ದಾವಣಗೆರೆ ಸಂಸದ ಸಿದ್ದೇಶ್ವರ್ ಅವರು ತಮ್ಮ ಪತ್ನಿ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಮತವನ್ನೂ ತಾವೇ ಚಲಾಯಿಸಿದ್ದಾರೆ. ಆ ಮೂಲಕ ಮತದಾನದ ಗೌಪ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದು, ಚುನಾವಣಾ ಮಾರ್ಗಸೂಚಿಯನ್ನೂ ಉಲ್ಲಂಘಿಸಿದ್ದಾರೆ.
ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಮತದಾನ ಮಾಡಲು ದಂಪತಿಗಳು (ಸಿದ್ದೇಶ್ವರ್ ಮತ್ತು ಗಾಯತ್ರಿ) ಒಟ್ಟಿಗೆ ಬಂದಿದ್ದಾರೆ. ಈ ವೇಳೆ ಗಾಯತ್ರಿ ಸಿದ್ದೇಶ್ವರ್ ಮತ ಹಾಕಲು ಗೊಂದಲ್ಲಕೊಳ್ಳಗಾಗಿದ್ದರು. ಆಗ, ಅವರಿಗೆ ಸಹಾಯ ಮಾಡಲು ಹೋಗಿದ ಸಿದ್ದೇಶ್ವರ್, ಪತ್ನಿ ಪರವಾಗಿ ತಾವೇ ಮತದಾನ ಮಾಡಿದ್ದಾರೆ.
ಸಿದ್ದೇಶ್ವರ್ ಅವರೇ ತಮ್ಮ ಪತ್ನಿ, ಬಿಜೆಪಿ ಅಭ್ಯರ್ಥಿಯ ಮತವನ್ನೂ ಚಲಾಯಿಸಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. “ತಮ್ಮ ಮತವನ್ನು ತಾವೇ ಚಲಾಯಿಸಲಾಗದ ಬಿಜೆಪಿ ಅಭ್ಯರ್ಥಿ ಆಡಳಿತವನ್ನು ಹೇಗೆ ನಡೆಸುತ್ತಾರೆ” ಎಂದು ಪ್ರಶ್ನೆಗಳು ಕೇಳಿಬರುತ್ತಿವೆ.
ಇದೇ ಮೊದಲ ಬಾರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಕಣದಲ್ಲಿದ್ದಾರೆ.