ಗರ್ಭಾವಸ್ಥೆ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಬಳಕೆ; ನಟಿ ಕರೀನಾ ಕಪೂರ್‌ಗೆ ನೋಟಿಸ್

Date:

Advertisements

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್‌ಗೆ ಮಧ್ಯಪ್ರದೇಶ ಹೈಕೋರ್ಟ್‌ ನೋಟಿಸ್‌ ನೀಡಿದೆ. ಕರೀನಾ ಅವರು ಗರ್ಭಾವಸ್ಥೆ ಕುರಿತು ಬರೆದಿರುವ ‘ಕರೀನಾ ಕಪೂರ್ ಖಾನ್’ಸ್ ಪ್ರೆಗ್ನೆನ್ಸಿ ಬೈಬಲ್: ದಿ ಅಲ್ಟಿಮೇಟ್ ಮ್ಯಾನ್ಯುಯಲ್ ಫಾರ್ ಮಾಮ್ಸ್-ಟು-ಬಿ’ ಪುಸ್ತಕದಲ್ಲಿ ‘ಬೈಬಲ್’ ಪದವನ್ನು ಬಳಸಿದ್ದು, ಅದರ ವಿರುದ್ಧ ವಕೀಲರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಆಧಾರದ ಮೇಲೆ ಅವರಿಗೆ ನೋಟಿಸ್ ನೀಡಲಾಗಿದೆ.

ತಮ್ಮ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಿದ್ದಕ್ಕಾಗಿ, ಕರೀನಾ ಮತ್ತು ಪುಸ್ತಕ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ವಕೀಲ ಕ್ರಿಸ್ಟೋಫರ್ ಆಂಥೋನಿ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ. ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದವನ್ನು ಯಾಕೆ ಬಳಸಲಾಗಿದೆ ಎಂಬುದರ ಕುರಿತು ಉತ್ತರಿಸುವಂತೆ ತನ್ನ ನೋಟಿಸ್‌ನಲ್ಲಿ ಕೇಳಿದೆ.

ಆಂಟನಿ ಅವರು ತಮ್ಮ ಅರ್ಜಿಯಲ್ಲಿ ಪುಸ್ತಕದ ಮಾರಾಟವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ, ಪುಸ್ತಕಗಳ ಮಾರಾಟಗಾರರಿಗೂ ನೋಟಿಸ್ ನೀಡಲಾಗಿದೆ.

Advertisements

“ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದವನ್ನು ಬಳಸಿರುವುದು ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವುಂಟುಮಾಡುತ್ತದೆ. ಬೈಬಲ್ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ. ಕರೀನಾ ಕಪೂರ್ ಖಾನ್ ಅವರ ಗರ್ಭಧಾರಣೆಯನ್ನು ಬೈಬಲ್‌ ಜತೆಗೆ ಹೋಲಿಸುವುದು ತಪ್ಪು. ಅವರು ತಮ್ಮ ಪುಸ್ತಕಕ್ಕೆ ಪ್ರಚಾರ ಪಡೆಯಲು ಈ ಪದವನ್ನು ಬಳಿಸಿದ್ದಾರೆ” ಎಂದು ಅರ್ಜಿದಾರ ಆಂಥೋನಿ ವಾದಿದ್ದಾರೆ.

Kareena Kapoor Khan's Pregnancy Bible: The Ultimate Manual for Moms-To-Be  eBook : Kapoor, Kareena, Shah Bhimjyani, Aditi: Amazon.in: Kindle Store

2021ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ಕರೀನಾ ಅವರು ತಮ್ಮ ಗರ್ಭಾವಸ್ಥೆಯ ಕುರಿತು ವಿವರಿಸಿದ್ದಾರೆ. ಅಲ್ಲದೆ, ನಿರೀಕ್ಷಿತ ತಾಯಂದಿರಿಗೆ ಆಹಾರ, ಫಿಟ್‌ನೆಸ್, ಸ್ವಯಂ-ಆರೈಕೆಯ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.

ಆಂಥೋನಿ ಅವರು ಈ ಹಿಂದೆ, ಕರೀನಾ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸ್‌ ಠಾಣೆಗೆ ತೆರಳಿದ್ದರು. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಬಳಿಕ, ಅವರು ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದವು ಹೇಗೆ ದುರ್ಬಳಕೆಯಾಗಿದೆ ಎಂಬುದನ್ನು ಸಾಬೀತು ಮಾಡವಲ್ಲಿ ವಿಫಲವಾದ ಕಾರಣ, ಅವರ ಅರ್ಜಿಯನ್ನು ವಜಾಗೊಳಿಸಲಾಗಿತ್ತು.

ಇದೀಗ, ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ ಪ್ರತಿಕ್ರಿಯೆ ಕೇಳಿ ಕರೀನಾಗೆ ನೋಟಿಸ್‌ ಜಾರಿ ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X