ಇಂದಿನ ವರ್ಚುವಲ್ ಜಗತ್ತಿನಲ್ಲಿ ಅಪ್ರಾಪ್ತ ವಯಸ್ಕರಿಗೆ ‘ಗುಡ್ ಟಚ್’ ಮತ್ತು ‘ಬ್ಯಾಡ್ ಟಚ್’ ಬಗ್ಗೆ ಕಲಿಸುವುದು ಸಾಕಾಗುವುದಿಲ್ಲ, ‘ವರ್ಚುವಲ್ ಟಚ್’ ಮತ್ತು ಅದರ ಸಂಭಾವ್ಯ ಅಪಾಯಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕಾಗುತ್ತದೆ ಎಂದ ದೆಹಲಿ ಹೈಕೋರ್ಟ್ ಹೇಳಿದೆ.
ಈ ವರ್ಚುವಲ್ ಟಚ್ ಮಕ್ಕಳಿಗೆ ಸೂಕ್ತವಾದ ಆನ್‌ಲೈನ್ ನಡವಳಿಕೆಯನ್ನು ಕಲಿಸುವುದು, ಕೆಟ್ಟ ನಡವಳಿಕೆಯ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದು, ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಆನ್‌ಲೈನ್‌ನಲ್ಲಿ ತಿಳಿದಿರಬೇಕಾದ, ಅರ್ಥ ಮಾಡಿಕೊಳ್ಳಬೇಕಾದ ಕೆಲವು ಅಂಶಗಳನ್ನು ಒಳಗೊಂಡಿದೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಮತದಾನ ಮುಗಿಯುವವರೆಗೂ ಪ್ರಜ್ವಲ್ ರಾಜ್ಯಕ್ಕೆ ಬರುವುದು ಅನುಮಾನ!
“ಈಗಿನ ವರ್ಚುವಲ್ ಆಧುನಿಕ ಜಗತ್ತಿನಲ್ಲಿ ವರ್ಚುವಲ್ ಸ್ಪೇಸ್ ಹದಿಹರೆಯದವರ ನಡುವೆ ವರ್ಚುವಲ್ ಪ್ರೀತಿಯನ್ನು ಬೆಳೆಸುವ ಸ್ಥಳವಾಗಿ ಮಾರ್ಪಟ್ಟಿದೆ. ವೇಶ್ಯಾವಾಟಿಕೆ ಮತ್ತು ಇತರ ಅಪರಾಧಗಳ ಸಂಭಾವ್ಯ ಅಪಾಯಗಳನ್ನು ಎದುರಿಸಲು ಈ ಸಣ್ಣ ವಯಸ್ಸಿನವರು ಸಜ್ಜುಗೊಂಡಿಲ್ಲ” ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆಗೆ ಬಲವಂತಪಡಿಸಿದ ಬಳಿಕ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ತನ್ನ ಮಗನಿಗೆ ಸಹಾಯ ಮಾಡಿದ ಆರೋಪವನ್ನು ಹೊತ್ತಿರುವ ಕಮಲೇಶ್ ದೇವಿ ಎಂಬ ಮಹಿಳೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬಳಿಕ ಹೈಕೋರ್ಟ್ ವರ್ಚುವಲ್ ಟಚ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ.
“ಸಾಂಪ್ರದಾಯಿಕವಾಗಿ, ಅಪ್ರಾಪ್ತ ವಯಸ್ಕರನ್ನು ಹಾನಿಯಿಂದ ರಕ್ಷಿಸುವ ನಿಟ್ಟಿನಲ್ಲಿ ‘ಒಳ್ಳೆಯ ಸ್ಪರ್ಶ’ ಮತ್ತು ‘ಕೆಟ್ಟ ಸ್ಪರ್ಶ’ದ ಬಗ್ಗೆ ಅರಿವು ನೀಡಲಾಗುತ್ತದೆ. ಆದರೆ ಇಂದಿನ ವರ್ಚುವಲ್ ಜಗತ್ತಿನಲ್ಲಿ, ‘ವರ್ಚುವಲ್ ಟಚ್’ ಪರಿಕಲ್ಪನೆಯನ್ನು ಒಳಗೊಂಡು ಈ ಶಿಕ್ಷಣ ವಿಸ್ತರಣೆ ಮಾಡುವುದು ನಿರ್ಣಾಯಕವಾಗಿದೆ” ಎಂದು ಹೇಳಿದರು.