ಲೋಕಸಭಾ ಚುನಾವಣೆ ಘೋಷಣೆಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೋದಿ ಕಿ. ಗ್ಯಾರಂಟಿ’ ಹೆಸರಿನಲ್ಲಿ ತಮ್ಮ ಸರ್ಕಾರದ ಸಾಧನೆಗಳು ಮತ್ತು ಬಿಜೆಪಿ ಚುನಾವಣಾ ಭರವಸೆಗಳ ಬಗ್ಗೆ ಮಾತನಾಡುತಿದ್ದರು ತಮ್ಮ ಸರ್ಕಾರವನ್ನು ತಾವೇ ಶ್ಲಾಘಿಸುತ್ತಿದ್ದರು. ಆದರೆ ಇದ್ದಕ್ಕಿದ್ಯಂತೆ ಅವರ ಭಾಷಣದ ಪರಿ ಬದಲಾಯಿತು ಏಪ್ರಿಲ್ 21 ರಂದು ರಾಜಸ್ಥಾನದ ಬನ್ಸಾರದಲ್ಲಿ ತಮ್ಮ ಭಾಷಣದ ದಿಕ್ಕು ಬದಲಿಸಿದ ಮೋದಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯು ಮುಸ್ಲಿಂ ಲೀಗ್ ದಾಖಲೆಯಂತಿದೆ ಎಂಬ ಮಾತಿನೊಂದಿಗೆ ಅತ್ಯಂತ ಧ್ರುವೀಕರಣ ಹಾಗೂ ದ್ವೇಷ ಮಿಶ್ರಿತ ಭಾಷಣದ ಸುರಿಮಳೆಗೈದರು. ಅದೇ ಭಾಷಣದಲ್ಲಿ ಮುಸ್ಲಿಮರನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ಬಿಂಬಿಸಿದರು ಹಾಗಿದ್ದರೆ, ಈ ಚುನಾವಣೆ ಮೋದಿಯ ನಿಜ ಸ್ವರೂಪವನ್ನು ಬಿಚ್ಚಿಡುತ್ತಿದೆಯೇ ? ಈ ವಿಡಿಯೋ ನೋಡಿ.
ಈ ಚುನಾವಣೆ ಮೋದಿಯ ನಿಜ ಸ್ವರೂಪವನ್ನು ಬಿಚ್ಚಿಡುತ್ತಿದೆಯೇ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: