ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ಬಗ್ಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ಕನ್ನಡ ಸುದ್ದಿ ವಾಹಿನಿಯು ಮುಸ್ಲಿಮರನ್ನು ಗುರುತಿಸಲು ಪಾಕಿಸ್ತಾನದ ಧ್ವಜವನ್ನು ಬಳಿಸಿ, ಆಕ್ರೋಶಕ್ಕೆ ಗುರಿಯಾಗಿದೆ. ಇದೀಗ, ತಮ್ಮ ತಪ್ಪಿಗೆ ವಿಷಾಧ ವ್ಯಕ್ತಪಡಿಸಿದೆ.
ಇತ್ತಿಚೆಗೆ ಬಿಡುಗಡೆಯಾದ ವರದಿಯಲ್ಲಿ ದೇಶದಲ್ಲಿ ಹಿಂದೂಗಳ ಜನ ಸಂಖ್ಯೆ ಇಳಿಕೆಯಾಗಿದೆ ಹಾಗೂ ಮುಸ್ಲಿಮರ ಜನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಇದನ್ನೇ ದಾಳವಾಗಿಸಿಕೊಂಡಿರುವ ಹಲವಾರು ಮಾಧ್ಯಮಗಳು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರಿತ ಸುದ್ದಿ, ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ವರದಿ ಬಗ್ಗೆ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದಿ ಸುದ್ದಿಯಲ್ಲಿ ಹಿಂದುಗಳನ್ನು ಗುರುತಿಸಲು ಭಾರತ ರಾಷ್ಟ್ರಧ್ವಜವನ್ನೂ, ಮುಸ್ಲಿಮರನ್ನು ಗುರುತಿಸಲು ಪಾಕಿಸ್ತಾನದ ಧ್ವಜದ ಗ್ರಾಫಿಕ್ಸ್‌ಗಳನ್ನು ಬಳಸಲಾಗಿತ್ತು. ಮುಸ್ಲಿಮರನ್ನು ಪಾಕಿಸ್ತಾನಿಗಳೆಂದು ಬಿಂಬಿಸುವ ಆ ಗ್ರಾಫಿಕ್ ಬಳಕೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ, ಸುದ್ದಿ ವಾಹಿನಿಯು ವಿಷಾಧ ವ್ಯಕ್ತಪಡಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಸುವರ್ಣ ನ್ಯೂಸ್ನ ಸ್ಕ್ರೀನ್ ಶಾಟ್ ಬಗ್ಗೆ ಸ್ಪಷ್ಟೀಕರಣ #AsianetSuvarnaNews #KannadaNews pic.twitter.com/a5jodoVOoJ
— Asianet Suvarna News (@AsianetNewsSN) May 11, 2024
“ಇದು ಉದ್ದೇಶಪೂರ್ವಕವಾಗಿ ಆದ ತಪ್ಪಲ್ಲ. ಆಕಸ್ಮಿಕವಾಗಿ ಈ ತಪ್ಪು ಜರುಗಿದೆ. ತಪ್ಪು ಗೊತ್ತಾದಕೂಡಲೇ ಗ್ರಾಫಿಕ್ಸ್ ಬದಲಾಯಿಸಲಾಗಿದೆ. ಈ ಅಚಾತುರ್ಯಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಸುವರ್ಣ ನ್ಯೂಸ್ ನಲ್ಲಿ ಶನಿವಾರ ನಿರೂಪಕಿಯೊಬ್ಬರು ಹೇಳಿದ್ದಾರೆ.
Here is a video clip.. pic.twitter.com/hVpiX995hl
— Mohammed Zubair (@zoo_bear) May 10, 2024
ಸುವರ್ಣ ನ್ಯೂಸ್ ಎಸಗಿದ ಈ ಕೃತ್ಯದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮಹಮದ್ ಜುಬೇರ್ ಅವರು ಟ್ವೀಟರ್‌ನಲ್ಲಿ ಸುವರ್ಣ ನ್ಯೂಸ್ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕುರಿತು ಕಾನೂನು ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಮಾಧ್ಯಮ ಮುಖವಾಡ ಹಾಕಿಕೊಂಡ ಕೋಮುವಾದಿ ಸಮಾಜಕಂಟಕ ಚಾನಲ್ ಮತ್ತು ಪಕ್ಷದ ಏಜೆಂಟ್ , ಅಜಿತ್ ಸಂಘಪರಿವಾರ ಮತ್ತು ಬಿಜೆಪಿ ಯವರೊಂದಿಗೆ ಬಹಿರಂಗವಾಗಿಯೇ ಚಟುವಟಿಕೆ ಇದೆ,,ಈ ಚಾನೆಲ್ ನಲ್ಲಿ ಬಹುತೇಕ ವಿರೋಧ ಪಕ್ಷಗಳ ವೀರೋಧಿ ಸುದ್ದಿ ಬಿಟ್ಟರೆ ವಾಸ್ತವ ಸಂಗತಿ ತುಂಬಾ ವಿರಳ,, ಇಂಥಾ ಚಾನಲ್ ಗಳ ಅವಶ್ಯಕತೆ ಇದೆಯಾ,,ಸರಕಾರ ಇಂಥವರಿಗೆ ರಿಯಾಯಿತಿ ಯಾಕೆ ಕೊಡಬೇಕು