ಜಾರ್ಖಂಡ್ | ಹಿಂದೂಗಳಿಗೆ ಮುಸ್ಲಿಮರ ಟೋಪಿ ಧರಿಸಿ, ಸಭೆಯಲ್ಲಿ ಕುಳ್ಳಿರಿಸಿಕೊಂಡ ಬಿಜೆಪಿ ಮುಖಂಡರು!

Date:

Advertisements

ಲೋಕಸಭಾ ಚುನಾವಣೆಯ ಮೂರು ಹಂತದ ಮತದಾನ ಈಗಾಗಲೇ ದೇಶದಲ್ಲಿ ಮುಗಿದಿದೆ. ಇನ್ನು, ನಾಲ್ಕು ಹಂತಗಳ ಮತದಾನವಷ್ಟೇ ಬಾಕಿ ಇದೆ. ಈಗಾಗಲೇ ಮುಗಿದಿರುವ ಮತದಾನಗಳು ಬಿಜೆಪಿಗೆ ಸೋಲಿನ ಆತಂಕವನ್ನು ಹೆಚ್ಚಿಸಿವೆ.

ಈ ಆತಂಕ ಪ್ರಧಾನಿ ನರೇಂದ್ರ ಮೋದಿ ಅವರ ದ್ವೇಷ ಭಾಷಣದಲ್ಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಮೋದಿ ಅವರು ನಿರಂತರವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ವಿರುದ್ಧ ದ್ವೇಷಪೂರಿತ ಸುಳ್ಳು ಭಾಷಣಗಳನ್ನು ಮಾಡುತ್ತಲೇ ಇದ್ದಾರೆ. ಅಲ್ಲದೇ, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟೀಮ್ ಇಂಡಿಯಾದಲ್ಲಿ ಎಲ್ಲ ಮುಸ್ಲಿಮರಿಗೆ ಅವಕಾಶ ಸಿಗಲಿದೆ ಎಂಬ ಕೀಳುಮಟ್ಟದ ಭಾಷಣ ಕೂಡ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಎಲ್ಲ ಬೆಳವಣಿಗೆಯ ನಡುವೆಯೇ, ಜಾರ್ಖಂಡ್‌ನ ಬಿಜೆಪಿ ಮುಖಂಡರು ಮುಸ್ಲಿಂ ಸಮುದಾಯದೊಂದಿಗೆ ಸಂವಾದ ನಡೆಸಲು ಸಭೆಯೊಂದನ್ನು ಆಯೋಜಿಸಿದ್ದರು. ಆದರೆ, ಈ ಸಭೆಗೆ ಹೆಚ್ಚಿನ ಮುಸ್ಲಿಮರು ಬಾರದಿದ್ದಕ್ಕೆ, ಕೆಲವು ಹಿಂದೂಗಳಿಗೆ ಮುಸ್ಲಿಮರ ಟೋಪಿ ಧರಿಸುವಂತೆ ಮಾಡಿ, ಪೇಚಿಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಇದು ಈಗ ದೊಡ್ಡಮಟ್ಟದ ವಿವಾದಕ್ಕೂ ಕಾರಣವಾಗಿದೆ.

Advertisements

ಈ ಎಲ್ಲ ವಿಚಾರವನ್ನು ಬಯಲಿಗೆ ಎಳೆದದ್ದು N4 NEWS BHARAT ಎನ್ನುವ ಜಾರ್ಖಂಡ್‌ನ ರಾಂಚಿಯ ಸ್ಥಳೀಯ ಯೂಟ್ಯೂಬ್‌ ಚಾನೆಲ್. ರಾಂಚಿಯ N4 ನ್ಯೂಸ್‌ನ ವೈರಲ್ ಕ್ಲಿಪ್ ಅನ್ನು ಆಲ್ಟ್‌ನ್ಯೂಸ್‌ನ ಪತ್ರಕರ್ತ ಮೊಹಮ್ಮದ್ ಝುಬೇರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ವೇದಿಕೆಯೊದಗಿಸಿದೆ.

ತಮ್ಮ ಟ್ವೀಟ್‌ನಲ್ಲಿ ಮೊಹಮ್ಮದ್ ಝುಬೇರ್ ಅವರು ವಿಡಿಯೋವನ್ನು ಹಂಚಿಕೊಳ್ಳುತ್ತಾ, “ತಮ್ಮ ಸಭೆಗೆ ಬಿಜೆಪಿ ನಾಯಕರು ಮುಸ್ಲಿಮರಂತೆ ವೇಷ ಧರಿಸಿ ಹಿಂದೂಗಳನ್ನು ಒಟ್ಟುಗೂಡಿಸಿದ್ದಾರೆ” ಎಂದು ತಿಳಿಸಿದ್ದಾರೆ.

BJP 36

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಂಚಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಜಯ್ ಸೇಠ್ ಅವರು ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಮುಸ್ಲಿಂ ಸಮುದಾಯದ ಬೆಂಬಲವೂ ಬೇಕು ಎಂಬ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಸಭೆಯನ್ನು ಆಯೋಜಿಲಾಗಿತ್ತು. ಈ ಸಭೆಗೆ ಮುಖ್ಯ ಅತಿಥಿಯಾಗಿ ಆರು ಬಾರಿ ಶಾಸಕರಾಗಿದ್ದ ಸಿ ಪಿ ಸಿಂಗ್ ಕೂಡ ಭಾಗವಹಿಸಿದ್ದರು.

ಈ ಸಭೆಯಲ್ಲಿ ಸೇರಿದವರ ಬಗ್ಗೆ N4 ನ್ಯೂಸ್‌ನ ಪ್ರತಿನಿಧಿಗಳು ಬಿಜೆಪಿ ಮುಖಂಡರಲ್ಲಿ ಕೇಳಿದಾಗ, “ಇಲ್ಲಿ ಭಾಗವಹಿಸಿದ್ದ ಎಲ್ಲರೂ ಮುಸ್ಲಿಮರು. ಕೆಲವರು ಟೋಪಿ ಧರಿಸಿದ್ದರು, ಇನ್ನು ಕೆಲವರು ಧರಿಸಿಲ್ಲ. ಇವರೆಲ್ಲರೂ ನರೇಂದ್ರ ಮೋದಿಯವರನ್ನು ಬೆಂಬಲಿಸಲು ಬಂದು ಹಾಜರಾಗಿದ್ದಾರೆ” ಎಂದು ತಿಳಿಸಿದ್ದರು.

ಆ ಬಳಿಕ ಸಭೆಯಲ್ಲಿದ್ದವರೊಂದಿಗೆ ಮಾತನಾಡಿಸಿದಾಗ, ಹೆಸರು ಹಿಂದೂಗಳದ್ದೆಂದು ಗೊತ್ತಾಗಿದೆ. ಅಲ್ಲದೇ, ಅವರ ಕಿಸೆಯಲ್ಲಿದ್ದ ಆಧಾರ್ ಕಾರ್ಡ್‌ ಅನ್ನು ಕೂಡ ಪರಿಶೀಲಿಸಿದ್ದಾರೆ. ಈ ಬಗ್ಗೆ ಟೋಪಿ ಧರಿಸಿದ್ದ ಹಿಂದೂಗಳಲ್ಲಿ N4 ನ್ಯೂಸ್‌ನ ಪ್ರತಿನಿಧಿ ಕೇಳಿದಾಗ, “ನಮಗೇನೂ ಗೊತ್ತಿಲ್ಲ. ನಮ್ಮ ಕಿಸೆಯಲ್ಲಿಟ್ಟಿದ್ದರು. ಅದನ್ನು ತಲೆಯಲ್ಲಿ ಇಟ್ಟುಕೊಳ್ಳಲು ಬಿಜೆಪಿಯವರು ತಿಳಿಸಿದ್ದರು” ಎಂದು ಹೇಳಿಕೆ ನೀಡಿದ್ದಾರೆ.

ಹಿಂದೂಗಳಿಗೆ ಟೋಪಿ ನೀಡುವ ಮೂಲಕ ಬಿಜೆಪಿಯೊಂದಿಗೆ ಮುಸ್ಲಿಮರು ಇದ್ದಾರೆ ಎಂಬುದನ್ನು ತೋರಿಸಲು ಬಿಜೆಪಿ ಮುಖಂಡರು ಯತ್ನಿಸಿದ್ದಾರೆ. ಆ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಜಾರ್ಖಂಡ್‌ನಲ್ಲಿ ಈ ಬೆಳವಣಿಗೆ ಈಗ ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗೂ ವೇದಿಕೆಯೊದಗಿಸಿದೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಈ ಬಗ್ಗೆ ಹಲವು ಮಂದಿ ಬಿಜೆಪಿ ನಾಯಕರ “ಬಿಜೆಪಿಯು ಮತ ಗಳಿಸಲು ಹಿಂದೂಗಳನ್ನೇ ಮುಸ್ಲಿಮರನ್ನಾಗಿ ಬಿಂಬಿಸಲು ಹೊರಟಿದೆ. ಹಿಂದೂಗಳು ಕಷ್ಟದಲ್ಲಿದ್ದಾರೆ ಯಾರಿಂದ ಎಂಬುದು ಈಗ ಅರ್ಥವಾಯಿತಲ್ಲವೇ?” ಎಂದು ಪೋಸ್ಟ್ ಹಾಕುತ್ತಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X