ರಾಜ್ಯದಲ್ಲಿ ಎರಡನೇ ಹಂತದ ಮತದಾನವು ಮಂಗಳವಾರ (ಮೇ 7) ನಡೆದಿದ್ದು, ಶೇ. 70.41ರಷ್ಟು ಮತದಾನ ನಡೆದಿದೆ. ಯುವಕರು ಹೆಚ್ಚಾಗಿ ಉತ್ಸಾಹದಿಂದ ಮತದಾನ ಮಾಡಿದ್ದಾರೆ, ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿದ ಯುವಕರಿಗೆ ಅಭಿನಂದನೆ ತಿಳಿಸುವುದಾಗಿ ಎಂದು ಚುನಾವಣಾ ಆಯೋಗ ಹೇಳಿದೆ.
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ನಡೆದಿದ್ದರೆ, ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಇದಾಗಿದೆ. ದೇಶದಲ್ಲಿ ಮೂರನೇ ಹಂತದಲ್ಲಿ ಒಟ್ಟಾಗಿ ಶೇ.65ರಷ್ಟು ಮತದಾನವಾಗಿದೆ.
ದಿನದ ಅಂತ್ಯಕ್ಕೆ ಒಟ್ಟಾರೆ ಶೇಕಡಾವಾರು ಮತದಾನ ಹೀಗಿದೆ. ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆಯಲ್ಲಿ ಭಾಗವಹಿಸಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ ಪ್ರತಿ ಮತದಾರರಿಗೂ ಧನ್ಯವಾದಗಳು.@ECISVEEP@SpokespersonECI#ceokarnataka #LokaSabhaElection2024#Election2024#YourVoteYourVoice#DeshkaGarv #voteindia pic.twitter.com/Td8oZeG2EI
— Chief Electoral Officer, Karnataka (@ceo_karnataka) May 7, 2024
ಲೋಕಸಭೆ ಚುನಾವಣೆ 2024 ಮತದಾನ ವಿವರ
1. ಚಿಕ್ಕೋಡಿ 76.99%
2. ಬೆಳಗಾವಿ 71%
3. ಬಾಗಲಕೋಟೆ 70.1%
4. ಬಿಜಾಪುರ 64.71%
5. ಗುಲ್ಬರ್ಗ 61.73%
6. ರಾಯಚೂರು 61.81%
7. ಬೀದರ್ 63.55%
8. ಕೊಪ್ಪಳ 69.87%
9. ಬಳ್ಳಾರಿ 72.35%
10. ಹಾವೇರಿ 74.75%
11. ಧಾರವಾಡ 72.12%
12. ಉತ್ತರ ಕನ್ನಡ 73.52%
13. ದಾವಣಗೆರೆ 76.23%
14. ಶಿವಮೊಗ್ಗ 76.05%
15. ಉಡುಪಿ ಚಿಕ್ಕಮಗಳೂರು 77.15%
16. ಹಾಸನ 77.68%
17. ದಕ್ಷಿಣ ಕನ್ನಡ 77.56%
18. ಚಿತ್ರದುರ್ಗ 73.30%
19. ತುಮಕೂರು 78.05%
20. ಮಂಡ್ಯ 81.67%
21. ಮೈಸೂರು 70.62%
22. ಚಾಮರಾಜನಗರ 76.81%
23. ಬೆಂಗಳೂರು ಗ್ರಾಮಾಂತರ 68.30%
24. ಬೆಂಗಳೂರು ಉತ್ತರ 54.45%
25. ಬೆಂಗಳೂರು ನಗರ 54.06%
26. ಬೆಂಗಳೂರು ದಕ್ಷಿಣ 53.17%
27. ಚಿಕ್ಕಬಳ್ಳಾಪುರ 77.00%
28. ಕೋಲಾರ 78.27%
ಇದನ್ನು ಓದಿದ್ದೀರಾ? ಮತದಾನದ ಪ್ರಮಾಣಕ್ಕೂ ಬಿಡುಗಡೆಯಾಗಿರೋ ಡೇಟಾದಲ್ಲಿ ಭಾರೀ ವ್ಯತ್ಯಾಸ
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಏಪ್ರಿಲ್ 26ರಂದು ನಡೆದಿದ್ದು, 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಶೇ. 70.41ರಷ್ಟು ಮತದಾನವಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಶೇ. 69.96ರಷ್ಟು ಮತದಾನವಾಗಿದೆ. ಮತ ಎಣಿಕೆ ಪ್ರಕ್ರಿಯೆ ಜೂನ್ 4ರಂದು ನಡೆಯಲಿದೆ.