ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ 10 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 93 ಕ್ಷೇತ್ರಗಳಿಗೆ ಮತದಾನ ಪ್ರಗತಿಯಲ್ಲಿದ್ದು,ಬೆಳಗ್ಗೆ 11 ಗಂಟೆ ವೇಳೆಗೆ ಶೇ.25 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ – ರಜೌರಿ ಕ್ಷೇತ್ರದ ಚುನಾವಣೆ ಮೇ 25ಕ್ಕೆ ಮುಂದೂಡಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ,ಅಮಿತ್ ಶಾ ಒಳಗೊಂಡ ಕೆಲವು ಕೇಂದ್ರ ಸಚಿವರು ತಮ್ಮ ಹಕ್ಕು ಚಲಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜ್ವಲ್ ಪ್ರಕರಣ, ಒಕ್ಕಲಿಗರ ನಾಯಕತ್ವ ಮತ್ತು ಮನುಷ್ಯತ್ವ
543 ಲೋಕಸಭಾ ಕ್ಷೇತ್ರಗಳಲ್ಲಿ ಇಂದಿನ ಹಂತದ ಚುನಾವಣೆಯು ಪೂರ್ಣಗೊಂಡರೆ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾದಂತಾಗುತ್ತದೆ. ಬಹುಮತದ ಕ್ಷೇತ್ರಗಳು ಈ ಹಂತದಲ್ಲೇ ನಿರ್ಧಾರವಾಗಲಿದೆ.
ಮೂರನೇ ಹಂತದ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳನ್ನು ಹೊಂದಿದೆ. 2019ರಲ್ಲಿ ಇದೇ 92 ಕ್ಷೇತ್ರಗಳಲ್ಲಿ ಬಿಜೆಪಿ 72 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.
ಅಸ್ಸಾಂ 4, ಬಿಹಾರ್ 5, ಛತ್ತೀಸ್ಘಡ 7, ಗೋವಾ 2, ಗುಜರಾತ್ 26, ಕರ್ನಾಟಕ 14, ಮಧ್ಯ ಪ್ರದೇಶ 8, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ಪಶ್ಚಿಮ ಬಂಗಾಳ 4, ದಾದ್ರ ಮತ್ತು ನಗರ್ ಹಾವೇಲಿ ಮತ್ತು ಡಿಯು ಮತ್ತು ದಮನ್ನಲ್ಲಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
