವಂತೆ ಮನವೊಲಿಸಲಾಗಿದೆ” ಎಂದು ಬಿಜೆಪಿ ನಾಯಕ ಗಂಗಾಧರ್ ಕೋಯಲ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ಆದರೆ ಬಿಜೆಪಿ ಮತ್ತು ಗಂಗಾಧರ್ ಕೋಯಲ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
First, BJP’s Rajya Sabha MP, @SamikBJP, disowned Gangadhar Koyal as a BJP leader, hoping to distance themselves from the sordid affair.
But now, with their backs against the wall, @SuvenduWB has posted a testimonial by the very same person, claiming him to be BJP’s Mandal… https://t.co/kbx8GAZTML pic.twitter.com/fub3U0VrLw
— All India Trinamool Congress (@AITCofficial) May 4, 2024
ಈ ವಿಡಿಯೋ ವೈರಲ್ ಆದ ನಂತರ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಾಗ್ದಾಳಿ ನಡೆಸಿದ್ದಾರೆ. “ಇಡೀ ಘಟನೆಯು ಪಶ್ಚಿಮ ಬಂಗಾಳವನ್ನು ದೂಷಿಸಲು ಬಿಜೆಪಿ ಮಾಡಿದ ಪಿತೂರಿ ಎಂದು ಸಾಬೀತುಪಡಿಸುತ್ತದೆ” ಎಂದು ಟಿಎಂಸಿ ಹೇಳಿದೆ.
ಇದನ್ನು ಓದಿದ್ದೀರಾ? ಸಂದೇಶಖಾಲಿ ಪ್ರಕರಣದ ಹಿಂದೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ: ಟಿಎಂಸಿ ಆರೋಪ
ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ಇನ್ನೂ ತಿಳಿದುಬಂದಿಲ್ಲ. ಆದರೆ ಧ್ವನಿಯನ್ನು ಎಡಿಟ್ ಮಾಡಲಾಗಿದೆ ಎಂದು ಬಿಜೆಪಿ ಮತ್ತು ವಿಡಿಯೋದಲ್ಲಿರುವ ಬಿಜೆಪಿ ಮುಖಂಡರು ಹೇಳಿದ್ದಾರೆ.
ಈ ಹಿಂದೆ ಶಹಜಹಾನ್ ಮತ್ತು ಆತನ ಇಬ್ಬರು ಸಹಾಯಕರು ತಮ್ಮ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದರು. ಈ ಪ್ರಕರಣವನ್ನು ಮುಂದಿಟ್ಟುಕೊಂಡೇ ಸದ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಾರಕ್ಕೆ ಇಳಿದಿದೆ. ಸಂದೇಶಖಾಲಿ ಸಂತ್ರಸ್ತೆಗೆ ಬಿಜೆಪಿ ಟಿಕೆಟ್ ಕೂಡಾ ನೀಡಿದೆ.
ಇನ್ನು ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಿಡುಗಡೆಯಾದ ನಂತರ ಗಂಗಾಧರ್ ಕೋಯಲ್ “ಇದು ಪಿತೂರಿ, ನನ್ನ ಧ್ವನಿಯನ್ನು ತಂತ್ರಜ್ಞಾನ ಬಳಸಿ ವಿಡಿಯೋದಲ್ಲಿ ಬಳಸಲಾಗಿದೆ” ಎಂದು ಹೇಳಿದ್ದಾರೆ. ಜೊತೆಗೆ ಸಂದೇಶಖಾಲಿ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳಕ್ಕೆ ದೂರನ್ನೂ ನೀಡಿದ್ದಾರೆ.