LIVE updates | ಮೂರನೇ ಹಂತದ ಲೋಕಸಭೆ ಚುನಾವಣೆ ಅಪ್‌ಡೇಟ್ಸ್‌

Date:

ಲೋಕಸಭೆ ಚುನಾವಣೆ ಅಪ್‌ಡೇಟ್ಸ್‌: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು (ಮೇ 7) ನಡೆಯುತ್ತಿದೆ. ಮೊದಲನೆಯ ಹಂತದ ಚುನಾವಣೆ ಏಪ್ರಿಲ್ 19ರಂದು ನಡೆದಿದ್ದು ಎರಡನೇ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆದಿದೆ. ಕರ್ನಾಟದಲ್ಲಿ ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಚುನಾವಣೆ ನಡೆದಿದ್ದು, ಇಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯಾಗಿದೆ.

Time 5:15 PM- ಗುಜರಾತ್‌ನ ಬನಸ್ಕಾಂತದಲ್ಲಿ ಮತದಾರರಿಗೆ ಬೆದರಿಗೆ – ಕಾಂಗ್ರೆಸ್‌ ಅರೋಪ; ಬನಸ್ಕಾಂತ್‌ನ ಸಿಯವಾಡ ಗ್ರಾಮದಲ್ಲಿ ಮತಗಟ್ಟೆಯ ಹೊರಗೆ ಬೇರೆ ಜಿಲ್ಲೆಯ ಯುವಕರು ಮತದಾರರಿಗೆ ಬದರಿಕೆ ಹಾಕಿದ್ದಾರೆಂದು ಕಾಂಗ್ರೆಸ್ ಅಭ್ಯರ್ಥಿ ಗನಿಬೆನ್ ಠಾಕೂರ್ ಆರೋಪಿಸಿದ್ದಾರೆ. ಆ ಯುವಕರು ತಮ್ಮ ಚಟುವಟಿಕೆಗಳಿಗೆ ನಕಲಿ ಪೊಲೀಸ್ ಫಲಕಗಳಿರುವ ವಾಹನಗಳನ್ನು ಬಳಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

Time 5:10 PM-  ಶಾಸಕ ವಿನಯ್‌ ಕುಲಕರ್ಣಿಗೆ ಧಾರವಾಡಕ್ಕೆ ತೆರಳಿ ಮತದಾನ ಮಾಡಲು ಹೈಕೋರ್ಟ್‌ ಅವಕಾಶ ನೀಡಿದೆ. ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಕ್ಕೆ ವಿನಯ್‌ ಕುಲಕರ್ಣಿ ಅವರಿಗೆ ನ್ಯಾಯಾಲಯ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಹೋಗಿ ಮತ ಚಲಾಯಿಸಿ ಕೂಡಲೇ ಅಲ್ಲಿಂದ ತೆರಳಬೇಕು ಎಂದು ಹೈಕೋರ್ಟ್‌ ವಿನಯ್‌ ಕುಲಕರ್ಣಿ ಅವರಿಗೆ ಸೂಚಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

Time 4:55 PM-  ಬಿಸಿಗಾಳಿ ಸಾಮಾನ್ಯಕ್ಕಿಂತ ಹೆಚ್ಚು ತೀವ್ರವಾಗಿರಲಿದೆ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಪಿ ಕೃಷ್ಣಮೂರ್ತಿ ಹೇಳಿದ್ದಾರೆ

Time 4:15 PM- ಮಧ್ಯಾಹ್ನ 3 ಗಂಟೆವರೆಗೆ ದೇಶದಲ್ಲಿ ನಡೆದ ಮತದಾನ ವಿವರ

ಪಶ್ಚಿಮ ಬಂಗಾಳ -63.11%
ಅಸ್ಸಾಂ- 63.08%
ಗೋವಾ- 61.3%
ಛತ್ತೀಸ್‌ಗಢ- 58.19%
ಕರ್ನಾಟಕ- 54.2%
ಮಧ್ಯ ಪ್ರದೇಶ- 54.09%
ದಾದ್ರಾ ಮತ್ತು ನಗರ ಹವೇಲಿ, ದಾಮನ್ ಮತ್ತು ದಿಯೂ- 52.4%
ಗುಜರಾತ್- 47.03%
ಉತ್ತರ ಪ್ರದೇಶ- 46.7%
ಬಿಹಾರ -46.69%
ಮಹಾರಾಷ್ಟ್ರ – 42.63%

Time 4:07 PM- ಧಾರಾವಾಡದಲ್ಲಿ ಮತಗಟ್ಟೆ ಸಂಖ್ಯೆ 380ರಲ್ಲಿ ಮಧ್ಯಾಹ್ನದ ಊಟದ ವೇಳೆಗೆ ಚುನಾವಣಾಧಿಕಾರಿಗಳು ಮತದಾನ ನಿಲ್ಲಿಸಿದ್ದು, ಅರ್ಧ ಗಂಟೆ ಮತದಾರರನ್ನು ಕಾಯಿಸಿದ್ದಾರೆ. “ಇದು ಚುನಾವಣಾ ಸಂಹಿತೆ ಉಲ್ಲಂಘನೆ. ನಮಗೆ ಹೆಚ್ಚುವರಿ ಅರ್ಧ ಗಂಟೆ ಮತದಾನಕ್ಕೆ ಅವಕಾಶ ನೀಡಬೇಕು” ಎಂದು ಮತದಾರರು ಆಗ್ರಹಿಸಿದ್ದಾರೆ.

Time 4:04 PM- ಕರ್ನಾಟಕದಲ್ಲಿ 3 ಗಂಟೆ ವೇಳೆಗೆ 54.20% ಮತದಾನವಾಗಿದೆ. ಚಿಕ್ಕೋಡಿಯಲ್ಲಿ ಅತ್ಯಧಿಕ ಮತದಾನ (59.65%) ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಹಾವೇರಿ (58.45%) ಇದೆ. ಗುಲ್ಭರ್ಗದಲ್ಲಿ ಅತಿ ಕಡಿಮೆ (47.67%) ಮತದಾನವಾಗಿದೆ: ಚುನಾವಣಾ ಆಯೋಗ ಡೇಟಾ

Time 3:40 PM-  ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ

Time 2:50 PM- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಟ್ಟಿಯ ಜನಪದ ವೈದ್ಯೆ, ಸೂಲಗಿತ್ತಿ ಬುರ್ರಕಥಾ ಕಮಲಮ್ಮ ಹಟ್ಟಿ ಪಟ್ಟಣದ ಡಾ. ಇ.ಎ. ಸೀಮೆಂಡ್ಸ್ ಆಂಗ್ಲ ಮಾಧ್ಯಮ ಶಾಲೆ(ಪೂರ್ವ ಭಾಗ) ಮತಗಟ್ಟೆಯಲ್ಲಿ ಇಂದು ಮೇ 07 ರಂದು ಮತಚಲಾಯಿಸಿದರು.ತಾವೆಲ್ಲರೂ ತಪ್ಪದೇ ಮತದಾನ ಮಾಡಿ. ನವ ರಾಯಚೂರು ನಿರ್ಮಾಣಕ್ಕೆ ಈ ಮೂಲಕ ಪ್ರತಿಯೊಬ್ಬ ಮತದಾರನು ಕೂಡ ಕೈ ಜೋಡಿಸಬೇಕಾದ ಅಗತ್ಯವಿದೆ ಎಂದು ಸೂಲಗಿತ್ತಿ ಬುರ್ರಕಥಾ ತಿಳಿಸಿದರು.

ಅಪ್‌ಡೇಟ್ಸ್‌

Time 2:44 PM-  ಕರ್ನಾಟಕದಲ್ಲಿ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಪಾವತಿ ಮಿಷನ್ ಅನ್ನು ಹೊಸ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸೇಡಂ ಮತ್ತು ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತದಾರರಿಗೆ ಫೋನ್‌ಪೇ ಮೂಲಕ ನೇರವಾಗಿ ಲಂಚ ನೀಡುತ್ತಿದೆ. ಈ ಬಗ್ಗೆ ಸಾಕ್ಷಿ ಸಮೇತವಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Time 2:32 PM-  ಮಧ್ಯಾಹ್ನ 1 ಗಂಟೆಯವರೆಗೆ ದೇಶದ 93 ಕ್ಷೇತ್ರಗಳಲ್ಲಿ ಶೇ 39.92 ಮತದಾನವಾಗಿದೆ. ಪಶ್ಚಿಮ ಬಂಗಾಳ ಶೇ 49.27, ಗೋವಾ ಶೇ 49.04, ಛತ್ತೀಸ್‌ಗಢ ಶೇ 46.14, ಅಸ್ಸಾಂ ಶೇ 45.88, ಮಧ್ಯ ಪ್ರದೇಶ ಶೇ 44.67, ಕರ್ನಾಟಕ ಶೇ 41.59, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಶೇ 39.94, ಉತ್ತರ ಪ್ರದೇಶ ಶೇ 38.12, ಗುಜರಾತ್ ಶೇ 37.83, ಬಿಹಾರ ಶೇ 36.69, ಮಹಾರಾಷ್ಟ್ರ ಶೇ 31.55 ಮತದಾನವಾಗಿದೆ.

Time 1:42 PM-  ಮಧ್ಯಾಹ್ನ 1 ಗಂಟೆ ವೇಳೆಗೆ ಕರ್ನಾಟಕದ 14 ಕ್ಷೇತ್ರಗಳಲ್ಲಿ 41.59% ಮತದಾನವಾಗಿದೆ. ಚಿಕ್ಕೋಡಿ 45.69%, ಶಿವಮೊಗ್ಗ 44.98%, ಬಳ್ಳಾರಿ 44.36%, ಉತ್ತರ ಕನ್ನಡ 44.22%, ಹಾವೇರಿ 43.26%, ಕೊಪ್ಪಳ 42.74%, ದಾವಣಗೆರೆ 42.32%, ಬಾಗಲಕೋಟೆ 41.91%, ಧಾರವಾಡ 40.61%, ಬೆಳಗಾವಿ 40.57%, ವಿಜಯಪುರ 39.87% ರಾಯಚೂರು 38.06%, ಬೀದರ್ 37.97%, ಕಲಬುರಗಿ 37.48% ಮತದಾನವಾಗಿದೆ.

Time 1:31 PM-  ಛತ್ತೀಸ್‌ಗಢದ ಬಲರಾಮಪುರದ ಸೇಮ್ಲಿ ಮತಗಟ್ಟೆಯಲ್ಲಿ ಕುಟುಂಬವೊಂದರ ಐದು ತಲೆಮಾರುಗಳ ಜನರು ಮತ ಚಲಾಯಿಸಿದರು.

Time 1:19 PM-  ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ನಟ ಶೇಖರ್ ಸುಮನ್, ಮಾಜಿ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Time 1:08 PM-  ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ವಿಟ್ಲಾಪುರ ಗ್ರಾಮದ ನಿವಾಸಿಗಳು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಗ್ರಾಮದ ಮತಗಟ್ಟೆ ಸಂಖ್ಯೆ 142ರಲ್ಲಿ 862 ಮತದಾರರಿದ್ದಾರೆ.

ಕೆಲ ದಿನಗಳ ಹಿಂದೆ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯೊಬ್ಬರು ಮೃತಪಟ್ಟಿದ್ದರು. ಡಾ.ಕಾವೇರಿ ಶ್ಯಾವಿ ಅವರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Time 12:54 PM-  ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಸಿಪಿಐ (ಎಂ) ಅಭ್ಯರ್ಥಿ ಮೊಹಮ್ಮದ್ ಸಲೀಮ್ ಮತ್ತು ಟಿಎಂಸಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. “ಜನರಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಭಯ ಹುಟ್ಟಿಸಲಾಗುತ್ತಿದೆ. ಪೊಲೀಸರೇ ಈ ಕಾರ್ಯವನ್ನು ಮಾಡುತ್ತಾರೆ. ಮತದಾನದ ದಿನವೂ ಕೂಡಾ ಮತದಾರರನ್ನು ತಡೆಯಲಾಗುತ್ತಿದೆ ಮತ್ತು ಬೆದರಿಕೆ ಹಾಕಲಾಗುತ್ತಿದೆ” ಎಂದು ಮೊಹಮ್ಮದ್ ಸಲೀಮ್ ಆರೋಪಿಸಿದರು.


Time 12:47 PM-  ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಲಘಟಗಿಯ ಮಡಕಿಹೊನ್ನಳ್ಳಿ ಮತಗಟ್ಟೆಗೆಯಲ್ಲಿ ಮತ ಚಲಾಯಿಸಿದ್ದು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

ಅಪ್‌ಡೇಟ್ಸ್‌

Time 12:37 PM- ಪಶ್ಚಿಮ ಬಂಗಾಳ ಹೊರತುಪಡಿಸಿ ಚುನಾವಣೆ ನಡೆಯುತ್ತಿರುವ ಇತರೆ ಎಲ್ಲ ರಾಜ್ಯಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಘರ್ಷಣೆ ಉಂಟಾಗಿದೆ.

Time 12:19 PM- ಭಾರತ ಅಭಿವೃದ್ಧಿಯಾಗುತ್ತಿದ್ದು, ಪ್ರಗತಿ ಮುಂದುವರೆಯಲಿದೆ ಎಂದು ಮತ ಹಾಕಿದ ಬಳಿಕ ದೇಶದ ಎರಡನೇ ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್‌ನ ಗೌತಮ್ ಅದಾನಿ ಹೇಳಿದರು.

Time 12:17 PM- ಭಾರತೀಯ ಕ್ರಿಕೆಟರ್ ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಜಡೇಜಾ, ತಂದೆ ಅನಿರುದ್ಧ ಸಿನ್ಹ ಜಡೇಜಾ ಜಾಮ್‌ನಗರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇಲ್ಲಿ ಬಿಜೆಪಿಯಿಂದ ಪೂನಮ್‌ಬೆನ್ ಮಾದಮ್, ಕಾಂಗ್ರೆಸ್‌ನಿಂದ ಜೆಪಿ ಮರವಿಯಾ ಕಣದಲ್ಲಿದ್ದಾರೆ.

Time 12:11 PM-  ಬೆಳಗ್ಗೆ 11 ಗಂಟೆವರೆಗೆ ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕ ಮತದಾನವಾಗಿದ್ದು ಮಹಾರಾಷ್ಟ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ.

ಪಶ್ಚಿಮ ಬಂಗಾಳ -32.82%
ಮಧ್ಯ ಪ್ರದೇಶ- 30.21%
ಛತ್ತೀಸ್‌ಗಢ- 29.9%
ಮಹಾರಾಷ್ಟ್ರ – 18.18%
ಗುಜರಾತ್- 24.35%
ಬಿಹಾರ -24.41%
ಅಸ್ಸಾಂ- 27.34%
ದಾದ್ರಾ ಮತ್ತು ನಗರ ಹವೇಲಿ, ದಾಮನ್ ಮತ್ತು ದಿಯೂ- 24.69%
ಗೋವಾ- 30.9%
ಕರ್ನಾಟಕ- 24.4%
ಉತ್ತರ ಪ್ರದೇಶ- 26.12%

Time 11:58 AM – ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಇಂದು ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಿದರು. “ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕು ಇದ್ದು, ನಾವು ಮತ ಹಾಕಿದ್ದೇವೆ ನೀವು ಮತ ಹಾಕಿ ನಿಮ್ಮ ಹಕ್ಕು ಚಲಾಯಿಸಿ” ಎಂದು ಹೇಳಿದರು.

Time 11:50 AM – ಸುಡು ಬಿಸಿಲಿನಲ್ಲಿಯೂ ಪ್ರತಿ ದಿನ ನನ್ನೊಂದಿಗೆ ಮತ್ತು ಗೀತಾ ಜೊತೆಯಲ್ಲಿ ನೀವು ಚುನಾವಣೆ ಕಾರ್ಯಕ್ಕೆ ಸಹಕಾರ ನೀಡಿರುವುದನ್ನು ನಾನೆಂದಿಗೂ ಮರೆಯಲ್ಲ. ಜನರು, ಭಿಮಾನಿಗಳು ಹಾಗು ಕಾಂಗ್ರೆಸ್‌ನ ಎಲ್ಲ ಸದಸ್ಯರಿಗೂ ಧನ್ಯವಾದ. ಇಂದು ನೀವೆಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ನಟ ಶಿವರಾಜ್‌ಕುಮಾರ್ ಮನವಿ ಮಾಡಿದ್ದಾರೆ.

ಅಪ್‌ಡೇಟ್ಸ್‌

Time 11:46 AM – ಕರ್ನಾಟಕದ 14 ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ 24.48% ಮತದಾನವಾಗಿದೆ. ಉತ್ತರ ಕನ್ನಡ – 27.65%, ಚಿಕ್ಕೋಡಿ – 27.23% , ಶಿವಮೊಗ್ಗ – 27.22% , ಬಳ್ಳಾರಿ – 26.45% , ಕೊಪ್ಪಳ – 24.64%, ಹಾವೇರಿ – 24.24%, ಧಾರವಾಡ – 24.00%, ಬೆಳಗಾವಿ – 23.91%, ಬಿಜಾಪುರ – 23.91% , ಬಾಗಲಕೋಟೆ – 23.80% , ದಾವಣಗೆರೆ – 23.73%, ಗುಲ್ಬರ್ಗ – 22.64%, ಬೀದರ್ – 22.33%, ರಾಯಚೂರು – 22.05%


Time 11:34 AM – ಇದು ನಿರುದ್ಯೋಗ, ಹಣದುಬ್ಬರವನ್ನು ಸೋಲಿಸುವ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

Time 11:26 AM –  ಬೀದರ್‌ನ ಮನಿಯಾರ್‌ ತಾಲೀಮ್‌ನ ಮತಗಟ್ಟೆ ಸಂಖ್ಯೆ 105ರಲ್ಲಿ ಶತಾಯುಷಿ ಇಕ್ಬಾಲ್ ಬೇಗಂ ಅಬ್ದುಲ್ ಹನ್ನಾನ್ ಸಾಬ್ ವೀಲ್‌ಚೇರ್‌ನಲ್ಲಿ ಬಂದು ಮತದಾನ ಹಕ್ಕು ಚಲಾಯಿಸಿದರು.

ಅಪ್‌ಡೇಟ್ಸ್‌

Time 11:22 AM –   ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ 103 ವಯಸ್ಸಿನ ಹಿರಿಯ ಮಹಿಳೆ ನೀಲವ್ವ ಶಿವಗೌಡ ಗಾಳಿ ಅವರು ಉತ್ಸಾಹದಿಂದ ಮತ ಚಲಾಯಿಸಿದರು.  ಕೊಳಗಲ್ ಗ್ರಾಮದ ಮತಗಟ್ಟೆಯಲ್ಲಿ 80 ವರ್ಷದ ಮಂಗಮ್ಮ ಮತ ಚಲಾಯಿಸಿದರು.

ಅಪ್‌ಡೇಟ್ಸ್‌

Time 11:09 AM –  ಕಲಬುರಗಿಯ ಗುಂಡುಗುರ್ತಿ ಗ್ರಾಮದ ಮತಗಟ್ಟೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ ಚಲಾಯಿಸಿದರು.

Time 11:03 AM –   ಬಿಜೆಪಿ ಹೀನಾಯ ಸೋಲು ಕಾಣಲಿದೆ. ರೈತರು, ಯುವಕರು, ವ್ಯಾಪಾರಿಗಳು, ಎಲ್ಲ ವರ್ಗದ ಜನರು ಬಿಜೆಪಿ ಆಡಳಿತದಿಂದ ಅಸಮಾಧಾನಗೊಂಡಿದ್ದಾರೆ ಎಂದು ಎಸ್‌ಪಿ ಮುಖ್ಯಸ್ಥ, ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.


Time 10:58 AM – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮತದಾನ ಮಾಡಿದ ಬಳಿಕ ಮತಗಟ್ಟೆಯೊಳಗೆ ಕ್ಯಾಮೆರಾಗೆ ಫೋಸ್‌ ನೀಡಿದ್ದು, ಅಭ್ಯರ್ಥಿಯಾಗಿರುವ ಅವರ ಪುತ್ರ ಮೃಣಾಲ್ ಅವರ ಕ್ರಮಸಂಖ್ಯೆಯನ್ನು ಕೈಯಲ್ಲಿ ತೋರಿಸಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ಅಪ್‌ಡೇಟ್ಸ್‌

Time 10:49 AM – ಹುಬ್ಬಳ್ಳಿಯ ಭವಾನಿ ನಗರದ ಮತಗಟ್ಟೆ ಸಂಖ್ಯೆ 111ರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕುಟುಂಬ ಸದಸ್ಯರ ಜೊತೆ ಬಂದು ಮತದಾನ ಮಾಡಿದರು

ಅಪ್‌ಡೇಟ್ಸ್‌

Time 10:46 AM – ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ) ಅವರು ಶಿಗ್ಗಾಂವಿಯಲ್ಲಿ ಹಾಗೂ ಜಗದೀಶ ಶೆಟ್ಟರ್ ಅವರು (ಬೆಳಗಾವಿ ಅಭ್ಯರ್ಥಿ) ಬೆಳಗಾವಿಯ ನಿಗದಿತ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಅಪ್‌ಡೇಟ್ಸ್‌

ಅಪ್‌ಡೇಟ್ಸ್‌

Time 10:42 AM –   ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಅವರ ಪತ್ನಿ ಮತ್ತು ಎಸ್‌ಪಿಯ ಮೇನ್ಪುರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಿಂಪಲ್ ಯಾದವ್ ಮತ ಚಲಾಯಿಸಿದರು.

Time 10:37 AM –   ಹಾವೇರಿಯಲ್ಲಿ ಹಸಿರು ಮತಗಟ್ಟೆ ನಿರ್ಮಾಣವಾಗಿದ್ದು ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಮತದಾರರನ್ನು ಸ್ವಾಗತಿಸುತ್ತಿದ್ದಾರೆ.

Time 10:35 AM –  ಬಿಹಾರದ ಸುಪೌಲ್‌ನ ಮತಗಟ್ಟೆಯ ಅಧಿಕಾರಿ ಶೈಲೇಂದ್ರ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. “ಇಂದು ಬೆಳಿಗ್ಗೆ ಅವರು ಕರ್ತವ್ಯದಲ್ಲಿದ್ದಾಗಲೇ ಶೈಲೇಂದ್ರ ಕುಮಾರ್ ನಿಧನರಾದರು. ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಇಲ್ಲಿ ನಾವು ಮೃತಪಟ್ಟಿರುವುದನ್ನು ಘೋಷಿಸಿದ್ದೇವೆ. ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ” ಎಂದು ವೈದ್ಯರು ತಿಳಿಸಿದ್ದಾರೆ.

Time 10:28 AM –  ಬಿಜೆಪಿ ನಾಯಕ ಕೆಎಸ್‌ ಈಶ್ವರಪ್ಪ ಮತ್ತು ಅವರ ಕುಟುಂಬಸ್ಥರು ಶಿವಮೊಗ್ಗದಲ್ಲಿ ಮತಚಲಾಯಿಸಿದರು. ತನ್ನ ಪುತ್ರನಿಗೆ ಟಿಕೆಟ್ ಕೈತಪ್ಪಿದ ಬಳಿಕ ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಬಿವೈ ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಇಲ್ಲಿ ಸ್ಪರ್ಧಿಸುತ್ತಿದ್ದಾರೆ.


Time 10:20 AM –  ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಅವರ ಶ್ರೀಮತಿಯವರಾದ ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯ ಬಸವನಗರದ ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಯ ಬೂತ್ ನಂಬರ್ 120 ರಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್ ಸರ್ಕಾರವು ಯಶಸ್ವಿಯಾಗಲಿದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ. ಕಲಬುರಗಿ ಮತ್ತು ಭಾರತಕ್ಕೆ ಕಳೆದ ಹತ್ತು ವರ್ಷದ ಮೋದಿ ಆಡಳಿತಾವಧಿ ದುರಂತವಾಗಿದೆ. ಜನರು ಹತಾಶೆಗೆ ಒಳಗಾಗಿದ್ದು ಈ ಬಾರಿ ಅಭಿವೃದ್ಧಿಗಾಗಿ ಮತ ಹಾಕಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅಪ್‌ಡೇಟ್ಸ್‌ಅಪ್‌ಡೇಟ್ಸ್‌ಅಪ್‌ಡೇಟ್ಸ್‌
Time 10:13 AM – ಬೆಳಗ್ಗೆ 7 ಗಂಟೆಗೆ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆಗೆ ರಾಜ್ಯದಾದ್ಯಂತ ಸರಾಸರಿ 9.45% ಮತದಾನವಾಗಿದೆ. ಶಿವಮೊಗ್ಗ (11.39%) ಮತ್ತು ಉತ್ತರ ಕನ್ನಡ (11.07%) ಅತಿ ಹೆಚ್ಚು ಮತದಾನವಾಗಿದ್ದರೆ, ರಾಯಚೂರಿನಲ್ಲಿ (8.27%) ಕಡಿಮೆ ಮತದಾನವಾಗಿದೆ ಎಂದು ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

Time 10:00 AM – ಶಿವಮೊಗ್ಗ ಜಿಲ್ಲಾ ಪಂಚಾಯತ್‌ನಲ್ಲಿ ಚುನಾವಣಾ ಸಿಬ್ಬಂದಿ ರಾಜರ ವೇಷಭೂಷಣ ತೊಟ್ಟು ಮತದಾರರನ್ನು ಸೆಳೆಯುತ್ತಿದ್ದಾರೆ.

ಅಪ್‌ಡೇಟ್ಸ್‌

Time 9:50 AM –    ಕರ್ನಾಟಕದಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಶೇ. 9.45ರಷ್ಟು ಮತದಾನವಾಗಿದೆ. ದೇಶದಾದ್ಯಂತ ಶೇ.10.57ರಷ್ಟು ಮತದಾನವಾಗಿದೆ.


Time 9:47 AM – ಛತ್ತೀಸ್‌ಗಢದಲ್ಲಿ ಶೂನ್ಯ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಬುಡಕಟ್ಟು ಮಹಿಳೆ ಚುನಾವಣಾ ಅಭ್ಯರ್ಥಿಯಾಗಿದ್ದಾರೆ. ಸುದ್ದಿ ಇಲ್ಲಿ ಓದಿ

Time 9:15 AM –    ಹೊಸಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ತಾಂತ್ರಿಕ ದೋಷದಿಂದ ಮತದಾನ 20 ನಿಮಿಷ ತಡವಾಯಿತು.  ಬೆಳಗ್ಗೆ 7.20ಕ್ಕೆ ಮತದಾನ ಆರಂಭವಾಯಿತು. ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಸಮಸ್ಯೆ ಸರಿಪಡಿಸುವಲ್ಲಿ ನೆರವಾದರು.

Time 8:41 AM –  ಅಸ್ಸಾಂನ ಗುವಾಹಟಿಯಲ್ಲಿ ಮಳೆಯ ನಡುವೆಯೂ ಜನ ಛತ್ರಿ ಹಿಡಿದುಕೊಂಡು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ

ಅಪ್‌ಡೇಟ್ಸ್‌
Time 8:30 AM–  ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನ ರಾನಿಪ್‌ನಲ್ಲಿರುವ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಚಲಾಯಿಸಿದರು.

Time 8:27 AM– ರಾಜ್ಯದ 14 ಕ್ಷೇತ್ರಗಳು ಸೇರಿ ದೇಶದಾದ್ಯಂತ 93 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕಾರವಾದ ಬಳಿಕ ಉಳಿದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಬಿಜೆಪಿ ಗೆಲುವು ಕಂಡಿದೆ.

 

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೆಮಲ್ ಚಂಡಮಾರುತ| ಬಂಗಾಳದಲ್ಲಿ ಭೂಕುಸಿತ ಸಾಧ್ಯತೆ; ವಿಮಾನ, ರೈಲುಗಳು ರದ್ದು

ರೆಮಲ್ ಚಂಡಮಾರುತ ಇಂದು (ಮೇ 26) ರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದ್ದು,...

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ: ಮುಖ್ಯ ಚುನಾವಣಾ ಆಯುಕ್ತ

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್...

ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ

ಉತ್ತರ ಪ್ರದೇಶ ಶಹಜಹಾನ್‌ಪುರದಲ್ಲಿ ಬಸ್‌ ಹಾಗೂ ಟ್ರಕ್ ನಡುವೆ  ಸಂಭವಿಸಿದ ಭೀಕರ...

ಬಾಂಗ್ಲಾದೇಶ ಸಂಸದನ ಹತ್ಯೆ ಪ್ರಕರಣ: ತನಿಖೆಗಾಗಿ ಢಾಕಾ ಪೊಲೀಸರ ತಂಡ ಕೋಲ್ಕತ್ತಾಗೆ ಭೇಟಿ

ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್...