ತೃಣಮೂಲ ಕಾಂಗ್ರೆಸ್‌ನಿಂದ ಪಶ್ಚಿಮ ಬಂಗಾಳದ ಬಹರಾಮ್‌ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಬೆಂಬಲಿಸಿ ಸೋದರ ಇರ್ಫಾನ್ ಪಠಾಣ್ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ನಾಲ್ಕನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಇರ್ಫಾನ್ ಅವರು ಅಣ್ಣ ಯೂಸುಫ್ ಪಠಾಣ್ ಪರ ಬಹರಾಮ್‌ಪುರ್ ಕ್ಷೇತ್ರಕ್ಕೆ ಆಗಮಿಸಿ ಮತಯಾಚಿಸಿದರು. ಚುನಾವಣೆಯು ಮೇ 13 ರಂದು ನಡೆಯಲಿದೆ.
ರೇಜಿ ನಗರ್, ಬೆಲ್‌ದಂಗಾ ಸೇರಿದಂತೆ ಬಹರಾಮ್‌ಪುರ್ ಕ್ಷೇತ್ರದ ಹಲವು ಪ್ರದೇಶಗಳ ರೋಡ್‌ಶೋನಲ್ಲಿ ಇರ್ಫಾನ್ ಪಠಾಣ್ ಪಾಲ್ಗೊಂಡರು.
ಯೂಸುಫ್ ಪಠಾಣ್ ಪರವಾಗಿ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಬಹರಾಮ್‌ಪುರ ಕ್ಷೇತ್ರದಲ್ಲಿ ಬುಧವಾರ ಪ್ರಚಾರ ಕೈಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಕಾಶ್ ಆನಂದ್ ಗೆ ಅರ್ಧಚಂದ್ರ ಪ್ರಯೋಗ- ಮಾಯಾವತಿಯವರ ಹಿಂದೆ ಕೆಲಸ ಮಾಡಿರುವ ಶಕ್ತಿಗಳು ಯಾವುವು?
ಯೂಸುಫ್ ಅವರು ಬಹರಾಮ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಲೋಕಸಭೆಯ ಆಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಿದ್ದ, ಅಧೀರ್ ಅವರು 1999ರಿಂದ ಈ ಕ್ಷೇತ್ರದಲ್ಲಿ ಸಂಸದರಾಗಿದ್ದಾರೆ.
ಚುನಾವಣಾ ಪ್ರಚಾರದಲ್ಲಿ 2011ರ ಏಕದಿನ ವಿಶ್ವಕಪ್‌ನ ಭಾವಚಿತ್ರಗಳನ್ನು ಬಳಸಿರುವುದಕ್ಕೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ದೂರಿನಲ್ಲಿ, ಯೂಸುಫ್ ಪಠಾಣ್ ಅವರು 2011ರ ವಿಶ್ವಕಪ್ ಗೆಲುವಿನ ಭಾವಚಿತ್ರಗಳನ್ನು ತೋರಿಸುವುದಲ್ಲದೆ, ಬ್ಯಾನರ್ ಹಾಗೂ ಪೋಸ್ಟರ್‌ಗಳಲ್ಲಿ ಭಾವಚಿತ್ರಗಳನ್ನು ಬಳಸಲಾಗುತ್ತಿದೆ ಎಂದು ಪಕ್ಷ ದೂರಿನಲ್ಲಿ ತಿಳಿಸಿದೆ.
