ಔರಾಂಗಾಬಾದ್, ಉಸ್ಮಾನಾಬಾದ್ ಜಿಲ್ಲೆಗಳ ಹೆಸರು ಬದಲಾವಣೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

Date:

ಔರಾಂಗಾಬಾದ್, ಉಸ್ಮಾನಾಬಾದ್ ಹೆಸರುಗಳನ್ನು ಛತ್ರಪತಿ ಸಾಂಬಾಜಿ ನಗರ್‌ ಹಾಗೂ ಧರಶಿವ್‌ ಎಂದು ಬದಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ‘ಹೆಸರಲ್ಲೇನಿದೆ’ ಎಂದು ವಜಾಗೊಳಿಸಿತು.

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಆರೀಫ್ ಡಾಕ್ಟರ್ ಅವರಿದ್ದ ಪೀಠವು, ಅರ್ಜಿಗಳು ಸರಿಯಾದ ಅರ್ಹತೆಯನ್ನು ಹೊಂದಿಲ್ಲ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಹೆಸರು ಬದಲಾವಣೆಯ ಅಧಿಸೂಚನೆಯು ಯಾವುದೇ ಮಧ್ಯಸ್ಥಿಕೆಯನ್ನು ಸಮರ್ಥಿಸುವುದಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿತು.

“ರಾಜ್ಯ ಸರ್ಕಾರ ಹೊರಡಿಸಿರುವ ಔರಂಗಬಾದ್ ಹಾಗೂ ಉಸ್ಮಾನಾಬಾದ್ ಹೆಸರು ಬದಲಾವಣೆಯ ಅಧಿಸೂಚನೆಯು ಯಾವುದೇ ಅಕ್ರಮ ಅಥವಾ ಕಾನೂನು ದುರ್ಬಲತೆಯನ್ನು ಹೊಂದಿಲ್ಲ ಎಂದು ಹೇಳಲು ನಾವು ಹಿಂಜರಿಯುವುದಿಲ್ಲ” ಎಂದು ಪೀಠವು ತಿಳಿಸಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ

ಈ ಸಂದರ್ಭದಲ್ಲಿ ವಿಲಿಯಂ ಶೇಕ್ಸ್‌ಪಿಯರ್‌ನ ರೋಮಿಯೋ ಮತ್ತು ಜೂಲಿಯಟ್‌ ನಾಟಕದ “ ಹೆಸರಲ್ಲೇನಿದೆ? ಗುಲಾಬಿಯನ್ನು ಯಾವುದೇ ಹೆಸರಿನಿಂದ ಕರೆದರೂ ಅದರ ಸುವಾಸನೆ ಸಹಿಯಾಗಿರುತ್ತದೆ” ಎಂಬ ಸಾರಾಂಶವನ್ನು ಪೀಠ ಉಲ್ಲೇಖಿಸಿತು.

ಮಹಾರಾಷ್ಟ್ರ ಕಂದಾಯ ಸಂಹಿತೆಯು ರಾಜ್ಯ ಸರ್ಕಾರವು ಯಾವುದೇ ಭೂಪ್ರದೇಶವನ್ನು ರದ್ದುಗೊಳಿಸಲು ಹಾಗೂ ಭೂಪ್ರದೇಶದ ಹೆಸರು ಹಾಗೂ ಹೊಸ ಹೆಸರನ್ನು ಬದಲಿಸಲು ಅನುಮತಿಸುತ್ತದೆ ಎಂದು ಪೀಠವು ತನ್ನ ತೀರ್ಪಿನಲ್ಲಿ ತಿಳಿಸಿತು.

2022 ರಲ್ಲಿ ಮಹಾರಾಷ್ಟ್ರ ಸಂಪುಟವು ಔರಾಂಗಾಬಾದ್, ಉಸ್ಮಾನಾಬಾದ್ ಹೆಸರುಗಳನ್ನು ಛತ್ರಪತಿ ಸಾಂಬಾಜಿ ನಗರ್‌ ಹಾಗೂ ಧರಶಿವ್‌ ಎಂದು ಬದಲಿಸಿ ಅನುಮೋದನೆ ನೀಡಿತ್ತು. ಹಳೆಯ ಹೆಸರುಗಳನ್ನು ಬದಲಾಯಿಸಿರುವುದನ್ನು ಪ್ರಶ್ನಿಸಿ ಎರಡೂ ಜಿಲ್ಲೆಯ ನಾಗರಿಕರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಮ್ಮು ಕಾಶ್ಮೀರ| ಭಯೋತ್ಪಾದಕ ದಾಳಿ; ಬಿಜೆಪಿಯ ಮಾಜಿ ಸರಪಂಚ ಹತ್ಯೆ, ಪ್ರವಾಸಿಗರಿಗೆ ಗಾಯ

ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ...

ಉತ್ತರ ಪ್ರದೇಶ | ವ್ಯಕ್ತಿಯೋರ್ವನ ಬ್ಯಾಂಕ್ ಖಾತೆಗೆ 9,900 ಕೋಟಿ ರೂ. ಜಮೆ; ಬೆರಗಾದ ಖಾತೆದಾರ

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಬರೋಬ್ಬರಿ 9,900...

ಮೋದಿ ಸುಳ್ಳುಗಳು | ಪ್ರಗತಿಪರ ನೀತಿಗಳು ಮತ್ತು ದೃಢ ಆಡಳಿತ ನೀಡಿದ್ದಾರಾ ಮೋದಿ?

ಮಹಾರಾಷ್ಟ್ರದ ಮುಂಬೈನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,...

ಛತ್ತೀಸ್‌ಗಢ| ಮದುವೆಗೆ ನಕಾರ; ಯುವತಿ ಕುಟುಂಬದ ಐವರನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

ಛತ್ತೀಸ್‌ಗಢದ ಸಾರಂಗಢ-ಬಿಲೈಗಢ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ...