ಸುಳ್ಳು ಹೇಳುತ್ತಾ ಪ್ರಧಾನಿ ಹುದ್ದೆಯ ಘನತೆಯನ್ನೇ ಮಣ್ಣು ಮಾಡಿದ ಮೋದಿ

Date:

Advertisements

ದೇಶದ ಪ್ರಧಾನಿ ಅಂದ್ರೆ ಅವರ ಮಾತು ಘನತೆ, ಗಾಂಭೀರ್ಯದಿಂದ ಕೂಡಿರಬೇಕು. ಆದ್ರೆ ಮೋದಿ ಮಾತ್ರ ಪ್ರಧಾನಿ ಘನತೆಗೆ ಕ್ಯಾರೆ ಎನ್ನದೇ ತನ್ನ ಸುಳ್ಳುಗಳನ್ನು ಬಿತ್ತುವ ಕೆಲಸ ಮಾಡ್ತಿದ್ದಾರೆ. ಮೋದಿಯವರು ಹೇಳಿದ ಸುಳ್ಳುಗಳ ಸರಣಿ ಇಲ್ಲಿದೆ.

ಇಂದು ಮಧ್ಯಪ್ರದೇಶದಲ್ಲಿ ಭಾಷಣ ಮಾಡುತ್ತಾ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಧರ್ಮಾಧಾರಿತ ಮೀಸಲಾತಿಯನ್ನು ಜಾರಿಗೆ ತರಲಿದೆ. ಕ್ರೀಡೆಯಲ್ಲೂ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲು ಯೋಜಿಸುತ್ತಿದೆ. ಕಾಂಗ್ರೆಸ್‌ ಗೆದ್ದರೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರೇ ತುಂಬಿಕೊಳ್ಳುತ್ತಾರೆ” ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ತಮ್ಮ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ.

“ಅಲ್ಪಸಂಖ್ಯಾತರಿಗೆ ಕ್ರೀಡೆಯಲ್ಲಿಯೂ ಮೀಸಲಾತಿ ನೀಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಇದರರ್ಥ ಧರ್ಮದ ಆಧಾರದ ಮೇಲೆ ಯಾರು ಕ್ರಿಕೆಟ್ ತಂಡದಲ್ಲಿ ಇರಬೇಕು ಮತ್ತು ಹೊರಗೆ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ” ಎಂದು ಹೇಳಿದ್ದಾರೆ.

Advertisements

ಅಲ್ಪಸಂಖ್ಯಾತರು ಅಂದ್ರೆ ಕೇವಲ ಮುಸ್ಲಿಮರು ಮಾತ್ರ ಅಂತ ಒಂದಿಷ್ಟು ಮಂದಿ ಅಂದ್ಕೊಂಡಿದ್ದಾರೆ. ಆದ್ರೆ ಅಲ್ಪಸಂಖ್ಯಾತರ ಲಿಸ್ಟ್‌ನಲ್ಲಿ ಮುಸ್ಲಿಮರು ಮಾತ್ರವಲ್ಲ ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಕೂಡ ಬರ್ತಾರೆ. ಆದ್ರೆ ಮೋದಿ ಮಾತ್ರ ಅಲ್ಪಸಂಖ್ಯಾತರು ಅಂದ್ರೆ ಮುಸ್ಲಿಂಮರು ಮಾತ್ರ ಅನ್ನೋ ರೀತಿ ಬಿಂಬಿಸ್ತಾ ಇದ್ದಾರೆ. ಇನ್ನೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಕ್ರಿಕೆಟ್‌ನಲ್ಲೂ ಮುಸ್ಲಿಮರೇ ತುಂಬಿ ಹೋಗ್ತಾರೆ ಅಂತ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಹಾಗೂ ಭಾರತದ ಯುದ್ಧ ಯಾವ ಸರ್ಕಾರ ಇದ್ದಾಗ ಆಗಿದ್ದು ಅನ್ನೋದು ಮರೆತು ಹೋಗಿರಬಹುದು.

ಎರಡನೇ ಸುಳ್ಳು : “ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಇರುವ ಮೀಸಲಾತಿಗಳನ್ನು ‘ಕಿತ್ತುಕೊಳ್ಳಲು’ ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಯೋಜಿಸುತ್ತಿವೆ” ಎಂದು ಮೋದಿ ತಮ್ಮ ಸುಳ್ಳನ್ನು ಪುನರುಚ್ಚರಿಸಿದ್ದಾರೆ.

ಮೂರನೇ ಸುಳ್ಳು : ಕಾಂಗ್ರೆಸ್‌ ಪಕ್ಷ ಏನಾದ್ರೂ ಅಧಿಕಾರಕ್ಕೆ ಬಂದ್ರೆ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕಿ ಬಿಡುತ್ತಾರೆ ಎಂದು ಹೇಳುವ ಮೂಲಕ ರಾಮಮಂದಿರದ ಹೆಸರಿನಲ್ಲಿಯೂ ಮುಸ್ಲಿಂ ದ್ವೇಷವನ್ನು ಪ್ರಚೋದಿಸಿ ಮತ ಕೇಳಲು ಮೋದಿ ಯತ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಎಲ್ಲಿ ಹೇಳಿದೆ ರಾಮಂದಿರಕ್ಕೆ ಬೀಗ ಹಾಕ್ತೀವಿ ಅಂತ? ಇಂತಹ ಹಸಿ ಹಸಿ ಸುಳ್ಳನ್ನು ಹೇಳಿ ಅಧಿಕಾರಕ್ಕೆ ಬರೋ ಪರಿಸ್ಥಿತಿ ಈಗ ಮೋದಿಗೆ ಬಂದಿದೆ. ಈ ರೀತಿ ಹೇಳಿ, ಜನರನ್ನು ದಾರಿ ತಪ್ಪಿಸೋ ಕೆಲಸವನ್ನು ಮೋದಿ ಮಾಡ್ತಿದ್ದಾರೆ.

ನಾಲ್ಕನೇ ಸುಳ್ಳು: ಕಾಂಗ್ರೆಸ್‌ನವರು ಹೇಳ್ತಾರೆ, ನಾವೇನಾದ್ರೂ ಅಧಿಕಾರಕ್ಕೆ ಬಂದ್ರೆ ರದ್ದು ಮಾಡಿರೋ ಆರ್ಟಿಕಲ್‌ 370ಯನ್ನು ಮತ್ತೊಮ್ಮೆ ತರ್ತೀವಿ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ ರದ್ದು ಮಾಡಿರೋ ತ್ರಿವಳಿ ತಲಾಖ್‌ ಅನ್ನೂ ಕೂಡ ಕಾಂಗ್ರೆಸ್‌ ಪಕ್ಷ ವಾಪಸ್‌ ತರುತ್ತೆ, ಕಿಸಾನ್‌ ಸಮ್ಮಾನ ಮೂಲಕ ರೈತರಿಗೆ ಕೊಡ್ತಾ ಇರೋ ಹಣವನ್ನೂ ಕೂಡ ಕಾಂಗ್ರೆಸ್‌ ನಿಲ್ಲಿಸುತ್ತೆ. ಜನರಿಗೆ ಕೊಡ್ತಾ ಇರೋ ಉಚಿತ ಪಡಿತರವನ್ನೂ ರದ್ದು ಮಾಡೋದಾಗಿ ಕಾಂಗ್ರೆಸ್‌ ಹೇಳಿದೆ” ಅಂತ ಮೋದಿ ಸುಳ್ಳು ಭಾಷಣವನ್ನು ಸಾವಿರಾರು ಜನರ ಮುಂದೆ ಮಾಡಿದ್ದಾರೆ.

ಐದನೇ ಸುಳ್ಳು: “ಪ್ರತಿಪಕ್ಷಗಳು ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ನೀಡಲು ಯೋಜಿಸುತ್ತಿವೆ. ಕಾಂಗ್ರೆಸ್‌ನವರು ವೋಟ್‌ ಜಿಹಾದ್‌ ಕೇಳ್ತಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ ಸರ್ಕಾರದ ಜನ 261 ಮುಂಬೈ ದಾಳಿಯ ಆತಂಕವಾದಿಗಳಿಗೆ ಕ್ಲಿನ್‌ ಚಿಟ್‌ ಕೊಟ್ಟಿದೆ, ಕಾಂಗ್ರೆಸ್‌ ಪಾಕಿಸ್ತಾನದೊಂದಿಗೆ ಏನೋ ಸಂಬಂಧ ಹೊಂದಿದೆ ” ಅಂತ ಮೋದಿ ಆರೋಪಿಸಿದ್ದಾರೆ.

ಆದ್ರೆ ಇದರ ರಿಯಾಲಿಟಿನೇ ಬೇರೆ ಇದೆ. ಇದೇ ಬಿಜೆಪಿ ವಾಷಿಂಗ್‌ ಮಷಿನ್‌ಗೆ ಸೇರಿದ 20ಕ್ಕೂ ಹೆಚ್ಚು ಭ್ರಷ್ಟ ನಾಯಕರಿಗೆ ಬಿಜೆಪಿ ಕ್ಲಿನ್‌ ಚಿಟ್‌ ಕೊಟ್ಟಿದೆ. ಇಡೀ ದೇಶದ ಜನರ ಮುಂದೆ ಮೋದಿ ಆಡಳಿತ ಹೇಗಿದೆ ಅನ್ನೋದನ್ನ ಒಂದಿಷ್ಟು ಪತ್ರಕರ್ತರು ಜನರ ಮುಂದೆ ತೆರೆದಿಟ್ಟರು. ಜನರ ದುಡ್ಡನ್ನ ನುಂಗಿ ನೀರು ಕುಡಿದ ಭ್ರಷ್ಟರನ್ನ ಮೋದಿ ಸಾಕಿ ಸಾಲಹುತ್ತಾ ಇದ್ದಾರೆ. ಕಾಂಗ್ರೆಸ್‌ ಪಾಕಿಸ್ತಾನದ ಜೊತೆ ಸಂಬಂಧ ಹೊಂದಿದೆ ಅನ್ನೋದಕ್ಕೆ ಮೋದಿ ಬಳಿ ಸಾಕ್ಷಿ ಆಧಾರಗಳು ಏನಿದೆ? ಅಲ್ಪಸಂಖ್ಯಾತರ ಪರ ಮಾತಾಡಿದ್ರೆ, ಅಲ್ಪಸಂಖ್ಯಾತರಿಗೆ ತೊಂದರೆ ಆದ್ರೆ ಅದನ್ನ ನಿಭಾಯಿಸಿದ್ರೆ, ಅವರು ಪಾಕಿಸ್ತಾನಿ ಅಂತ ಆಗುತ್ತಾ ? ಇನ್ನು ಇದೇ ಪುಲ್ವಾಮ ಗಡಿಯಲ್ಲಿ 300 ಕೆಜಿ ಆರ್‌ಡಿಎಕ್ಸ್‌ ಹೇಗೆ ಬಂತು ಅನ್ನೋ ಬಗ್ಗೆ ಮೋದಿ ಬಳಿ ಉತ್ತರ ಇಲ್ಲ.

ನಮಗೆ ಬೇಕಾದ ಪ್ರಧಾನಿ ಜನರ ಕಷ್ಟಗಳ ಬಗ್ಗೆ ಮಾತಾಡಬೇಕು. ಆ ಕಷ್ಟ ಕಡಿಮೆ ಮಾಡೋ ಯೋಜನೆಗಳ ಬಗ್ಗೆ ಮಾತಾಡಬೇಕು. ದೇಶವನ್ನ ಉದ್ಧಾರ ಮಾಡೋದರ ಬಗ್ಗೆ ಮಾತಾಡಬೇಕು. ಆದ್ರೆ ನಮಗೆ ಸಿಕ್ಕಿರೋ ಪ್ರಧಾನಿ ಮಾತ್ರ ಮಂಗಲಸೂತ್ರ, ಮುಸ್ಲೀಮರು, ಕಾಂಗ್ರೆಸ್‌ ಗೆದ್ರೆ, ಪಾಕಿಸ್ತಾನಕ್ಕೆ ಖುಷಿ ಆಗುತ್ತೆ ಅಂತ ಬೇಡದೇ ಇರೋ ವಿಷಯಗಳ ಬಗ್ಗೆಯೇ ಮಾತಾಡ್ತಾ ಇದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X