ಜಿಲ್ಲೆಗಳ ರಾಜಧಾನಿ ಹೆಸರೇಳಿ: ವ್ಯಾಪಕ ಟ್ರೋಲ್‌ಗೆ ಗುರಿಯಾದ ಪ್ರಧಾನಿ ಮೋದಿಯ ಚುನಾವಣಾ ಭಾಷಣ!

Date:

Advertisements

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರಚಾರ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ, ಈವರೆಗೆ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದು ಸುದ್ದಿಯಾಗುತ್ತಿದ್ದರು. ಆದರೆ ಇಂದು ಒಡಿಶಾದಲ್ಲಿ ಮಾಡಿದ ಭಾಷಣದ ವೇಳೆ, ಜಿಲ್ಲೆಗಳ ರಾಜಧಾನಿಯ ಹೆಸರೇಳಿ? ಎಂದು ಸಿಎಂಗೆ ಸವಾಲೆಸೆದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್‌ಗೆ ಕಾರಣವಾಗಿದೆ.

ಒಡಿಶಾದ ಕಂಧಮಾಲ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡ ಪ್ರಧಾನಿ ನರೇಂದ್ರ ಮೋದಿ, ಒಡಿಶಾದ ಬಿಜೆಪಿ ಸರ್ಕಾರವನ್ನು ಮುನ್ನಡೆಸುತ್ತಿರುವ ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವೇಳೆ, “ನವೀನ್ ಬಾಬು ಅವರು ಇಷ್ಟು ದಿನ ಸಿಎಂ ಆಗಿರುವುದರಿಂದ ನಾನು ಅವರಿಗೆ ಒಂದು ಸವಾಲು ಹಾಕಲು ಬಯಸುತ್ತೇನೆ. ಯಾವುದೇ ಕಾಗದದ ನೆರವಿಲ್ಲದೇ ಒಡಿಶಾದಲ್ಲಿರುವ ಎಲ್ಲ ಜಿಲ್ಲೆಗಳ ಹೇಸರೇಳಲಿ. ಜಿಲ್ಲೆಗಳ ಜೊತೆಗೆ ಆ ಜಿಲ್ಲೆಗಳ ರಾಜಧಾನಿಯ ಹೆಸರು ಹೇಳಲಿ. ಓರ್ವ ಮುಖ್ಯಮಂತ್ರಿ ತನ್ನ ರಾಜ್ಯದ ಜಿಲ್ಲೆಗಳ ಹೆಸರನ್ನು ಹೇಳಲು ಸಾಧ್ಯವಾಗದಿದ್ದರೆ ಜನರ ನೋವು ಅವರಿಗೆ ತಿಳಿಯುತ್ತದೆಯೇ?” ಎಂದು ಪ್ರಶ್ನಿಸಿದ್ದರು.

Advertisements

ಸದ್ಯ ಪ್ರಧಾನಿಯವರ ಈ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆಯಲ್ಲದೇ, “ನಮ್ಮ ದೇಶದಲ್ಲಿ ಜಿಲ್ಲೆಗಳಿಗೆ ಯಾವಾಗಿನಿಂದ ರಾಜಧಾನಿ ಪ್ರಾರಂಭವಾಗಿದೆ?” ಎಂದು ಪ್ರಶ್ನಿಸುತ್ತಿದ್ದಾರೆ.

“ಇವರು ನರೇಂದ್ರ ಮೋದಿ. ಭಾರತದ ಪ್ರಧಾನಿ. ಒಡಿಶಾದ ಎಲ್ಲ ಜಿಲ್ಲೆಗಳ ರಾಜಧಾನಿಯನ್ನು ಹೇಳುವಂತೆ ಅಲ್ಲಿನ ಸಿಎಂಗೆ ಇವರು ಸವಾಲು ಹಾಕಿದ್ದಾರೆ. ನಮಗೆ ದೇಶ ಮತ್ತು ರಾಜ್ಯಗಳ ರಾಜಧಾನಿ ಇದೆ ಎಂಬುದು ಈವರೆಗೆ ತಿಳಿದಿತ್ತು. ಆದರೆ ಜಿಲ್ಲೆಗಳಿಗೆ ಯಾವಾಗಿನಿಂದ ರಾಜಧಾನಿ ಇದೆ ಎಂಬುದು ಗೊತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಗೆ ಮೂಲಭೂತ ಸಂಗತಿಗಳೇ ತಿಳಿದಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಅದಕ್ಕಾಗಿಯೇ ನಮಗೆ ಅನಕ್ಷರಸ್ಥ ಪ್ರಧಾನಿಯ ಅಗತ್ಯವಿಲ್ಲ. ಇದು ಭಾರತದ ಎಲ್ಲ ನಾಗರಿಕರಿಗೆ ಮುಜುಗರದ ಸಂಗತಿಯಾಗಿದದೆ” ಎಂದು Dr Nimo Yadav Commentary ಎಂಬ ಟ್ರೋಲಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X