ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗಿತ್ತಿದ್ದು, ಮೇ 8ರಂದು ಸಹ ಬಿರುಗಾಳಿ ಸಹಿತ ನಗರದ ಹಲವೆಡೆ ಮಳೆಯಾಗುತ್ತಿದೆ.
ನಗರದ ಯಲಹಂಕ, ರಿಚ್ಮಂಡ್ ಟೌನ್, ನೆಲಮಂಗಲ, ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಶಾಂತಿನಗರ, ಎಂ.ಜಿ.ರಸ್ತೆ, ಕೆ.ಆರ್.ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್, ಗುಟ್ಟಹಳ್ಳಿ, ವಿಧಾನಸೌಧ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಏಕಾಏಕಿ ಮಳೆಯಿಂದ ಕೆಲಸ ಮುಗಿಸಿ ಮನೆಗೆ ತರಳುತ್ತಿದ್ದ ವಾಹನ ಸವಾರರು ಪರದಾಡುವಂತಾಗಿದೆ.
ಮಳೆಯಿಂದ ಸದಾಶಿವನಗರ, ಹೆಬ್ಬಾಳ, ಅರಮನೆ ಮೈದಾನ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಮಂತ್ರಿ ಮಾಲ್, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್ ಬಳಿ ರಸ್ತೆಗಳು ಜಲಾವೃತಗೊಂಡಿವೆ. ಹೆಬ್ಬಾಳ, ಅರಮನೆ ಮೈದಾನ ಬಳಿ ಸೇರಿದಂತೆ ಹಲವೆಡೆ ವಾಹನ ಸಂಚಾರ ದಟ್ಟಣೆಯಾಗಿದೆ. ಇಷ್ಟು ದಿನ ಬೇಸಿಗೆಯ ಬಿಸಿಗೆ ಬೇಸತ್ತಿದ್ದ ಜನ ಮಳೆಯಿಂದ ಖುಷಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘Yes’, ಮೋದಿ ಹೇಳಿದ್ದು ಸರಿ; ಚುನಾವಣೆ ವೇಳೆ ಅದಾನಿ-ಅಂಬಾನಿ ವಿಷಯ ಚರ್ಚೆಯಾಗಲೇಬೇಕು!
ಬೆಂಗಳೂರು ಸೇರಿದಂತೆ ಮುಂದಿನ ಒಂದು ವಾರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.