ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ನ 54ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ತವರಲ್ಲೇ ಮುಗ್ಗರಿಸಿದ್ದು, ಕೆಕೆಆರ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ, ಸುನಿಲ್ ನರೇನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 236 ರನ್ಗಳ ಬೃಹತ್ ಗುರಿ ನೀಡಿತ್ತು.
Sunil Narine stars in Knight Riders' massive over over Super Giants #LSGvKKR #IPL2024
👉 https://t.co/dYxXnBQzDp pic.twitter.com/kX8adSwZkN
— ESPNcricinfo (@ESPNcricinfo) May 5, 2024
ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡವು, 16.1 ಓವರ್ಗಳಲ್ಲಿ ಕೇವಲ 138 ರನ್ಗಳು ಗಳಿಸುವಷ್ಟರಲ್ಲೇ ಆಲೌಟ್ ಆಯಿತು. ಆ ಮೂಲಕ 98 ರನ್ಗಳಿಂದ ಹೀನಾಯವಾಗಿ ಸೋಲು ಕಂಡಿತು.
ಬ್ಯಾಟಿಂಗ್ನಲ್ಲಿ ಲಕ್ನೋ ಪರ ಮಾರ್ಕ್ ಸ್ಟೋಯ್ನಿಸ್ 36 ಹಾಗೂ ನಾಯಕ ಕೆ ಎಲ್ ರಾಹುಲ್ 25 ರನ್ ಗಳಿಸಿದ್ದು ಬಿಟ್ಟರೆ, ಬೇರೆ ಯಾವ ಬ್ಯಾಟರ್ಗಳು ಕೆಕೆಆರ್ ಬೌಲಿಂಗ್ ದಾಳಿಯನ್ನು ಮೆಟ್ಟಿ, ರನ್ ಗಳಿಸಲು ಪರದಾಡಿದರು.
High-Fives in the @KKRiders camp 🙌
With that they move to the 🔝 of the Points Table with 16 points 💜
Scorecard ▶️ https://t.co/CgxfC5H2pD#TATAIPL | #LSGvKKR pic.twitter.com/0dUMJLasNQ
— IndianPremierLeague (@IPL) May 5, 2024
ಅರ್ಶಿನ್ ಕುಲಕರ್ಣಿ 9, ದೀಪಕ್ ಹೂಡಾ 5, ನಿಕೊಲಸ್ ಪೂರನ್ 10, ಆಯುಷ್ ಬದೌನಿ 15, ಟರ್ನರ್ 16, ಕೃನಾಲ್ ಪಾಂಡ್ಯಾ 5 ರನ್ ಗಳಿಸಿ, ವಿಕೆಟ್ ಒಪ್ಪಿಸಿದರು.
KKR DOMINATING AT NO.1 WITH 1.45 NRR. 🤯⭐ pic.twitter.com/84ZBXBrpK4
— Mufaddal Vohra (@mufaddal_vohra) May 5, 2024
ಕೆಕೆಆರ್ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ವರಣ್ ಚಕ್ರವರ್ತಿ ಹಾಗೂ ಹರ್ಷಿತ್ ರಾಣಾ ತಲಾ ಮೂರು ವಿಕೆಟ್, ಆ್ಯಂಡ್ರೆ ರಸ್ಸೆಲ್ 2 ವಿಕೆಟ್ ಗಳಿಸಿದರು. ಸುನಿಲ್ ನರೇನ್ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಸಫಲರಾದರು.
ಲಕ್ನೋ ವಿರುದ್ಧದ ಇಂದಿನ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಕೆಕೆಆರ್ ಒಟ್ಟು 11 ಪಂದ್ಯದಲ್ಲಿ ಎಂಟು ಗೆಲುವು ಹಾಗೂ ಮೂರು ಸೋಲಿನೊಂದಿಗೆ ಒಟ್ಟು ಸರಾಸರಿ 1.45 ನೆಟ್ ರನ್ರೇಟ್ ಗಳಿಸಿದೆ. ಆ ಮೂಲಕ ರಾಜಸ್ಥಾನ ತಂಡವನ್ನು ಹಿಂದಿಕ್ಕಿ, ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
