ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ನ 53ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು, ಚೆನ್ನೈ ಸೂಪರ್ ಕಿಂಗ್ಸ್ ತಂಡ 28 ರನ್ಗಳಿಂದ ಭರ್ಜರಿ ಜಯ ಕಂಡಿದೆ.
ಟಾಸ್ ಗೆದ್ದುಕೊಂಡಿದ್ದ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿ 43 ರನ್ ಗಳಿಸಿ ತಂಡಕ್ಕೆ ಆಸರೆ ಆಗಿದ್ದರಿಂದ ನಿಗದಿರ 20 ಓವರ್ಗಳಲ್ಲಿ ಪಂಜಾಬ್ಗೆ 167 ರನ್ಗಳ ಗುರಿ ನೀಡಿತ್ತು.
ಆದರೆ ಈ ಸಾಧಾರಣ ಗುರಿಯನ್ನು ಬೆನ್ನಟ್ಟಲು ಪರದಾಡಿದ ಪಂಜಾಬ್, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಉತ್ತಮ ಸ್ಪಿನ್ ದಾಳಿ ಮಾಡಿದ ರವೀಂದ್ರ ಜಡೇಜಾ ಪಂಜಾಬ್ ಗೆಲುವಿಗೆ ತಣ್ಣೀರು ಎರಚಿದರು. ಈ ಮೂಲಕ ಚೆನ್ನೈ 28 ರನ್ಗಳಿಂದ ಗೆಲುವು ಸಾಧಿಸಿತು.
The Yellow flag flying high in Dharamsala 💛🏔️@ChennaiIPL with a comfortable 2️⃣8️⃣-run victory over #PBKS 👏
Follow the Match ▶️ https://t.co/WxW3UyUZq6#TATAIPL | #PBKSvCSK pic.twitter.com/yikGozZ6Jy
— IndianPremierLeague (@IPL) May 5, 2024
ಚೆನ್ನೈ ನೀಡಿ 168 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಆರಂಭಿದಲ್ಲೇ ಜಾನಿ ಬೈರ್ಸ್ಟೋವ್ (7) ಮತ್ತು ರಿಲೀ ರೊಸೊವ್ (೦) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬಂದ ಶಶಾಂಕ್ ಸಿಂಗ್ ನಿಧಾನವಾಗಿ ರನ್ ಕಲೆ ಹಾಕಿದರು. ಉತ್ತಮವಾಗಿ ಆಡುತ್ತಿದ್ದ ಶಶಾಂಕ್ ಸಿಂಗ್ 27 ರನ್ಗಳಿಗೆ ಔಟ್ ಆದರು.
ಬಳಿಕ ಪ್ರಭಾಸಿಮ್ರಾನ್ ಸಿಂಗ್ ಕೂಡ ವಿಕೆಟ್ ಕಳೆದುಕೊಂಡರು. ನಂತರ ಕ್ರೀಸ್ಗೆ ಬಂದ ಯಾವುದೇ ಪಂಜಾಬ್ ಆಟಗಾರರು ತಂಡಕ್ಕೆ ಆಸರೆಯಾಗಲಿಲ್ಲ. ಸ್ಯಾಮ್ ಕರ್ರಾನ್(7), ಜಿತೇಶ್ ಶರ್ಮಾ(0), ಅಶುತೋಷ್ ಶರ್ಮಾ (3) ಹರ್ಷಲ್ ಪಟೇಲ್ (12) ರಾಹುಲ್ ಚಾಹರ್ (16) ಔಟ್ ಆಗುವ ಮೂಲಕ ಪೆವಿಲಿಯನ್ ಪರೇಡ್ ನಡೆಸಿದರು.
Plan 🔛 Point ✅
Ravindra Jadeja putting #PBKS in a spin with 2️⃣ more wickets in the same over👌👌
Watch the match LIVE on @StarSportsIndia and @JioCinema 💻📱#TATAIPL | #PBKSvCSK | @ChennaiIPL pic.twitter.com/LnbCok0dW8
— IndianPremierLeague (@IPL) May 5, 2024
ಕೊನೆಯಲ್ಲಿ ಪಂಜಾಬ್ ಗೆಲುವಿಗೆ ಹೋರಾಟ ನಡೆಸಿದ ಹರ್ಪ್ರೀತ್ ಬ್ರಾರ್ ಅಜೇಯ 16 ರನ್ ಗಳಿಸದರೆ, ಕಗಿಸೊ ರಬಾಡ 11 ರನ್ ಬಾರಿಸಿದರು. ಈ ಮೂಲಕ ಗುರಿ ತಲುವಲ್ಲಿ ಪಂಜಾಬ್ ವಿಫಲವಾಗಿ 28 ರನ್ಗಳಿಂದ ಸೋಲಿಗೆ ಶರಣಾಯಿತು.
ಚೆನ್ನೈ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ಗಳು, ಸಾಧಾರಣ ಮೊತ್ತದ ಗುರಿ ನೀಡಿದ್ದರೂ ಕೂಡ ತಂಡಕ್ಕೆ ಜಯ ತಂದುಕೊಡುವಲ್ಲಿ ಸಫಲರಾದರು.
ಇದನ್ನು ಓದಿದ್ದೀರಾ? ಇಸ್ರೇಲ್ನಲ್ಲಿ ಅಲ್-ಜಝೀರಾ ಚಾನೆಲ್ನ ಪ್ರಸಾರಕ್ಕೆ ನಿಷೇಧ ಹೇರಿದ ನೆತನ್ಯಾಹು ಸರ್ಕಾರ
ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದರೆ, ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ 2 ವಿಕೆಟ್ ಪಡೆದುಕೊಂಡರು. ಮಿಚೆಲ್ ಸ್ಯಾಂಟ್ನರ್ ಹಾಗೂ ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಿದರು.
