ಛತ್ತೀಸ್‌ಗಢ| ಶೂನ್ಯ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಈ ಬುಡಕಟ್ಟು ಮಹಿಳೆ ಚುನಾವಣಾ ಅಭ್ಯರ್ಥಿ

Date:

Advertisements

ಛತ್ತೀಸ್‌ಗಢದ ಕೊರ್ಬಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗೌರೆಲ್ಲಾ ಗ್ರಾಮದ ಭೇದ್ರಪಾಣಿಯ ನಿವಾಸಿ 33 ವರ್ಷದ ಶಾಂತಿ ಬಾಯಿ ಮಾರಾವಿ ಅವರು ಶೂನ್ಯ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಚುನಾವಣಾ ಅಭ್ಯರ್ಥಿಯಾಗಿದ್ದಾರೆ.

ಶಾಂತಿ ಬಾಯಿ ಮಾರಾವಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲದ ಕಾರಣ ‘ಜೀರೊ ಬ್ಯಾಲೆನ್ಸ್‌’ ಎಂದೇ ಇಲ್ಲಿ ಖ್ಯಾತಿ ಪಡೆದಿದ್ದಾರೆ. ಜನರು ಅವರನ್ನು ಜೀರೊ ಬ್ಯಾಲೆನ್ಸ್‌ ಎಂದೇ ಕರೆಯುತ್ತಾರೆ.

ಇದನ್ನು ಓದಿದ್ದೀರಾ?  LIVE updates | ಮೂರನೇ ಹಂತದ ಲೋಕಸಭೆ ಚುನಾವಣೆ ಅಪ್‌ಡೇಟ್ಸ್‌

Advertisements

ಇದು ಶ್ರೀಮಂತರಿಂದ ಹಿಡಿದು ಕಡಿಮೆ ಆಸ್ತಿ ಹೊಂದಿರುವವರವರೆಗೆ ಯಾವುದೇ ಅರ್ಹ ನಾಗರಿಕರು ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಭಾರತೀಯ ಪ್ರಜಾಪ್ರಭುತ್ವದ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ.

ಬೈಗಾ ಸಮುದಾಯಕ್ಕೆ ಸೇರಿದ ಶಾಂತಿ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಮಾತಿಗೆ ಕಿವಿಗೊಡಲಿಲ್ಲ ಎಂಬ ಬೇಸರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ಪತಿ ರಾಮ್ ಕುಮಾರ್ ಪ್ರೋತ್ಸಾಹ ನೀಡಿದ್ದಾರೆ.

ಇದನ್ನು ಓದಿದ್ದೀರಾ?  ಬೆಂಗಳೂರು ಉತ್ತರ | ಕಾಂಗ್ರೆಸ್‌ ಪರ ಒಲವೂ ಇದೆ; ‘ಗೃಹಲಕ್ಷ್ಮಿ ಹಣ ಬರ್ತಿದೆ, ಆದರೆ ವೋಟ್‌ ಮಾತ್ರ ಮೋದಿಗೆ’ ಅನ್ನೋರೂ ಇದ್ದಾರೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಭದ್ರತಾ ಠೇವಣಿ ಮೊತ್ತ 12,500 ರೂಪಾಯಿ ಆಗಿದ್ದು ಅದನ್ನು ಹೊಂದಿಸಿಕೊಂಡು ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.

“ಕೃಷಿ ಕಾರ್ಮಿಕರಾಗಿ ನಾವು ಗಳಿಸಿದ ಉಳಿತಾಯದ ಜೊತೆಗೆ, ನಾವು ನಮ್ಮ ಸಮುದಾಯದವರಿಂದ ಆರ್ಥಿಕ ಬೆಂಬಲ ಪಡೆದುಕೊಂಡಿದ್ದೇವೆ. ಎಲ್ಲರ ಬೆಂಬಲ ಪಡೆದು 12,500 ರೂಪಾಯಿ ಒಟ್ಟುಗೂಡಿಸಿ ಭದ್ರತಾ ಠೇವಣಿ ನೀಡಿದೆವು” ಎಂದು ಭದ್ರತಾ ಠೇವಣಿ ಹೇಳುತ್ತಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X