ಸಂದೇಶಖಾಲಿ ಪ್ರಕರಣದಲ್ಲಿ ದೂರು ನೀಡಿದ್ದ ಮೂವರು ಮಹಿಳೆಯರ ಪೈಕಿ ಒಬ್ಬರು ಗುರುವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ವಿರುದ್ಧ ದಾಖಲಿಸಿದ್ದ ದೂರನ್ನು ಹಿಂಪಡೆದಿದ್ದಾರೆ.
“ಖಾಲಿ ಪೇಪರ್‌ಗಳಿಗೆ ಸಹಿ ಹಾಕಲು ಮತ್ತು ಅತ್ಯಾಚಾರದ ದೂರು ದಾಖಲಿಸಲು ಬಿಜೆಪಿ ನನಗೆ ಒತ್ತಡ ಹೇರಿತ್ತು” ಎಂದು ಮಹಿಳೆ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಸಂದೇಶ್‌ಖಾಲಿಯಲ್ಲಿ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದ ಬಿಜೆಪಿ ನಾಯಕ; ವಿಡಿಯೋ ಹಂಚಿಕೊಂಡ ಟಿಎಂಸಿ
“ಪಿಎಂಎವೈಗೆ ನನ್ನ ಹೆಸರನ್ನು ಸೇರಿಸುವ ನೆಪದಲ್ಲಿ ಅವರು (ಬಿಜೆಪಿ ನಾಯಕರು) ನನ್ನ ಸಹಿಯನ್ನು ಕೇಳಿದರು. ನಂತರ, ಲೈಂಗಿಕ ಕಿರುಕುಳದ ದೂರು ನೀಡಲು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು” ಎಂದು ಮಹಿಳೆ ತಿಳಿಸಿದ್ದಾರೆ.
🚨BJP Exposed🚨
Woman withdraws charges against TMC men; says,”BJP forced me to sign blank papers and file rape complaint.”
Basirhat BJP candidate Rekha Patra has alleged that BJP leaders took fake victims to Delhi to meet the president.
Modi should answer.#SandeshkhaliExposed pic.twitter.com/gLmTAxi7GR— People Of Congress (@PplOfCongress) May 9, 2024
“ಟಿಎಂಸಿ ಕಚೇರಿಯೊಳಗೆ ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ತಡರಾತ್ರಿ ಪಕ್ಷದ ಕಚೇರಿಗೆ ಬರುವಂತೆ ನನಗೆ ಯಾರೂ ಎಂದಿಗೂ ಒತ್ತಾಯ ಮಾಡಿಲ್ಲ” ಎಂದು ಮಹಿಳೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇನ್ನು ಸುಳ್ಳು ಆರೋಪಗಳನ್ನು ಹಿಂಪಡೆದ ಬಳಿಕ ತನ್ನ ಮೇಲೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಸಾಮಾಜಿಕ ಬಹಿಷ್ಕಾರ ಹಾಕುವ ಬೆದರಿಕೆಯಿದೆ ಎಂದು ಉಲ್ಲೇಖಿಸಿ ಸಂದೇಶಖಾಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಹೊಸ ದೂರು ದಾಖಲಿಸಿದ್ದಾರೆ.
Woman withdraws rape complaint against TMC leader and said that BJP leaders forced me to sign a blank paper.#GodiMedia #SandeshkhaliExposed #NarendraModi pic.twitter.com/zNa91ouXeL
— Baijuu Nambiar CFP®✋ (@baijunambiar) May 9, 2024
ಸಂದೇಶಖಾಲಿ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅವರ ಕೈವಾಡವಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ ಸ್ಟಿಂಗ್ ಆಪರೇಷನ್ ವಿಡಿಯೋ ಬಹಿರಂಗವಾದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ.
“ಇಲ್ಲಿ ಯಾವುದೇ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳಗಳು ನಡೆದಿಲ್ಲ. ಪಕ್ಷದ ಹಿರಿಯ ನಾಯಕ ಸುವೇಂದು ಅಧಿಕಾರಿ ಅವರ ನಿರ್ದೇಶನದ ಮೇರೆಗೆ ಮಹಿಳೆಯರು ಅಂತಹ ದೂರುಗಳನ್ನು ನೀಡುವಂತೆ ಮನವೊಲಿಸಲಾಗಿದೆ” ಎಂದು ಬಿಜೆಪಿ ನಾಯಕ ಗಂಗಾಧರ್ ಕೋಯಲ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ಆದರೆ ಬಿಜೆಪಿ ಮತ್ತು ಗಂಗಾಧರ್ ಕೋಯಲ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇದನ್ನು ಓದಿದ್ದೀರಾ? ಸಂದೇಶಖಾಲಿ ಪ್ರಕರಣದ ಹಿಂದೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ: ಟಿಎಂಸಿ ಆರೋಪ
ಈ ಹಿಂದೆ ಶಹಜಹಾನ್ ಮತ್ತು ಆತನ ಇಬ್ಬರು ಸಹಾಯಕರು ತಮ್ಮ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದರು. ಈ ಪ್ರಕರಣವನ್ನು ಮುಂದಿಟ್ಟುಕೊಂಡೇ ಸದ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಾರಕ್ಕೆ ಇಳಿದಿದೆ. ಸಂದೇಶಖಾಲಿ ಸಂತ್ರಸ್ತೆಗೆ ಬಿಜೆಪಿ ಟಿಕೆಟ್ ಕೂಡಾ ನೀಡಿದೆ.
ಆದರೆ ಈಗ ಸ್ಟಿಂಗ್ ಆಪರೇಷನ್‌ನಿಂದಾಗಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸುವೇಂದು ಅಧಿಕಾರಿ ಮತ್ತು ಇತರರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.