ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ

Date:

ಪ್ರಜ್ವಲ್ ಲೈಂಗಿಕ ಪ್ರಕರಣ, ಜೆಡಿಎಸ್ -ಬಿಜೆಪಿ ಜಂಟಿ ಕೃತ್ಯ. ಇದು ಕೇವಲ ಕೃತ್ಯ ಅಲ್ಲ, ಘನಘೋರ ಲೈಂಗಿಕ ಹತ್ಯಾಕಾಂಡ. ಇದನ್ನು ಖಂಡಿಸಬೇಕಾದ್ದು ಎಲ್ಲ ಮಾನವಂತರ ಕೆಲಸ. ಆದರೆ, ಕೆಲ ನೀಚರು ಜಾತಿಗೆ ಕಟ್ಟುಬಿದ್ದು ಪ್ರಜ್ವಲ್ ಪ್ರಕರಣವನ್ನು ಬಿಟ್ಟು, ದೊಡ್ಡಗೌಡರಿಗೂ ಇದಕ್ಕೂ ಸಂಬಂಧವಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿರುವುದು- ಅವರ ಜಾತಿಗೆ, ಮಾನವೀಯತೆಗೆ ಮಾಡಿಕೊಂಡ ಅವಮಾನ…

‘ರೇವಣ್ಣ ನಮ್ಮ ಪಕ್ಷದ ಶಾಸಕ, ನನ್ನ ಸಹೋದರ. ಹಾಗಾಗಿ, ಅವರ ಪರವಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ’ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.

- Advertisement -

ಇದೇ ಸ್ವಾಮಿಯವರು ಪ್ರಜ್ವಲ್ ಪ್ರಕರಣ ಹೊರಬಂದಾಗ, ಗೌಡರ ಕುಟುಂಬದಿಂದ ಮೊದಲ ಪ್ರತಿಕ್ರಿಯೆಯಾಗಿ, ‘ನಮ್ಮ ಕುಟುಂಬವೇ ಬೇರೆ, ರೇವಣ್ಣರ ಕುಟುಂಬವೇ ಬೇರೆ’ ಎಂದು ಆ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಹೋಗದೆ, ದೂರ ಉಳಿದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಅಷ್ಟೇ ಅಲ್ಲ, ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣನವರನ್ನು ಜಾತ್ಯತೀತ ಜನತಾದಳದಿಂದ ಅಮಾನತು ಮಾಡಿದ್ದರು. ಪಕ್ಷಕ್ಕೆ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಂಡಿದ್ದರು.

ಪ್ರಕರಣ ಬಯಲಾಗಿ ಇಲ್ಲಿಗೆ ಹದಿನೈದು ದಿನಗಳಾದರೂ, ಪ್ರಜ್ವಲ್-ರೇವಣ್ಣ ಲೈಂಗಿಕ ಹಗರಣ ಕುರಿತು ಗೌಡರ ಕುಟುಂಬ ಮಾತನಾಡದೆ, ಮೌನಕ್ಕೆ ಜಾರಿದೆ. ಬೇರೆ ಯಾರು ಮಾತನಾಡದಿದ್ದರೂ ಪರವಾಗಿಲ್ಲ, ಹಿರಿಯ ರಾಜಕಾರಣಿ ಎನಿಸಿಕೊಂಡಿರುವ ದೊಡ್ಡಗೌಡರು ಈ ಬಗ್ಗೆ ಪ್ರತಿಕ್ರಿಯಿಸಬೇಕಿತ್ತು. ಅದು ಅವರ ಜವಾಬ್ದಾರಿಯಾಗಿತ್ತು. ಆದರೆ ಈ ಕ್ಷಣದವರೆಗೂ ಅವರು ಬಾಯಿ ಬಿಟ್ಟಿಲ್ಲ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವ ಆರೋಪವಾಗಿದೆ.

ಗೌಡರ ಕುಟುಂಬ ರಾಜಕಾರಣವನ್ನು ಸರಿಸುಮಾರು ನಲವತ್ತು ವರ್ಷಗಳಿಂದ, ಬಹಳ ಹತ್ತಿರದಿಂದ ಕಂಡವರು, ‘ಇದರಲ್ಲೇನು ವಿಶೇಷವಿಲ್ಲ. ಅವರ ಕುಟುಂಬ ಇರುವುದೇ ಹಾಗೆ. ಗೌಡರು ಅಧಿಕಾರದ ಸ್ಥಾನಗಳಿಗೆ ಏರಿದಾಗಲೆಲ್ಲ, ಕುಟುಂಬ ಸದಸ್ಯರು ತಾವೇ ಅಧಿಕಾರದ ಕುರ್ಚಿಯಲ್ಲಿ ಕೂತವರಂತೆಯೇ ವರ್ತಿಸುತ್ತಿದ್ದರು. ಮಕ್ಕಳು-ಮೊಮ್ಮಕ್ಕಳು ಎಲ್ಲದರಲ್ಲೂ ಕೈ ಹಾಕುತ್ತಿದ್ದರು. ಗೌಡರಿಗೆ ಅದು ಅಸಂವಿಧಾನಿಕ ಎನಿಸಲಿಲ್ಲ. ಇದು ತಪ್ಪು ಎಂದು ಯಾರಿಗೂ ಬುದ್ಧಿ ಹೇಳಲಿಲ್ಲ. ಇದು 2006ರ ನಂತರ, ಇನ್ನೊಂದು ಹಂತಕ್ಕೆ ಹೋಯಿತು. ವ್ಯಾಪಾರ-ವಹಿವಾಟು ವಿಸ್ತರಿಸಿತು. ಅಧಿಕಾರ ಚಲಾಯಿಸುವಾಗ, ಆಸ್ತಿ ಮಾಡುವಾಗ, ಹಣ ಹಂಚಿಕೊಳ್ಳುವಾಗ ಮಾತ್ರ ಮೈಕ್ರೋ ಕುಟುಂಬವಾಗತೊಡಗಿತು. ಯಾರು ಹೆಚ್ಚು ಸಂಪತ್ತು ಸಂಗ್ರಹಿಸಿದ್ದಾರೆ ಎನ್ನುವುದರ ಕುರಿತು ಪೈಪೋಟಿಗಿಳಿಯುವಂತೆ ಮಾಡಿತು. ಈಗ ಪ್ರಜ್ವಲ್ ಮೇಲೆ ಬಂದಿರುವ ಆರೋಪಕ್ಕೆ, ಪರವಹಿಸಿ ಮಾತನಾಡುವುದಿರಲಿ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ನಮಗೂ ಅದಕ್ಕೂ ಸಂಬಂಧವಿಲ್ಲವೆಂದು ಮೌನಕ್ಕೆ ಶರಣಾಗಿದ್ದಾರೆ’ ಎಂದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ

ಗೌಡರ ಕುಟುಂಬ ಮೌನಕ್ಕೆ ಶರಣಾಗಿರುವುದು, ಸ್ವಾಮಿಯವರು ಮಾತ್ರ ಎಲ್ಲಕ್ಕೂ ತಲೆ ಕೊಡುವಂತಾಗಿರುವುದು, ಸ್ವತಃ ಸ್ವಾಮಿಯವರಿಗೇ ಸಹಿಸಲಸಾಧ್ಯವಾದ ಸಂಕಟಕ್ಕೆ, ಸಿಟ್ಟಿಗೆ ಕಾರಣವಾಗಿದೆ. ಆದರೆ ಆ ಸಿಟ್ಟನ್ನು ಅವರು, ರಾಜಕೀಯ ಕಡುವೈರಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಮೇಲೆ ಕಿಡಿಕಾರುವ ಮೂಲಕ ಶಮನ ಮಾಡಿಕೊಳ್ಳುತ್ತಿದ್ದಾರೆ. ರೇವಣ್ಣನವರನ್ನು ಬಂಧಿಸಿ, ಜೈಲಿಗೆ ಹಾಕಿದ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ಎಸ್ಐಟಿ ಕ್ರಮವನ್ನು, ಪೆನ್ ಡ್ರೈವ್ ಹಂಚಿಕೆಯನ್ನು, ದೇವರಾಜೇಗೌಡ ಮತ್ತು ಶಿವರಾಮೇಗೌಡರೆಂಬ ಚಿಲ್ಲರೆ ವ್ಯಕ್ತಿಗಳ ಗಳಿಗೆಗೊಂದು ಹೇಳಿಕೆಯನ್ನು ಎಳೆದು ತಂದು ರಾಡಿ ಎಬ್ಬಿಸುತ್ತಿದ್ದಾರೆ. ಜೆಡಿಎಸ್ ಎಂದರೆ ಒಕ್ಕಲಿಗರ ಪಕ್ಷವೆಂದು ಭ್ರಮಿಸಿ, ಜಾತಿ ಜನರನ್ನು ರಾಜ್ಯ ಸರ್ಕಾರದ ವಿರುದ್ಧ ಮೇಲೆ ಎತ್ತಿಕಟ್ಟಲು, ಪ್ರತಿಭಟಿಸಲು ಪ್ರೇರೇಪಿಸುತ್ತಿದ್ದಾರೆ. ತನಿಖೆಯ ದಾರಿ ತಪ್ಪಿಸಲು ಹವಣಿಸುತ್ತಿದ್ದಾರೆ.

ಅಷ್ಟೇ ಅಲ್ಲ, ‘ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಿ’ ಎಂದು ಕುಮಾರಸ್ವಾಮಿಯವರು ಒತ್ತಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ಕಣ್ಣೀರು ಹಾಕಿದ್ದು, ಮಣಿಪುರದಲ್ಲಿ ಹೆಣ್ಣುಮಕ್ಕಳು ಬೆತ್ತಲೆಗೊಳಿಸಿ ಅವಮಾನಿಸಿದ್ದು, ಹತ್ರಾಸ್‌ನಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಪೋಷಕರಿಗೆ ಕೊಡದೆ ಸುಟ್ಟುಹಾಕಿದ್ದು ಮತ್ತು ಬಿಲ್ಕಿಸ್ ಬಾನು ಅತ್ಯಾಚಾರ-ಕೊಲೆ ಪ್ರಕರಣದ ಅಪರಾಧಿಗಳನ್ನು ಬಿಟ್ಟು ಕಳುಹಿಸಿದ್ದಲ್ಲದೆ ಮೆರವಣಿಗೆ ಮಾಡಿ ಮೆರೆದಾಡಿದ್ದು- ಎಲ್ಲವೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ನಡೆದ ಹೀನ ಕೃತ್ಯಗಳು. ಸಿಬಿಐ ಎಂಬ ಸರ್ಕಾರಿ ತನಿಖಾ ಸಂಸ್ಥೆಯನ್ನು ನಗೆಪಾಟಲಿಗೀಡು ಮಾಡಿದ್ದು- ಮೋದಿಯವರ ಮಹಾನ್ ಸಾಧನೆಗಳು!

ಈಗ ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಕೊಡಿ ಎನ್ನುವುದರ ಹಿಂದೆ ಅಡಗಿರುವುದು ಕೂಡ ಇದೇ, ಎಂದು ಯಾರು ಬೇಕಾದರೂ ಊಹಿಸಬಹುದು.

ಲೈಂಗಿಕ ದೌರ್ಜನ್ಯ ಎಸಗಿರುವವರು ಜೆಡಿಎಸ್, ಹೀನ ಕೃತ್ಯವನ್ನು ವಿಡಿಯೋ ಮಾಡಿಕೊಂಡಿರುವವರು ಜೆಡಿಎಸ್, ಆ ವಿಡಿಯೋಗಳು ನನ್ನ ಬಳಿ ಇದೆ ಎಂದು ಹೇಳಿಕೊಂಡವರು ಮತ್ತು ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇನೆಂದು ಹೇಳಿರುವವರು ಬಿಜೆಪಿ. ಅಂದರೆ ಇದು ಜೆಡಿಎಸ್ ಮತ್ತು ಬಿಜೆಪಿಯ ಜಂಟಿ ಕೃತ್ಯ. ಇದು ಕೇವಲ ಕೃತ್ಯ ಅಲ್ಲ, ಘನಘೋರ ಲೈಂಗಿಕ ಹತ್ಯಾಕಾಂಡ.

ಇಂತಹ ಲೈಂಗಿಕ ಹತ್ಯಾಕಾಂಡವನ್ನು ಖಂಡಿಸಬೇಕಾದ್ದು ಎಲ್ಲ ಮಾನವಂತರ ಕೆಲಸ. ಆದರೆ, ಕೆಲ ನೀಚರು ಜಾತಿಗೆ ಕಟ್ಟುಬಿದ್ದು ಪ್ರಜ್ವಲ್ ಪ್ರಕರಣವನ್ನು ಬಿಟ್ಟು, ದೊಡ್ಡಗೌಡರಿಗೂ ಇದಕ್ಕೂ ಸಂಬಂಧವಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿರುವುದು- ಒಕ್ಕಲಿಗ ಜಾತಿಗೆ ಹಾಗೂ ಮಾನವೀಯತೆಗೆ ಮಾಡಿದ ಅಪಮಾನ. ಹಾಗೆಯೇ ಸತ್ಯ ಹೇಳಬೇಕಾದ, ಸಂತ್ರಸ್ತೆಯರ ಪರ ನಿಲ್ಲಬೇಕಾದ ಸುದ್ದಿ ಮಾಧ್ಯಮಗಳು ಕೂಡ, ಜನರನ್ನು ದಾರಿ ತಪ್ಪಿಸುತ್ತಿರುವುದು ದುರಂತ.

ಇದನ್ನು ಓದಿದ್ದೀರಾ?: ಗುಜರಾತಿನ ವ್ಯಾಪಾರಿಗಳ ಕೈಗೆ ಕೋಲು: ಇದಲ್ಲವೇ ದೇವೇಗೌಡರ ದುರಂತ?

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೂಡ ಕೊಳಕು ರಾಜಕಾರಣವನ್ನು ಬದಿಗಿಟ್ಟು, ನೊಂದ ನೂರಾರು ಸಂತ್ರಸ್ತೆಯರನ್ನು ತಮ್ಮ ಮನೆಯವರೆಂದು ಭಾವಿಸಿ, ಅವರ ಪರ ನಿಂತು ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ, ಹೆಣ್ಣು ಕುಲಕ್ಕೆ ಎಸಗಿದ ಅಕ್ಷಮ್ಯ ಅಪರಾಧವೆಂದು ಇತಿಹಾಸದಲ್ಲಿ ದಾಖಲಾಗಲಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...

ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!

ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು....