ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ಖಚಿತ. ಜೂನ್ 5ರಂದು ಪ್ರಧಾನಿಯಾಗಿ ಮತ್ತೆ ಮೋದಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಭವಾನಿ ನಗರದ ಮತಗಟ್ಟೆ ಸಂಖ್ಯೆ 111ರಲ್ಲಿ ಕುಟುಂಬ ಜೊತೆ ನಂದು ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಪ್ರಜಾಪ್ರಭುತ್ವದ ಹಬ್ಬ ಇದಾಗಿದೆ. ಜನರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ನಿರ್ಣಯದ ಚುನಾವಣೆ ಇದಾಗಿದೆ” ಎಂದರು
“ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಿ ಯಶಸ್ವಿಗೊಳಿಸಬೇಕು. ಈಗಾಗಲೇ ಒಂದನೇ ಹಂತದ ಚುನಾವಣೆ ರಾಜ್ಯದಲ್ಲಿ ಮುಗಿದಿದೆ. ಎರಡನೇ ಹಂತದ ಚುನಾವಣೆಯಲ್ಲಿ 14 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಅದರಂತೆ ಕಳೆದ ಬಾರಿಗಿಂತ ಈ ಬಾರಿ ಅಭೂತಪೂರ್ವ ಜಯ ನನ್ನದಾಗಲಿದೆ” ಎಂದು ಹೇಳಿದರು.
“ಪ್ರತಿ ಚುನಾವಣೆಯಲ್ಲಿ ಆರೋಪಗಳು ಬರುವುದು ಸಹಜ, ಅದರಂತೆ ಈ ಬಾರಿ ತೇಜೋವಧೆ ಕೆಲಸ ಮಾಡಿದ್ದಾರೆ. ಇದನ್ನು ಮತದಾರರು ಕೇಳಿಸಿಕೊಳ್ಳುವುದಿಲ್ಲ. ಶುದ್ದ ರಾಜಕಾರಣ ಮಾಡಿದ್ದೇನೆ. ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಆಡಳಿತ ನಡೆಸಿದ್ದೇನೆ. ಅನಗತ್ಯ ಆರೋಪಕ್ಕೆ ತಲೆಕೆಡಿಸಿಕೊಳ್ಳದೇ ಜನರು ನನಗೆ ಆರ್ಶೀವಾದ ಮಾಡುತ್ತಾರೆ” ಎಂದು ಭರವಸೆ ವ್ಯಕ್ತಪಡಿಸಿದರು.
