ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಮೇ 13ರ ಸೋಮವಾರ ನಡೆಯಲಿದೆ. ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 10 ರಾಜ್ಯಗಳ 96 ಲೋಕಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಈ ಚುನಾವಣಾ ಪ್ರಕ್ರಿಯೆಗೆ ಕೆಲವೇ ಗಂಟೆಗಳಿರುವಾಗ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಎನ್ಡಿಎ ಮೈತ್ರಿಕೂಟವು ಮೂರು ಹಂತಗಳಲ್ಲಿ 200ರಷ್ಟು ಸ್ಥಾನಗಳನ್ನು ತಲುಪಿದೆ” ಎಂದು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯ ಮೂರು ಹಂತಗಳಲ್ಲಿ ಎನ್ಡಿಎ ಮೈತ್ರಿಕೂಟವು ಸುಮಾರು 200 ಸ್ಥಾನಗಳನ್ನು ತಲುಪಿದೆ. 4ನೇ ಹಂತ ಕೂಡ ಎನ್ಡಿಎ ಪರವಾದ ವಾತಾವರಣವಿದೆ. ಈ ಹಂತದಲ್ಲೂ ನಾವು ಗರಿಷ್ಠ ಯಶಸ್ಸನ್ನು ಪಡೆಯುವ ವಿಶ್ವಾಸವಿದೆ. ಇದರೊಂದಿಗೆ ನಿಶ್ವಯವಾಗಿಯೂ 400 ಸೀಟನ್ನು ದಾಟುವ ಗುರಿಯ ಹತ್ತಿರ ಹೋಗಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#WATCH | Union Home Minister Amit Shah says “In the 3 phases of the Lok Sabha elections, NDA has reached around 200 seats. The 4th phase is going to be very good for NDA. We will get maximum success in this phase and we will move towards our target of ‘400 paar’. I can say with… pic.twitter.com/5auUfmbGMV
— ANI (@ANI) May 11, 2024
“ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ ಎನ್ಡಿಎ ಕ್ಲೀನ್ಸ್ವೀಪ್ ಸಾಧಿಸಲಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ತೆಲಂಗಾಣದಲ್ಲಿ ನಾವು 10ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ. ಜೂನ್ 4ರಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ದಕ್ಷಿಣದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
“ಒಂದೆಡೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭ್ರಷ್ಟಾಚಾರ ಮತ್ತು 12 ಲಕ್ಷ ಕೋಟಿ ರೂ.ಗಳ ಹಗರಣಗಳಲ್ಲಿ ಭಾಗಿಯಾಗಿದ್ದರೆ, ಮತ್ತೊಂದೆಡೆ, ಭ್ರಷ್ಟಾಚಾರದ ಆರೋಪ ಮಾಡದ ನರೇಂದ್ರ ಮೋದಿ ಇದ್ದಾರೆ. 23 ವರ್ಷ ಮುಖ್ಯಮಂತ್ರಿಯಾಗಿದ್ದರೂ, 10 ವರ್ಷ ಪ್ರಧಾನಿಯಾಗಿದ್ದರೂ ಸಹ 25 ಪೈಸೆಯ ಭ್ರಷ್ಟಾಚಾರ ಆರೋಪ ಅವರ ಮೇಲಿಲ್ಲ” ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮುಸ್ಲಿಮರ ಜನಸಂಖ್ಯೆಯನ್ನು ತೋರಿಸಲು ಪಾಕಿಸ್ತಾನದ ಧ್ವಜ ಬಳಸಿದ ‘ಸುವರ್ಣ ನ್ಯೂಸ್ ಕನ್ನಡ’!
“ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ, ನಕ್ಸಲ್ ಚಟುವಟಿಕೆ ಹಾಗೂ ಉಗ್ರ ಕೃತ್ಯಗಳನ್ನು ಮಾಡುವುದಕ್ಕೆ ಕಡಿವಾಣ ಹಾಕುವುದರಲ್ಲಿ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಡಿಜಿಟಲ್ ಇಂಡಿಯಾದ ಮೂಲಕ ಭಾರತದ ಆರ್ಥಿಕತೆಯನ್ನು ಉನ್ನತಮಟ್ಟಕ್ಕೆ ಏರಿಸಲಾಗಿದೆ” ಎಂದು ಹೇಳಿದರು.
