ಬೆಂಗಳೂರಿನ ಥಣಿಸಂಧ್ರದಲ್ಲಿರುವ ರಾಚೇನಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾದ ಘಟನೆ ನಡೆದಿದೆ.
ಕೆರೆಯ ನೀರು ಸಂಪೂರ್ಣವಾಗಿ ಕಲುಷಿತವಾಗಿದ್ದು, ನೀರು ಕಡುಕಪ್ಪು ಬಣ್ಣಕ್ಕೆ ತಿರುಗಿದೆ. ಕರೆಯಲ್ಲಿದ್ದ ಸಾವಿರಾರು ಮೀನುಗಳು ಸತ್ತಿದ್ದು, ಕೆರೆ ನೀರಿನಲ್ಲಿ ತೇಲುತ್ತಿವೆ ಮತ್ತು ದಡದಲ್ಲಿ ರಾಶಿ ಬಿದ್ದಿವೆ. ಸತ್ತ ಮೀನುಗಳನ್ನು ತಿನ್ನಲು ಪಕ್ಷಿಗಳು ಬರುತ್ತಿರುವ ದೃಶ್ಯ ಕಂಡು ಬಂದದೆ.
ಮೀನುಗಳ ಸತ್ತ ಕಾರಣ ಕೆರೆಯ ಸುತ್ತಮುತ್ತ ವಾಸನೆ ತುಂಬಿದೆ. ಇದರಿಂದ ವಾಯುವಿಹಾರಿಗಳು ಬೆಳಿಗ್ಗೆ ಮತ್ತು ಸಂಜೆ ವಾಕ್ ಮಾಡಲು ಈ ಕೆರೆಗೆ ಬರುತ್ತಿಲ್ಲ.
“ಸತ್ತ ಮೀನುಗಳನ್ನು ಅರ್ಧಂಬರ್ಧ ತಿಂದು ರಣಹದ್ದುಗಳು ಮತ್ತು ನಾಯಿಗಳು ಕೆರೆಯ ಅಕ್ಕಪಕ್ಕದ ಮನೆಗಳ ಬಳಿ ಬಿಟ್ಟು ಹೋಗುತ್ತಿವೆ. ಇದರ ವಾಸನೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ನಿವಾಸಿಗಳು ದೂರಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿರುವ ರಾಚೇನಹಳ್ಳಿ ಕೆರೆ 148 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಗೆ ಅಕ್ಕಪಕ್ಕದ ಮನೆಗಳಿಂದ ನೇರವಾಗಿ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಕೆರೆಯಲ್ಲಿರುವ ಮೀನುಗಳು ಸಾವನ್ನಪ್ಪುತ್ತಿವೆ ಎಂದು ಕೆಲವರು ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಕೆರೆ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ನಿವಾಸಿ ಪ್ರವೀಣ್ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವ್ಹಿಲೀಂಗ್ ಮಾಡುತ್ತಿದ್ದ 14 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲು
ಜಯಮಹಲ್‌ನಲ್ಲಿರುವ ಆನೆ ಪಾರ್ಕ್‌ನಲ್ಲಿರುವ ಕೊಳದಲ್ಲಿ ಮೀನುಗಳ ಸಾವು
ಬೆಂಗಳೂರಿನ ಜಯಮಹಲ್‌ನ ಆನೆ ಪಾರ್ಕ್‌ನಲ್ಲಿರುವ ಕೊಳದಲ್ಲಿ ಅಪಾರ ಸಂಖ್ಯೆಯ ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ.
ಆಮ್ಲಜನಕದ ತೀವ್ರ ಕುಸಿತದಿಂದ ವಾರಾಂತ್ಯದಲ್ಲಿ ಮೀನುಗಳು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಕೊಳದಲ್ಲಿನ ನೀರು ಖಾಲಿಯಾಗುತ್ತಿದೆ. ಹೀಗಾಗಿ, ಮೀನುಗಳಿಗೆ ಆಮ್ಲಜನಕದ ಕೊರತೆ ಎದುರಾಗಿದೆ. ಮೀನುಗಳು ಸತ್ತಿವೆ. ಉದ್ಯಾನವನ ನಿರ್ವಹಣೆ ಮಾಡುತ್ತಿರುವ ತೋಟಗಾರಿಕಾ ಇಲಾಖೆ ಇತ್ತೀಚೆಗೆ ಕೆರೆಯನ್ನು ಸ್ವಚ್ಛಗೊಳಿಸಿದೆ ಎಂದು ಹೇಳಿದ್ದಾರೆ.