ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಜೊತೆಗೆ ರಾಜ್ಯ ಸರ್ಕಾರದಿಂದಲೂ ಒಂದು ಕೋಟಿ ರೂ. ಬಹುಮಾನ ಪಡೆದಿದ್ದ ಗಾಯಕರೊಬ್ಬರು ಇಂದು ತಮ್ಮ ಜೀವನೋಪಾಯಕ್ಕಾಗಿ ದಿನಗೂಲಿ ನೌಕರರಾಗಿದ್ದಾರೆ.
ತೆಲುಗಿನ ಪ್ರಸಿದ್ಧ ಗಾಯಕ ದರ್ಶನಂ ಮೊಗುಲಯ್ಯ ಹೊಟ್ಟೆಪಾಡಿಗಾಗಿ ದಿನಗೂಲಿ ನೌಕರನಾಗಿ ಜೀವನ ಸಾಗಿಸುತ್ತಿದ್ದಾರೆ. 73 ವರ್ಷದ ಮೊಗುಲಯ್ಯ ಅವರು ಅಪರೂಪರ ಸಂಗೀತ ವಾದ್ಯ ‘ಕಿನ್ನೆರಾ’ವನ್ನು ಬಾರಿಸುವುದಕ್ಕೆ ಜನಪ್ರಿಯರಾಗಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಮೊಗುಲಯ್ಯ ಅವರಿಗೆ ಅಂದಿನ ಬಿಆರ್‌ಎಸ್ ಸರ್ಕಾರ 1 ಕೋಟಿ ರೂ. ಬಹುಮಾನ ಘೋಷಿಸಿತ್ತು. ಆದರೆ ಈ ಹಣವನ್ನು ತಮ್ಮ ಕುಟುಂಬದ ಹಲವು ನಿರ್ವಹಣೆಗಾಗಿ ಬಳಿಸಿಕೊಂಡಿದ್ದಾರೆ. 9 ಮಕ್ಕಳಿರುವ ಇವರು ರಾಜ್ಯ ಸರ್ಕಾರ ನೀಡಿದ ಹಣದಲ್ಲಿ ತನ್ನ ಇಬ್ಬರು ಮಕ್ಕಳ ಮದುವೆಯನ್ನು ಪೂರೈಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಒಂದು ನಿವೇಶನವನ್ನು ಖರೀದಿಸಿ ಮೂರು ಅಂತಸ್ತಿನ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದರು. ಹಣ ಖರ್ಚಾದ ಕಾರಣ ನಿರ್ಮಾಣವನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸಿದರು. 9 ಮಕ್ಕಳಲ್ಲಿ ಮೂವರು ಮೃತಪಟ್ಟಿದ್ದು, ಕಾಯಿಲೆಯಿಂದಾಗಿ ಒಬ್ಬ ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆಯಿರುವ ಈತನ ಔಷಧಿ ವೆಚ್ಚಕ್ಕಾಗಿ ಕಾರಣ ತಿಂಗಳಿಗೆ 20 ಸಾವಿರ ಹಣವನ್ನು ವೆಚ್ಚ ಮಾಡಬೇಕಿದೆ.
ರಾಜ್ಯ ಸರ್ಕಾರ ತಿಂಗಳಿಗೆ 10 ಸಾವಿರ ಆರ್ಥಿಕ ನೆರವು ನೀಡುತ್ತಿದ್ದರೂ ಯಾವುದಕ್ಕೂ ಸಾಲುತ್ತಿಲ್ಲ. ಈ ನಡುವೆ ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ಮೊಗುಲಯ್ಯ ಅವರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಸದ್ಯ ಮೊಗುಲಯ್ಯ ಅವರು ಹೈದರಾಬಾದ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಅನೇಕ ಮಾಧ್ಯಮಗಳು ವರದಿ ಮಾಡಿವೆ.
