ಹರಿಯಾಣ | ಬಹುಮತ ಇಲ್ಲದಿದ್ದರೂ ಸರ್ಕಾರ ಬೀಳಲ್ಲ ಎನ್ನುತ್ತಿದೆ ಬಿಜೆಪಿ; ಕಾಂಗ್ರೆಸ್‌ ಏನು ಮಾಡುತ್ತಿದೆ?

Date:

Advertisements

ರೈತ ಹೋರಾಟದ ಬಿಸಿಯನ್ನು ಎದುರಿಸಿದ್ದ ಹರಿಯಾಣ ಬಿಜೆಪಿ ಸರ್ಕಾರ, ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ರೈತ ಸಮುದಾಯವೂ ಸೇರಿದಂತೆ ವಿವಿಧ ವರ್ಗಗಳ ಜನರು ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ. ಮೂವರು ಸ್ವತಂತ್ರ ಶಾಸಕರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ, ಎನ್‌ಡಿಎಯಿಂದ ಹೊರನಡೆದಿರುವ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಕೂಡ ಬಿಜೆಪಿ ಸಕ್ಯ ತೆರೆದಿದ್ದು, ಸರ್ಕಾರವನ್ನು ಬೀಳಿಸಲು ಕಾಂಗ್ರೆಸ್‌ ಯಾವುದೇ ಕ್ರಮ ತೆಗೆದುಕೊಂಡರು ಬೆಂಬಲ ನೀಡುವುದಾಗಿ ಘೋಷಿಸಿದೆ.

ಇಂತಹ ಬಿಕ್ಕಟ್ಟುಗಳ ನಡುವೆ, ಮೇ 25ರಂದು ರಾಜ್ಯದ ಎಲ್ಲ 10 ಸ್ಥಾನಗಳಿಗೆ ಲೋಕಸಭಾ ಚುನಾವಣೆ ನಡೆಯಲಿದೆ. ಜೊತೆಗೆ, ಇದೇ ವರ್ಷದ ಅಕ್ಟೋಬರ್‌ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಎದುರಾಗಲಿದೆ. ರಾಜ್ಯದ ಜನರು ಮತ್ತು ಮೈತ್ರಿ ಪಕ್ಷದ ವಿಶ್ವಾಸವನ್ನು ಕಳೆದುಕೊಂಡಿದ್ದರೂ, ವಿಧಾನಸಭೆಯಲ್ಲಿ ಬಹುಮತ ಇಲ್ಲದೇ ಇದ್ದರೂ, ಮುಖ್ಯಮಂತ್ರಿ ನಯಾಬ್ ಸೈನಿ ನೇತೃತ್ವದ ಸರ್ಕಾರ ಭದ್ರವಾಗಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ.

ಬಿಜೆಪಿಯ ವಿಶ್ವಾಸಕ್ಕೆ ಐದು ಕಾರಣಗಳಿವೆ;

Advertisements
  1. ಅವಿಶ್ವಾಸ ಗೊತ್ತುವಳಿ ಮಂಡನೆ ಈಗ ಸಾಧ್ಯವಿಲ್ಲ

ಮಾರ್ಚ್‌ ತಿಂಗಳಿನಲ್ಲಿ ಬಿಜೆಪಿ ಜೊತೆ ಜೆಜೆಪಿ ಮೈತ್ರಿ ಕಳೆದುಕೊಂಡಿತು. ಪರಿಣಾಮ, ಜೆಜೆಪಿಯ 10 ಶಾಸಕರು ಸರ್ಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಹೀಗಾಗಿ, ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 41 ಶಾಸಕರನ್ನು ಮಾತ್ರ ಹೊಂದಿತ್ತು. ವಿಧಾನಸಭೆಯಲ್ಲಿ ಒಟ್ಟು 90 ಸ್ಥಾನಗಳಿದ್ದು, ಸರ್ಕಾರ ರಚಿಸಲು ಬಹುಮತಕ್ಕೆ 46 ಮತಗಳು ಬೇಕಿತ್ತು.

ಹೀಗಾಗಿ, ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಮಾರ್ಚ್ 13 ರಂದು ಸೈನಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತು. ಆದರೆ, ಆರು ಮಂದಿ ಸ್ವತಂತ್ರರು ಮತ್ತು ಹರಿಯಾಣ ಲೋಕಿತ್ ಪಕ್ಷದ (ಎಚ್‌ಎಲ್‌ಪಿ) ಒಬ್ಬ ಶಾಸಕರ ಬೆಂಬಲ ಪಡೆದು, ಸೈನಿ ಅವರು ಧ್ವನಿ ಮತದ ಮೂಲಕ ವಿಶ್ವಾಸ ನಿರ್ಣಯವನ್ನು ಗೆದ್ದರು. ತಮ್ಮ ಸರ್ಕಾರದ ಬಲ 48 ಎಂದು ಹೇಳಿದರು.

ಅದಾಗ್ಯೂ, ಇತ್ತೀಚೆಗೆ, ಮೂವರು ಸ್ವತಂತ್ರರು ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ.

ಆದರೆ, ನಿಯಮಗಳ ಪ್ರಕಾರ, ಒಮ್ಮೆ ಅವಿಶ್ವಾಸ ಮಂಡಿಸಿದರೆ, ಅದಾದ, ಆರು ತಿಂಗಳೊಳಗೆ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಹೀಗಾಗಿ, ಕಾಂಗ್ರೆಸ್‌ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವಿಲ್ಲ. ಆದರೆ, “ಮುಖ್ಯಮಂತ್ರಿ ಸೈನಿ ಅವರ ಸರ್ಕಾರ ಬಹುಮತವನ್ನು ಕಳೆದುಕೊಂಡಿದೆ. ಹೀಗಾಗಿ, ಅವರು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಬೇಕು” ಎಂದು ಹೂಡಾ ಒತ್ತಾಯಿಸಿದ್ದಾರೆ.

  1. ಮಾರ್ಚ್‌ನಲ್ಲಿದ್ದ ಪರಿಸ್ಥಿತಿ ಮತ್ತು ಪ್ರಸ್ತುತ ಸ್ಥಿತಿ

ಇಂದು, ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಸ್ವತಂತ್ರ ಶಾಸಕ ರಂಜಿತ್ ಸಿಂಗ್ ಅವರು ಕ್ರಮವಾಗಿ ಕರ್ನಾಲ್ ಮತ್ತು ಹಿಸಾರ್‌ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಇವರಿಬ್ಬರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಹರಿಯಾಣ ವಿಧಾನಸಭೆಯ ಬಲ 88ಕ್ಕೆ ಇಳಿದಿದೆ.

ಈ ಬಲದಲ್ಲಿ ಬಿಜೆಪಿ ಬಹುಮತ ಸಾಬೀತು ಮಾಡಲು 45 ಮಗಳ ಅಗತ್ಯವಿದೆ. ಅದರೆ, ಖಟ್ಟರ್ ರಾಜೀನಾಮೆಯಿಂದಾಗಿ, ಬಿಜೆಪಿ 40 ಶಾಸಕರನ್ನು ಹೊಂದಿದೆ. ಜೊತೆಗೆ, ಇಬ್ಬರು ಸ್ವತಂತ್ರರು ಮತ್ತು ಎಚ್‌ಎಲ್‌ಪಿ ಶಾಸಕರ ಬೆಂಬಲ ಹೊಂದಿದ್ದು, ಒಟ್ಟು ಮತ 43 ಮಾತ್ರವೇ ಆಗಿದ್ದು, ಇನ್ನೂ 2 ಮತಗಳ ಕೊರತೆ ಇದೆ. ಅದಾಗ್ಯೂ, ಜೆಜೆಪಿಯ 10 ಶಾಸಕರ ಪೈಕಿ 3 ಶಾಸಕರು ತಮ್ಮನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಆ ಮೂರನ್ನು ಪಕ್ಷ ವಿರೋಧಿ ಚಟುವಟಿಕೆ ಮೇಲೆ ಜೆಜೆಪಿ ಅನರ್ಹಗೊಳಿಸಿದರೂ, ಆಗ ಸದಸ್ಯ ಸದನದ ಸದಸ್ಯ ಬಲ 85ಕ್ಕೆ ಕುಸಿಯುತ್ತದೆ ಮತ್ತು ಬಹುಮತ ಸಂಖ್ಯೆ 43ಕ್ಕೆ ಇಳಿಯುತ್ತದೆ. ಸದ್ಯ, ಬಿಜೆಪಿ 43 ಶಾಸಕರ ಬೆಂಬಲವನ್ನು ಹೊಂದಿದೆ.

ಆದರೆ, ಅಡಳಿತ ಪಕ್ಷದ ಹಲವಾರು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

  1. ಸರ್ಕಾರ ರಚನೆಗೆ ಪ್ರತಿಪಕ್ಷಗಳು ಹಕ್ಕು ಚಲಾಯಿಸಬಹುದೇ?

ಸರ್ಕಾರ ರಚನೆಗೆ ಹಕ್ಕು ಸಾಧಿಸಲು ಅದು ಮೊದಲು ರಾಜ್ಯಪಾಲರಿಂದ ಅಪಾಯಿಂಟ್‌ಮೆಂಟ್ ಪಡೆಯಬೇಕು. ಅತಿದೊಡ್ಡ (30 ಶಾಸಕರು) ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ರಾಜ್ಯಪಾಲರ ಭೇಟಿಗೆ ಸಮಯ ಕೇಳಬೇಕಾಗಿದೆ. ಆದರೆ, ಅಂತಹ ಕ್ರಮವನ್ನು ಕಾಂಗ್ರೆಸ್‌ ಇನ್ನೂ ಪ್ರಾರಂಭಿಸಿಲ್ಲ. ಅಂರಹ ಯಾವುದೇ ಕ್ರಮವನ್ನು ಕಾಂಗ್ರೆಸ್ ಕೈಗೊಂಡರೆ, ಅದಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ಜೆಜೆಪಿ ನಾಯಕ ದುಶ್ಯಂತ್ ಚೌತಾಲಾ ಹೇಳಿದ್ದಾರೆ.

ಆದರೆ, ದುಶ್ಯಂತ್ ಅವರ ಮಾತನ್ನು ತಿರಸ್ಕರಿಸಿರುವ ಹೂಡಾ, ‘ದುಶ್ಯಂತ್ ಕೂಡ ರಾಜ್ಯಪಾಲರ ಎದುರು ಹಕ್ಕು ಮಂಡಿಸಬಹುದು’ ಎಂದು ಹೇಳಿದ್ದಾರೆ. “ನಾಲ್ಕೂವರೆ ವರ್ಷಗಳ ಕಾಲ ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಅವರಿದ್ದರು. ಅವರು ಬಿಜೆಪಿಯ ಬಿ-ಟೀಮ್ ಅಲ್ಲದಿದ್ದರೆ, ಅವರೇ ರಾಜ್ಯಪಾಲರನ್ನು ಭೇಟಿ ಮಾಡಬೇಕು. ಅವರ 10 ಶಾಸಕರನ್ನು ಒಗ್ಗಟ್ಟಿನಲ್ಲಿ ಇರಿಸಿಕೊಳ್ಳಬೇಕು. ನಂತರ, ನಾನು ನಮ್ಮವರನ್ನು ಶಾಸಕ ಭರತ್ ಭೂಷಣ್ ಬಾತ್ರಾ ನೇತೃತ್ವದಲ್ಲಿ ರಾಜಭವನಕ್ಕೆ ಕಳುಹಿಸುತ್ತೇನೆ” ಎಂದು ಹೂಡಾ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಜೆಪಿ ಎರಡೂ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ತಮ್ಮ ಶಾಸಕರನ್ನು ಒಗ್ಗೂಡಿಸಿಕೊಂಡು, ಹಕ್ಕು ಚಲಾಯಿಸಿದರೂ ರಾಜ್ಯಪಾಲರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ನಿರ್ದಿಷ್ಟ ಅವಧಿಯೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರೂ, ಕೆಲವು ಜೆಜೆಪಿ ಶಾಸಕರು ಪಕ್ಷಾಂತರ ಮಾಡುವ ಅಥವಾ ಮತದಾನದಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬಿಜೆಪಿ ಮತ್ತೊಮ್ಮೆ ತನ್ನ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗುತ್ತದೆ.

ಜೊತೆಗೆ, ಈಗ ಕಾಂಗ್ರೆಸ್‌ನ ಸಂಪೂರ್ಣ ಗಮನವು ಮೇ 25 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲಿದೆ. ಬಿಜೆಪಿ 2019ರಲ್ಲಿ ಎಲ್ಲ 10 ಸ್ಥಾನಗಳನ್ನು ಗೆದ್ದಿತ್ತು. ಈಗ, ಅವುಗಳನ್ನು ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದೆ.

ಅಕ್ಟೋಬರ್‌ನಲ್ಲಿ ನಡೆಯಲಿರುವ ಹರ್ಯಾಣ ವಿಧಾನಸಭೆ ಚುನಾವಣೆಯೂ ಹತ್ತಿರದಲ್ಲೇ ಇದೆ. ಲೋಕಸಭೆ ಚುನಾವಣೆ ಮುಗಿದ ನಂತರ ಪ್ರತಿಪಕ್ಷಗಳು ಮತ್ತೊಮ್ಮೆ ಬಿಜೆಪಿ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.

  1. ಪರಿಸ್ಥಿತಿಯನ್ನು ಬಿಜೆಪಿ ಹೇಗೆ ನೋಡುತ್ತಿದೆ?

ಹರಿಯಾಣದ ಬಿಜೆಪಿ ನಾಯಕರು ತಮ್ಮ ಸರ್ಕಾರವು ‘ಭದ್ರವಾಗಿದೆ’ ಮತ್ತು ಅಗತ್ಯವಿದ್ದರೆ ‘ಇತರ ಶಾಸಕರು ನಮ್ಮನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ಹೊಂದಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಖಟ್ಟರ್, “ಕಾಂಗ್ರೆಸ್ ಮತ್ತು ಜೆಜೆಪಿ ನಮ್ಮ ಬಗ್ಗೆ ಚಿಂತಿಸಬಾರದು. ಬದಲಾಗಿ, ಅವರು ಮೊದಲು ತಮ್ಮ ಸ್ವಂತ ಮನೆಗಳನ್ನು ಗಟ್ಟಿಯಾಗಿ ಇರಿಸಿಕೊಳ್ಳಬೇಕು. ನಮ್ಮ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ. ಸರ್ಕಾರವು ಮುಂದೆಯೂ ಜನರ ಸೇವೆ ಮಾಡಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಸಂಪೂರ್ಣ ಬಹುಮತವನ್ನು ಗೆಲ್ಲುತ್ತೇವೆ” ಎಂದಿದ್ದಾರೆ.

ವಿಧಾನಸಭಾ ಅಧ್ಯಕ್ಷ ಜಿಯಾನ್ ಚಂದ್ ಗುಪ್ತಾ, ”ಅಧಿಕೃತವಾಗಿ ನನಗೆ ಯಾವುದೇ ಶಾಸಕರಿಂದ ಯಾವುದೇ ಸೂಚನೆ ಬಂದಿಲ್ಲ. ಮೂವರು ಪಕ್ಷೇತರ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಮಾನ್ಯವಾಗಿ, ಅವಿಶ್ವಾಸ ನಿರ್ಣಯವನ್ನು ಮಂಡಿಸಿದಾಗ, ಮತ್ತೊಮ್ಮೆ ಅವಿಶ್ವಾಸ ಮಂಡಿಸಲು ಆರು ತಿಂಗಳು ಕಾಯಬೇಕು. ಆದರೂ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರ ಬಳಸಿ, ಅಗತ್ಯವಿದ್ದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಅವರು ನಮಗೆ ನಿರ್ದೇಶನ ನೀಡಿದರೆ, ನಾನು ಅದನ್ನು ಅನುಸರಿಸುತ್ತೇನೆ” ಎಂದು ಹೇಳಿದ್ದಾರೆ.

  1. ಚುನವಣೆಗಳಲ್ಲಿ ಬಿಜೆಪಿಗೆ ಹಾನಿ?

ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದರೂ, ಜೆಜೆಪಿ ಮತ್ತು ಪಕ್ಷೇತರ ಶಾಸಕರು ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡಬೇಕೆಂದು ಬಯಸುತ್ತಿದ್ದಾರೆ. ಇದು, ಪ್ರಸ್ತುತ ಮತ್ತು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನತ್ತ ಸರ್ವಜನಿಕ ಗ್ರಹಿಕೆಯನ್ನು ಬಲಗೊಳಿಸಬಹುದು. ಜೊತೆಗೆ, ರೈತ ಹೋರಾಟದ ವೇಳೆ ಖಟ್ಟರ್ ಅವರ ಸರ್ಕಾರದ ಎಸಗಿದ ದೌರ್ಜನ್ಯವು ಜನರ ಮನದಲ್ಲಿ ಗಾಸಿಗೊಳಿಸಿದೆ. ಪರಿಣಾಮ, ಬಿಜೆಪಿ ಎರಡೂ ಚುನಾವಣೆಗಳಲ್ಲಿ ಹಾನಿ ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ.

ಮಾಹಿತಿ ಮೂಲ: ಟಿಐಇ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X