ತೆಹರಾನ್ನಲ್ಲಿ ವಶಪಡಿಸಿಕೊಳ್ಳಲಾಗಿದ್ದ ಇಸ್ರೇಲಿ ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಇರಾನ್ ಬಿಡುಗಡೆ ಮಾಡಿದೆ. ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಅಧಿಕೃತ ಹೇಳಿಕೆ ನೀಡಿದ್ದು, ನಾವಿಕರು ನಿನ್ನೆ ಸಂಜೆಯೇ ಇರಾನ್ ತೊರೆದಿದ್ದಾರೆ ಎಂದು ಮಾಹಿತಿ ತಿಳಿಸಿವೆ.
ಬಿಡುಗಡೆಯ ಮಾಹಿತಿಯನ್ನು ಹಂಚಿಕೊಂಡಿರುವ ಭಾರತೀಯ ರಾಯಭಾರ ಕಚೇರಿ, ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಭಾಗಿತ್ವದೊಂದಿಗೆ ಭಾರತೀಯರನ್ನು ಬಿಡುಗಡೆ ಮಾಡಿದ್ದಕ್ಕೆ ಇರಾನ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದೆ.
“ಇರಾನ್ನ ಎಂಎಸ್ಸಿ ಕರಾವಳಿಯಲ್ಲಿದ್ದ ಐವರು ಭಾರತೀಯರನ್ನು ಇಂದು ಮಧ್ಯಾಹ್ನ ಬಿಡುಗಡೆ ಮಾಡಲಾಗಿದೆ. ಇರಾನ್ನ ಬಂದಾರ್ ಅಬ್ಬಾಸ್ನಲ್ಲಿನ ಭಾರತೀಯ ದೂತವಾಸ ಕಚೇರಿಯ ಸಮನ್ವಯತೆಯೊಂದಿಗೆ ಈ ಕಾರ್ಯ ನೆರವೇರಿಸಿದ್ದಕ್ಕಾಗಿ ಇರಾನ್ ಅಧಿಕಾರಿಗಳಿಗೆ ನಾವು ಧನ್ಯವಾದ ತಿಳಿಸುತ್ತೇವೆ” ಎಂದು ಇರಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗುರುವಾರದ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ
ಇಸ್ರೇಲಿ ಸಂಬಂಧಿತ ಸರಕು ಹಡಗನ್ನು ಇರಾನ್ನ ನೌಕಾಪಡೆಯ ಅಧಿಕಾರಿಗಳು ಏಪ್ರಿಲ್ 13 ರಂದು ವಶಪಡಿಸಿಕೊಂಡಿತ್ತು. ಬಂಧಿತ 25 ಮಂದಿಯಲ್ಲಿ 17 ಮಂದಿ ನೌಕಾಪಡೆಯ ಸಿಬ್ಬಂದಿಗಳಿದ್ದರು. 17 ಬಂಧಿತರನ್ನು ಏ.18ರಂದು ಬಿಡುಗಡೆಗೊಳಿಸಲಾಗಿತ್ತು.
ಬಂಧಿತರಲ್ಲಿ ಉಳಿದ 11 ಮಂದಿ ಇರಾನ್ನಲ್ಲಿಯೇ ಇದ್ದಾರೆ. ಇರಾನ್ ಹಾಗೂ ಇಸ್ರೇಲ್ ನಡುವೆ ಪ್ರತಿಕಾರದ ದಾಳಿ ನಡೆದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
