ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ 59ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 232 ರನ್‌ಗಳ ಬೃಹತ್ ಗುರಿಯನ್ನು ತಲುಪಲು ಎಡವಿದ ಚೆನ್ನೈ ಸೂಪರ್ ಕಿಂಗ್ಸ್, 35 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
ಗುಜರಾತ್ ಟೈಟನ್ಸ್ ತಂಡವು ತನ್ನ ಆರಂಭಿಕ ಬ್ಯಾಟರ್‌ಗಳಾದ ನಾಯಕ ಶುಭ್‌ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರ ಭರ್ಜರಿ ಅವಳಿ ಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 231 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.
An emphatic batting display backed 🆙 by a comprehensive bowling performance 🙌#GT make it even for the season as they complete a 35 runs win over #CSK 👏
Scorecard ▶️ https://t.co/PBZfdYt4lR#TATAIPL | #GTvCSK pic.twitter.com/ThkkI35ofY
— IndianPremierLeague (@IPL) May 10, 2024
232 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ತಂಡ, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 35 ರನ್‌ಗಳಿಂದ ಸೋಲೊಪ್ಪಿಕೊಂಡಿತು.
232 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಆರಂಭದಲ್ಲೇ ವಿಫಲವಾದ ಚೆನ್ನೈಯ ಆರಂಭಿಕ ಆಟಗಾರ ರಚಿನ್ ರವೀಂದ್ರ(1 ರನ್), ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್ ಕದಿಯಲು ಹೋಗಿ, ಡೇವಿಡ್ ಮಿಲ್ಲರ್ ಅವರ ಅದ್ಭುತ ಡೈವಿಂಗ್ ಥ್ರೋನಿಂದಾಗಿ ರನೌಟ್ ಆದರು. ಥ್ರೋ ಎಸೆತವು ವಿಕೆಟ್ ತಲುಪುವ ಮುನ್ನ ಕ್ರೀಸ್ ತಲುಪಲು ವಿಫಲವಾಗಿ, ಕೂದಲೆಳೆ ಅಂತರದಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ರನೌಟ್ ಆದರು.
ಆ ಬಳಿಕ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಅಜಿಂಕ್ಯ ರಹಾನೆ(1 ರನ್) ಕ್ಯಾಚಿತ್ತು, ನಿರ್ಗಮಿಸಿದರು. ಆ ಬಳಿಕ ಕಪ್ತಾನ ರುತುರಾಜ್ ಗಾಯಕ್ವಾಡ್ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲವಾದ್ದರಿಂದ, ಬೌಂಡರಿ ಲೈನ್‌ನಲ್ಲಿದ್ದ ರಶೀದ್ ಖಾನ್‌ಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.
Highest Opening Partnership for #GT ✅
Equalled Highest Opening Partnership in IPL ✅Courtesy of the centurions, the hosts set a massive 🎯 of 2️⃣3️⃣2️⃣ 👏
A huge #CSK chase coming up next ⏳
Scorecard ▶️ https://t.co/PBZfdYswwj#TATAIPL | #GTvCSK pic.twitter.com/eeLGLcOzyQ
— IndianPremierLeague (@IPL) May 10, 2024
10 ರನ್ ಗಳಿಸಿದ್ದಾಗ ಚೆನ್ನೈ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ 4ನೇ ವಿಕೆಟ್‌ಗೆ ಜೋಡಿಯಾದ ಮೊಯೀನ್ ಅಲಿ ಹಾಗೂ ಡೇರಿಲ್ ಮಿಚೆಲ್ ಉತ್ತಮ ಜೊತೆಯಾಟ ನಡೆಸಿ, ಚೆನ್ನೈಗೆ ಗೆಲುವಿನ ಆಸೆ ಮೂಡಿಸಿದರು. ಈ ಜೋಡಿಯು 109 ರನ್‌ಗಳ ಜೊತೆಯಾಟ ನಡೆಸುತ್ತಿದ್ದಾಗ ದಾಳಿಗಿಳಿದ ಗುಜರಾತ್ ಬೌಲರ್ ಮೋಹಿತ್ ಶರ್ಮಾ, ಡೇರಿಲ್ ಮಿಚೆಲ್ ಅವರ ವಿಕೆಟ್ ಪಡೆದು ಯಶಸ್ಸು ತಂದುಕೊಟ್ಟರು.
ಡೇರಿಲ್ ಮಿಚೆಲ್ ಔಟಾಗುವುದಕ್ಕೂ ಮೊದಲು 34 ಎಸೆತಗಳಲ್ಲಿ 7 ಬೌಂಡರಿ ಹಾಗೂ ಮೂರು ಸಿಕ್ಸರ್‌ನ ನೆರವಿನಿಂದ 64 ರನ್ ಗಳಿಸಿದರು. ಆ ಬಳಿಕ 56 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿದ್ದ ಮೊಯೀನ್ ಅಲಿಯವರ ವಿಕೆಟ್ ಪಡೆಯುವಲ್ಲಿ ಕೂಡ ಮೋಹಿತ್ ಶರ್ಮಾ ಯಶಸ್ವಿಯಾದರು.
ಆ ಬಳಿಕ ಕ್ರೀಸ್‌ಗೆ ಬಂದ ಶಿವಂ ದುಬೆ, ರವೀಂದ್ರ ಜಡೇಜಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ದುಬೆ 21 ರನ್ ಗಳಿಸಿ ಔಟಾದರೆ, ಜಡೇಜಾ 18 ರನ್ ಗಳಿಸಿದರು. ಕೊನೆಯಲ್ಲಿ ಎಂ ಎಸ್ ಧೋನಿ ಬ್ಯಾಟಿಂಗ್‌ಗೆ ಬಂದರಾದರೂ, ಗೆಲುವಿನ ದಡ ತಲುಪಿಸಲು ಅವರಿಗೆ ಸಾಧ್ಯವಾಗಲಿಲ್ಲ. ಧೋನಿ 11 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿಯ ನೆರವಿನಿಂದ 26 ರನ್ ಗಳಿಸಿ, ಔಟಾಗದೆ ಉಳಿದರು. ಕೊನೆಯಲ್ಲಿ ಸಿಎಸ್‌ಕೆ ತಂಡ, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್ ಗಳಿಸಲಷ್ಟೇ ಶಕ್ತವಾಯಿತು. 35 ರನ್‌ಗಳಿಂದ ಸೋತಿತು.
The Helicopter Shot 🚁
A maximum from #CSK‘s Number 7️⃣💥
Watch the match LIVE on @StarSportsIndia and @JioCinema 💻📱#TATAIPL | #GTvCSK pic.twitter.com/2QAN3jPjTb
— IndianPremierLeague (@IPL) May 10, 2024
ಗುಜರಾತ್ ಪರ ಬೌಲಿಂಗ್‌ನಲ್ಲಿ ಮೋಹಿತ್ ಶರ್ಮಾ 3 ವಿಕೆಟ್ ಪಡೆದು ಮಿಂಚಿದರೆ, ರಶೀದ್ ಖಾನ್ ಎರಡು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು. ಸಂದೀಪ್ ವಾರಿಯರ್ ಹಾಗೂ ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಕೊನೆಗೊಳ್ಳದ ಆರ್‌ಸಿಬಿ ಪ್ಲೇ-ಆಫ್ ಕನಸು!
ಚೆನ್ನೈ ವಿರುದ್ಧ ಗುಜರಾತ್ ಟೈಟನ್ಸ್ ಇಂದಿನ ಪಂದ್ಯದಲ್ಲಿ ಗೆದ್ದಿರುವುದರಿಂದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಕೊನೆಗೊಂಡಿಲ್ಲ. ಅದು ಇನ್ನೂ ಜೀವಂತವಾಗಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಚೆನ್ನೈ ಗೆದ್ದಿದ್ದರೆ, ಆರ್‌ಸಿಬಿಯ ಪ್ಲೇ ಆಫ್ ಕನಸು ಬಹುತೇಕ ಅಂತ್ಯವಾಗುತ್ತಿತ್ತು.
Gujarat Titans keep themselves and RCB in the contest for IPL Playoffs. pic.twitter.com/vwmTAMbfD4
— Mufaddal Vohra (@mufaddal_vohra) May 10, 2024
ಆರ್‌ಸಿಬಿ ತಂಡಕ್ಕೆ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಬೆಂಗಳೂರಿನಲ್ಲಿ ಮೇ 12ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಗೂ ಮೇ 18ರಂದು ಚೆನ್ನೈ ವಿರುದ್ಧ ಆರ್‌ಸಿಬಿ ಸೆಣಸಾಡಲಿದೆ. ಇತರೆ ತಂಡಗಳ ಫಲಿತಾಂಶಗಳ ಮೇಲೆ ಕೂಡ ಆರ್‌ಸಿಬಿಯ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ. ಈ ನಡುವೆ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಂಜೆಯ ವೇಳೆ ಮಳೆ ಬರುತ್ತಿರುವುದು, ಆರ್‌ಸಿಬಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.