2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಹಾರಾಷ್ಟ್ರವು ಬಹಳ ಮುಖ್ಯವಾದ ರಾಜ್ಯವಾಗಿದೆ. ಒಟ್ಟು 48 ಲೋಕಸಭಾ ಸ್ಥಾನಗಳಿದ್ದು, ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಈ ರಾಜ್ಯ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಎಲ್ಲ ಪಕ್ಷಗಳು ರಾಜ್ಯದಲ್ಲಿ ತಮ್ಮ ಸಂಪೂರ್ಣ ಶಕ್ತಿಯನ್ನು ಹಾಕಿವೆ. ಮಹಾರಾಷ್ಟ್ರದಲ್ಲಿ 5 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅದರಲ್ಲಿ 3 ಹಂತಗಳು ಪೂರ್ಣಗೊಂಡಿವೆ.
ಮೇ 13ರಂದು ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟ್ರದ ನಂದುರ್‌ಬಾರ್‌ಗೆ ಆಗಮಿಸಿ ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳನ್ನು ತೀವ್ರವಾಗಿ ಗುರಿಯಾಗಿಸಿ ತಮ್ಮ ಸುಳ್ಳು ಭಾಷಣಗಳನ್ನು ಸುರಿಸಿದ್ದಾರೆ. ಇದಕ್ಕೂ ಮುನ್ನ “ಇಂದು ಅಕ್ಷಯ ತೃತೀಯ ಹಬ್ಬ. ಆದ್ದರಿಂದ ಇಂದು ನಾನು ದೇಶದ ಜನರ, ಮತ್ತು ವಿಶೇಷವಾಗಿ ರೈತರನ್ನು ಅಭಿನಂದಿಸುತ್ತೇನೆ. ಇಂದು ಎಷ್ಟೋ ಮಂದಿ ನನ್ನನ್ನು ಆಶೀರ್ವದಿಸಲು ಬಂದಿದ್ದೇನೆ. ಅಕ್ಷಯ ತೃತೀಯದ ಆಶೀರ್ವಾದವೂ ಅಪರಿಮಿತವಾಗಿದೆ. ಇಂದು ನಾವು ಪಡೆಯುವ ಆಶೀರ್ವಾದಗಳು ಶಾಶ್ವತವಾಗುತ್ತವೆ. ಇದರರ್ಥ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲಿದೆ” ಎಂದು ಪ್ರಧಾನಿ ಭವಿಷ್ಯ ನುಡಿದಿದ್ದರು.
19:22-21:51 “ನಾನು ಕಾಂಗ್ರೆಸ್ ನಂತಹ ರಾಜಮನೆತನದಿಂದ ಬಂದವನಲ್ಲ. ನಾನು ಬಡತನದಲ್ಲಿ ಬೆಳೆದಿದ್ದೇನೆ. ನೀವು ಇಲ್ಲಿ ಎಷ್ಟು ಕಷ್ಟ ಅನುಭವಿಸಿದ್ದೀರಿ ಎಂದು ನನಗೆ ತಿಳಿದಿದೆ. ದೀನದಲಿತ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇವೆ ಸಲ್ಲಿಸುವ ಬದ್ಧತೆಯಿಂದ ಬಂದಿದ್ದೇನೆ. ನೀರು ಮತ್ತು ವಿದ್ಯುತ್‌ನಂತಹ ಮೂಲ ಸೌಕರ್ಯಗಳ ಕೊರತೆ ಸೇರಿದಂತೆ ಇಲ್ಲಿಯ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಸವಾಲುಗಳನ್ನು ಕಂಡುಕೊಂಡಿದ್ದೇನೆ. ಹಾಗಾಗಿ ಈ ಸವಾಲುಗಳನ್ನು ಎದುರಿಸಲು ಪ್ರತಿ ಮನೆಗೆ ಮನೆ, ನೀರು ಮತ್ತು ವಿದ್ಯುತ್ ಒದಗಿಸುವ ಬದ್ಧತೆಯನ್ನು ಹೊಂದಿದ್ದೇನೆ. ನಂದೂರ್‌ಬಾರ್‌ನಲ್ಲಿ ಒಂದೂವರೆ ದಶಲಕ್ಷಕ್ಕೂ ಹೆಚ್ಚು ಬಡ ಜನರಿಗೆ ಅಗತ್ಯ ಸೌಲಭ್ಯಗಳ ಜತೆಗೆ ಪಿಎಂ ವಸತಿಯನ್ನು ಒದಗಿಸಲಾಗಿದೆ” ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ನಮ್ಮ ಪ್ರಧಾನಿಗೆ ಇಲ್ಲಿಯ ಬುಡಕಟ್ಟು ಸಮುದಾಯ ಕಣ್ಣಿಗೆ ಬಿದ್ದಿರಲೇ ಇಲ್ಲವೆ?. ಪಿಎಂ ವಸತಿ ಯೋಜನೆಯ ಬಗ್ಗೆ ಅಂಕಿ-ಅಂಶ ನೀಡುವ ಮೋದಿಗೆ ಈ ಸಮುದಾಯಗಳ ಲೆಕ್ಕ ಯಾಕಿಲ್ಲ? ಈಗ ಆಶ್ವಾಸನೆ ಕೊಡುತ್ತಿರುವ ಮೋದಿಜಿ ಹತ್ತು ವರ್ಷಗಳಿಂದ ಯಾವ ದೇಶಗಳ ಕುರಿತು ಅಧ್ಯಯನ ಮಾಡುತ್ತಿದ್ದರು. ನಮ್ಮ ದೇಶ ಈಗಲೂ ಕೂಡಾ ಬಡತನದಲ್ಲಿಯೇ ಇರುವುದಾದರೆ, ತಳ ಸಮದಾಯಗಳು ಇಂದಿಗೂ ವಸತಿ ಹಕ್ಕುಪತ್ರಗಳಿಗಾಗಿ ಅಲೆಯುತ್ತಿರುವುದಾದರೆ, ಮೋದಿಯ ಅಂಕಿ ಅಂಶಗಳ ಮನೆಗಳು ಹಾಗಾದರೆ ಎಲ್ಲಿ ನಿರ್ಮಾಣ ಆಗಿವೆ, ಆ ಸವಲತ್ತುಗಳನ್ನು ಯಾರು ಪಡೆದಿದ್ದಾರೆ.
ಇರುಳ ಸಮುದಾಯ, ಬುಡಕಟ್ಟು ಸಮುದಾಯಗಳು ಬಹುತೇಕ ರಾಜ್ಯಗಳಲ್ಲಿ ಇಂದಿಗೂ ಪಕ್ಕಾ ಮನೆಗಳು, ರಸ್ತೆಗಳು, ಕುಡಿಯುವ ನೀರು ಸರಬರಾಜು ಅಥವಾ ಸಾರಿಗೆ ಸೌಲಭ್ಯಗಳು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ಇಂದಿಗೂ ಭೀಕರ ಪರಿಸ್ಥಿತಿಯಲ್ಲಿ ವಾಸಿಸುತ್ತಿವೆ. ಭಾರತದ 140 ಕೋಟಿ ಜನರು ನನ್ನ ಜನರು, ನನ್ನ ಕುಟುಂಬ ಎನ್ನುವ ಮೋದಿಗೆ ಒಂದೂವರೆ ದಶಲಕ್ಷ ಒಂದು ಸಂಖ್ಯೆಯೇ?
ಇನ್ನು ಅಭಿವೃದ್ಧಿ ಹೆಸರಿನಲ್ಲಿ ಅಂತಹ ಕುಟುಂಬಗಳನ್ನು ಒಕ್ಕಲೆಬ್ಬಿಸುತ್ತಾರೆ. ಸಂತ್ರಸ್ತರಿಗೆ ಹೊಸ ಮನೆಗಳು ಮತ್ತು ಉತ್ತಮ ಜೀವನದ ಬಗ್ಗೆ ನೀಡಿದ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿಯುತ್ತವೆಯೇ ಹೊರತು ಏನೂ ಬದಲಾವಣೆಗಳಾಗುವುದಿಲ್ಲ. ಈವರೆಗೆ ಆಗಿಲ್ಲ ಕೂಡಾ. ಹೀಗಿರುವಾಗ ನಮ್ಮ ಮೋದಿಜಿ ʼಒಂದೂವರೆ ದಶಲಕ್ಷಕ್ಕೂ ಹೆಚ್ಚು ಬಡ ಜನರಿಗೆ ಅಗತ್ಯ ಸೌಲಭ್ಯಗಳ ಜತೆಗೆ ಪಿಎಂ ವಸತಿಯನ್ನು ಒದಗಿಸಲಾಗಿದೆʼ ಎಂದು ಬೊಗಳೆ ಬಿಡುವುದಾದರೂ ಏಕೆ?
24:45-25:30 “ಇದಲ್ಲದೆ, ಕುಡಗೋಲು ಕೋಶ ರಕ್ತಹೀನತೆಯನ್ನು ನಿರ್ಮೂಲನೆ ಮಾಡಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಯು ಗಮನ ಹರಿಸಿದೆ. ಕಾಂಗ್ರೆಸ್ ಎಂದಿಗೂ ಬುಡಕಟ್ಟು ಸಹೋದರ ಸಹೋದರಿಯರ ಬಗ್ಗೆ ಕಾಳಜಿ ವಹಿಸಿಲ್ಲ. ಕುಡಗೋಲು ಕೋಶ ರಕ್ತಹೀನತೆ ಬುಡಕಟ್ಟು ಪ್ರದೇಶಗಳಲ್ಲಿ ದೊಡ್ಡ ಬೆದರಿಕೆಯಾಗಿದೆ. ಆದರೆ ಕಾಂಗ್ರೆಸ್ ಈ ರೋಗದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಕುಡಗೋಲು ಕೋಶ ರಕ್ತಹೀನತೆಯನ್ನು ಬೇರುಗಳಿಂದ ನಿರ್ಮೂಲನೆ ಮಾಡುವ ಅಭಿಯಾನವನ್ನು ಬಿಜೆಪಿ ಪ್ರಾರಂಭಿಸಿದೆ. ಆದ್ದರಿಂದ ಯಾವುದೇ ಬಡ ವ್ಯಕ್ತಿಯು ಅಪೌಷ್ಟಿಕತೆಯಿಂದ ಬಳಲಬಾರದು. ಹಾಗಾಗಿ ಈ ಬಗ್ಗೆಯೂ ಕಾಳಜಿ ವಹಿಸಿದ್ದೇವೆ” ಎಂದರು.
2023ರ ಜಾಗತಿಕ ಹಸಿವು ಸೂಚ್ಯಂಕ (ಜಿಎಚ್ಐ) ವರದಿಯಲ್ಲಿ, ಭಾರತವು 125 ದೇಶಗಳಲ್ಲಿ 111ನೇ ಸ್ಥಾನದಲ್ಲಿದೆ. ಇದು ಹಸಿವಿನ ಗಂಭೀರ ಮಟ್ಟವನ್ನು ಸೂಚಿಸುತ್ತದೆ. ಭಾರತದ ಜಿಎಚ್ಐ ಸ್ಕೋರ್ 100-ಪಾಯಿಂಟ್ ಸ್ಕೇಲ್‌ನಲ್ಲಿ 28.7 ಆಗಿದೆ.
ಭಾರತದ 2023 ರ ಜಿಎಚ್ಐ ವರದಿಯು ಸಹ ತೋರಿಸುತ್ತದೆ:
ಮಕ್ಕಳ ಅಪೌಷ್ಟಿಕತೆ ಪ್ರಮಾಣ: 18.7%
ಮಕ್ಕಳ ಬೆಳವಣಿಗೆ ಕುಂಠಿತ ದರ: 35.5%
ಅಪೌಷ್ಟಿಕತೆಯ ಹರಡುವಿಕೆ: 16.6%
ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ: 3.1% ರಷ್ಟಿದೆ.
121 ದೇಶಗಳ ಪೈಕಿ 107ನೇ ಸ್ಥಾನದಲ್ಲಿದ್ದ ಭಾರತ 2022ಕ್ಕೆ ಹೋಲಿಸಿದರೆ 2023ರ ಜಿಎಚ್ಐ (Global Hunger Index) ಶ್ರೇಯಾಂಕದಲ್ಲಿ ನಾಲ್ಕು ಸ್ಥಾನ ಕುಸಿತ ಕಂಡಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ದೇಶಗಳು ಭಾರತಕ್ಕಿಂತ ಉನ್ನತ ಸ್ಥಾನದಲ್ಲಿವೆ.
ವಿಶ್ವಸಂಸ್ಥೆಯ ಪ್ರಕಾರ, ಭಾರತದಲ್ಲಿ 195 ಮಿಲಿಯನ್ ಜನರು ಅಪೌಷ್ಟಿಕತೆಯಿಂದ ಬಳಲುತ್ತಿರುವುದಾಗಿ ತಿಳಿಸಿದೆ. ಹೀಗಿರುವಾಗ ಬಡತನ, ಆರೋಗ್ಯ, ಹಸಿವು, ಪೌಷ್ಠಿಕತೆಯ ಕುರಿತು ಮಾತನಾಡುವ ನೈತಿಕತೆ ಮೋದಿಗೆ ಇದೆಯೇ?.
ಅವರು ಮಾಡಿಲ್ಲ, ನೀವೆಲ್ಲಿ ಮಾಡಿದ್ದೀರಾ ಸ್ವಾಮಿ. ನೀವು ಸುಳ್ಳೋ ಅಥವಾ ವಿಶ್ವ ಸಂಸ್ಥೆ ಅಂಕಿ ಅಂಶಗಳು ಸುಳ್ಳೋ ಮಹಾಪ್ರಭುಗಳೇ?. ವಿಶ್ವ ಸಂಸ್ಥೆಯೇ ಸುಳ್ಳೆಂಬ ರೀತಿಯಲ್ಲಿ ಬೊಗಳೆ ಬಿಡುತ್ತಿದ್ದಾರೆ ನಮ್ಮ ಮೋದಿಜಿ. ಆಗಿದ್ದಲ್ಲಿ ನಮ್ಮ ಪ್ರಧಾನಿಯ ಅಭಿವೃದ್ಧಿ, ಆರೋಗ್ಯದ ಕಾಳಜಿ ಎಲ್ಲಿ ಸೋರಿಕೆಯಾಗುತ್ತಿದೆ?.
“ಕಾಂಗ್ರೆಸ್ ಬುಡಕಟ್ಟು ಕಲ್ಯಾಣವನ್ನು ನಿರ್ಲಕ್ಷಿಸಿದೆ ಮತ್ತು ಸುಳ್ಳು ಮತ್ತು ಸುಳ್ಳು ಭರವಸೆಗಳ ಮೂಲಕ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಸುಳ್ಳಿನ ಕಾರ್ಖಾನೆಯನ್ನೇ ತೆರೆದಿದೆ ಎಂದು ಹೇಳುವ ಮೋದಿಜಿ ಹೇಳುತ್ತಿರುವುದಾದರೂ ಏನು?
46:5-48:35 “ಬಾಳಾಸಾಹೇಬ್ ಠಾಕ್ರೆ ಎಷ್ಟು ಬಳಲುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸುವಾಗ ನನಗೆ ಅನೇಕ ಬಾರಿ ದುಃಖವಾಗುತ್ತದೆ. ನಕಲಿ ಶಿವಸೇನೆಯ ಉದ್ದೇಶಗಳು ಮತ್ತು ಜನರನ್ನು ದಾರಿತಪ್ಪಿಸುವ ನಡೆಗಳಾಗಿದ್ದು, ಈಗ ಈ ನಕಲಿ ಶಿವಸೇನೆ ಜನರು ಬಾಂಬ್ ಸ್ಫೋಟದ ಅಪರಾಧಿಗಳನ್ನು ಸಹ ತಮ್ಮ ಅಭಿಯಾನದಲ್ಲಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಆದ್ದರಿಂದ, ಅವರು ನನ್ನನ್ನು ಜೀವಂತವಾಗಿ ಹೂಳುವ ಕನಸು ಕಾಣುವುದು ದೊಡ್ಡ ವಿಷಯವಲ್ಲ. ಈ ಜನರು ಸಾರ್ವಜನಿಕರ ಬೆಂಬಲ ಮತ್ತು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಅವರ ರಾಜಕೀಯ ನೆಲೆ ಜಾರಿಹೋಗಿದೆ” ಎಂದು ಅವರು ಹೇಳಿದರು.
“ನನ್ನ ಪಕ್ಷ ನಿಮ್ಮ ಪದವಿಯಂತೆ ‘ನಕಲಿ’ ಅಲ್ಲ. ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ 300 ಸ್ಥಾನಗಳನ್ನು ದಾಟಿ ಬಿಜೆಪಿಯನ್ನು ಸೋಲಿಸುತ್ತದೆ. ಉತ್ತಮ ಯೋಜನೆಗಳನ್ನು ಗುಜರಾತ್‌ಗೆ ಕೊಂಡೊಯ್ಯುತ್ತಿದ್ದು, ಮಹಾರಾಷ್ಟ್ರದಲ್ಲಿ ಪರಿಸರ ವಿನಾಶಕಾರಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ” ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಪ್ರಧಾನಿ ನರೇಂದ್ರ ಮೋದಿಯವರ “ನಕಲಿ ಶಿವಸೇನೆ” ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
“ಮಣ್ಣಿನ ಮಕ್ಕಳ ಹಕ್ಕುಗಳಿಗಾಗಿ ಹೋರಾಡಲು ಶಿವಸೇನಾ ಪ್ರಮುಖ್(ಬಾಳ ಠಾಕ್ರೆ) ಸ್ಥಾಪಿಸಿದ ಶಿವಸೇನೆಯನ್ನು ನಕಲಿ ಎಂದು ಕರೆಯಲಾಗುತ್ತಿದೆ. ಅದನ್ನು ನಕಲಿ ಎಂದು ಕರೆಯಲು ನಿಮ್ಮ ಪದವಿ ಅಲ್ಲ ಎಂದು ಠಾಕ್ರೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ? ಮೋದಿಯ ಸುಳ್ಳುಗಳು | ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಸ್ನೇಹ ವೃದ್ಧಿ ಮಾಡಿದ್ದೇನೆ ಎನ್ನುವ ಮೋದೀಜಿಗೆ, ಮುಸ್ಲಿಮರ ಬಗ್ಗೆ ದ್ವೇಷ ಏಕೆ?
37:5-“ರಾಮನ ಸ್ವಂತ ದೇಶದಲ್ಲಿನ ರಾಮ ಮಂದಿರವನ್ನು ಅವರು ರಾಷ್ಟ್ರ ವಿರೋಧಿ ಎಂದು ಕರೆಯುತ್ತಾರೆ. ತುಷ್ಟೀಕರಣಕ್ಕಾಗಿ ಸರ್ಕಾರ ಪ್ರಾಯೋಜಿತ ಇಫ್ತಾರ್ ಕೂಟಗಳನ್ನು ಮಾಡುವವರು, ಭಯೋತ್ಪಾದಕರ ಸಮಾಧಿಗಳನ್ನು ಸುಂದರಗೊಳಿಸುವವರು, ನನ್ನ ರಾಮ ಮಂದಿರಕ್ಕೆ ಹೋಗಿದ್ದಕ್ಕಾಗಿ ಅವರು ನನ್ನನ್ನು ರಾಷ್ಟ್ರ ವಿರೋಧಿ ಎಂದು ಕರೆಯುತ್ತಾರೆ. ಇಂಡಿ ಮೈತ್ರಿ ಕೇವಲ ನನ್ನ ಮೇಲೆ ದಾಳಿ ಮಾಡುತ್ತಿಲ್ಲ. ಬದಲಿಗೆ ನಿಮ್ಮ ನಂಬಿಕೆಯ ಮೇಲೆ ದಾಳಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ಹಿಂದೂ ನಂಬಿಕೆಯನ್ನು ದೇಶದಿಂದ ಅಳಿಸಿಹಾಕಲು ಪಿತೂರಿ ನಡೆಸುತ್ತಿದೆ” ಎಂದು ಸುಳ್ಳುಗಳನ್ನು ಹೇಳುತ್ತಿದ್ದಾರೆ.
29:35-33 ತಮ್ಮ ರಾಜಕೀಯ ಲಾಭಕ್ಕಾಗಿ ಮೀಸಲಾತಿ ನೀತಿಗಳನ್ನು ವಿಭಜಿಸುವ ಮತ್ತು ತಿರುಚುವ ಕಾಂಗ್ರೆಸ್ ತಮ್ಮ ನಾಯಕತ್ವದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಹಕ್ಕುಗಳನ್ನು ಕಸಿಯುತ್ತಿದೆ. ನಾನು ರಕ್ಷಿಸುತ್ತೇನೆ. ‘ವಂಚಿತೋನ್ ಕಾ ಜೋ ಅಧಿಕಾರ್ ಹೈ, ಮೋದಿ ಉಂಕಾ ಚೌಕಿದಾರ್ ಹೈ’. ಮೋದಿ ಬದುಕಿರುವವರೆಗೂ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ” ಎಂದು ಮತ್ತೆ ಮತ್ತೆ ಅದೇ ಸುಳ್ಳುಗಳನ್ನು ಪೋಣಿಸುತ್ತಲೇ ಇದ್ದಾರೆ.