ಬ್ರೆಜಿಲ್‌ನ ದಕ್ಷಿಣ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಈವರೆಗೆ ಕನಿಷ್ಠ 78 ಮಂದಿ ಸಾವನ್ನಪ್ಪಿದ್ದಾರೆ. 115,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ರಾಜ್ಯ ನಾಗರಿಕ ರಕ್ಷಣಾ ಪ್ರಾಧಿಕಾರದ ಪ್ರಕಾರ, ಭಾನುವಾರದವರೆಗೆ ಸುಮಾರು 105 ಜನರು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ಇನ್ನೂ ಗಣನೀಯವಾಗಿ ಹೆಚ್ಚಾಗಬಹುದು. ಇದಕ್ಕೂ ಹಿಂದಿನ ದಿನ 70 ಮಂದಿ ಮೃತಪಟ್ಟಿರುವುದು ಖಚಿತವಾಗಿದ್ದು ಪ್ರಸ್ತುತ ಆ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.
Heartbreaking news from southern Brazil as the death toll from floods climbs to 75, with over 88,000 displaced due to relentless rainfall.#PortoAlegre #RioGrandedoSul#Brazil #Floods #Flooding#BrazilFloods
— Mr. Shaz (@Wh_So_Serious) May 5, 2024
ಕಳೆದ ಕೆಲವು ದಿನಗಳಲ್ಲಿ ಚಂಡಮಾರುತದಿಂದ ಭಾರೀ ಮಳೆಯಾಗಿ ಪ್ರವಾಹ ಉಂಟಾಗಿದೆ. ಈ ಪ್ರವಾಹವು ಉರುಗ್ವೆ ಮತ್ತು ಅರ್ಜೆಂಟೀನಾದ ಗಡಿಯಲ್ಲಿರುವ ರಾಜ್ಯದ ಸುಮಾರು 500 ನಗರಗಳಲ್ಲಿ ಮೂರನೇ ಎರಡಕ್ಕಿಂತ ಹೆಚ್ಚು ಭಾಗದ ಮೇಲೆ ಪ್ರಭಾವ ಬೀರಿದೆ. 1,15,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್ನಲ್ಲಿ 18 ಮಂದಿ ಸಾವು
Major floods on the streets due to heavy rainfall in Três Coroas of Rio Grande do Sul, Brazil 🇧🇷
May 2, 2024
Credit…Disaster News @Top_Disaster pic.twitter.com/vsbvBSbWPa
— David Ullrich (@DavidUllrich202) May 5, 2024
ಪ್ರವಾಹದಿಂದಾಗಿ ಹಲವಾರು ನಗರಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳು ನಾಶವಾಗಿದೆ. ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಸಣ್ಣ ಜಲವಿದ್ಯುತ್ ಸ್ಥಾವರದಲ್ಲಿ ಅಣೆಕಟ್ಟಿನಲ್ಲಿ ಭಾಗಶಃ ಕುಸಿತವಾಗಿದೆ. ಇದರಿಂದಾಗಿ 400,000ಕ್ಕೂ ಹೆಚ್ಚು ಜನರಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸುಮಾರು ಮೂರನೇ ಒಂದು ಭಾಗದಷ್ಟು ಜನರು ನೀರಿಲ್ಲದೆ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋರ್ಟೊ ಅಲೆಗ್ರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರದಿಂದ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.