ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಮಾಡಿದ 25ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ.
ಮಧ್ಯಾಹ್ನ ಊಟ ಮಾಡಿದ ಕೆಲವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಎಂಟು ಮಂದಿ ಮಕ್ಕಳು ಸೇರಿದಂತೆ 25ಕ್ಕೂ ಅಧಿಕ ಮಂದಿಗೆ ಹೊಟ್ಟೆ ನೋವು, ವಾಂತಿ, ಭೇದಿಯಾಗಿದೆ. ಎಲ್ಲರನ್ನೂ ರಾಮನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಧಶ್ರದ್ಧೆ, ಮೌಢ್ಯ ನಿರ್ಮೂಲನೆಗೆ ಶರಣರು ರಕ್ತ ಹರಿಸಿದರು : ಬಸವಲಿಂಗ ಪಟ್ಟದ್ದೇವರು
“ಬೇಸಿಗೆ ಕಾರಣ ಆಹಾರ ಸೇವಿಸಿದ ನಂತರ ವ್ಯತ್ಯಾಸವಾಗಿದೆ. ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಅಸ್ವಸ್ಥರಾಗಿರುವ ಮಕ್ಕಳಿಗೂ ಯಾವುದೇ ತೊಂದರೆ ಇಲ್ಲ” ಎಂದು ಆರ್‌ಎಂಒ ನಾರಾಯಣಸ್ವಾಮಿ ತಿಳಿಸಿದ್ದಾರೆ.
