ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಜಿಲ್ಲೆಯು ಕಳೆದ ಬಾರಿಯ 33ನೇ ಸ್ಥಾನದಿಂದ 34ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆಗೆ 28,110 ವಿದ್ಯಾರ್ಥಿಗಳು ಕುಳಿತಿದ್ದರು. ಅವರಲ್ಲಿ 16,168 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ 57.52ರಷ್ಟು ವಿದ್ಯಾರ್ಥಿಗಳ ಉತ್ತೀರ್ಣದೊಂದಿಗೆ ರಾಜ್ಯದಲ್ಲಿ ಬೀದರ್ 33ನೇ ಸ್ಥಾನ ಪಡೆದಿದೆ.
ಬೀದರ್ ಜಿಲ್ಲೆಯು 2023ರಲ್ಲಿ ಶೇ78.73 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 34ನೇ ಸ್ಥಾನ ಬಂದಿತ್ತು. ಈ ಬಾರಿ 34ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಒಂದು ಸ್ಥಾನ ಏರಿಕೆ ಕಂಡಿದೆ. ಆದರೆ ಕಳೆದ ಬಾರಿಗಿಂತ ಶೇ 21.21ರಷ್ಟು ಫಲಿತಾಂಶ ಕುಸಿತವಾಗಿದೆ.
ಒಂಬತ್ತು ಶಾಲೆ ಶೂನ್ಯ ಸಾಧನೆ :
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 78 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿದ್ದು, ಅವುಗಳಲ್ಲಿ ಕಲಬುರಗಿ ವಿಭಾಗದಲ್ಲಿನ 43 ಶಾಲೆಗಳಲ್ಲಿ ಶೂನ್ಯ ಸಾಧನೆಗೈದಿವೆ. ಬೀದರ್ ಜಿಲ್ಲೆಯ ಒಟ್ಟು 9 ಶಾಲೆ ಶೂನ್ಯ ಫಲಿತಾಂಶ ಗಳಿಸಿವೆ.