ಬಿಜೆಪಿ ರಾಜ್ಯದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಕೇವಲ ಪ್ರಚಾರ ಮತ್ತು ವಿಭಜನೆಯ ರಾಜಕಾರಣದಿಂದ ಅಭಿವೃದ್ಧಿ ಆಗುವುದಿಲ್ಲ. ದೇಶವು ಸಾಲದ ಹೊರೆಯಲ್ಲಿ ಮುಳುಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ ವಜಾಗೊಳಿಸುವಿಕೆಯಿಂದಾಗಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಅರಂಬಾಗ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ತಮ್ಮ ಸುಳ್ಳುಗಳನ್ನು ಮುಂದುವರೆಸಿದ್ದಾರೆ. “ಬಂಗಾಳದ ಅಭಿವೃದ್ಧಿ ಮತ್ತು ಅದರ ಸಂಸ್ಕೃತಿಯ ರಕ್ಷಣೆಗೆ 2024ರ ಚುನಾವಣೆ ನಿರ್ಣಾಯಕವಾಗಿದೆ. ಬಂಗಾಳಿ ಸಂಸ್ಕೃತಿಯನ್ನು ತನ್ನದೆಂದು ಟಿಎಂಸಿ ಹೇಳಿಕೊಂಡಿದ್ದರೂ, ವಾಸ್ತವವು ಧಾರ್ಮಿಕ ನಂಬಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುತ್ತಿದೆ” ಎಂದು ಮೋದಿ ಹೇಳಿದ್ದಾರೆ.
“ಗುರುದೇವ್ ಠಾಗೋರ್, ಕಾಜಿ ನಜ್ರುಲ್ ಇಸ್ಲಾಂ, ಸತ್ಯಜಿತ್ ರೇ, ಸ್ವಾಮಿ ವಿವೇಕಾನಂದ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ಐತಿಹಾಸಿಕ ವ್ಯಕ್ತಿಗಳನ್ನು ಟಿಎಂಸಿ ಆಡಳಿತದಲ್ಲಿ ನಿರ್ಲಕ್ಷಿಸಲಾಗುತ್ತಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಂತಹ ನಾಯಕನನ್ನು ದೇಶಕ್ಕೆ ನೀಡಿದ ಬಂಗಾಳದ ಭೂಮಿ ಈಗ ವೋಟ್ ಬ್ಯಾಂಕ್ ರಾಜಕೀಯದಿಂದ ಬಳಲುತ್ತಿದೆ. ಟಿಎಂಸಿಯ ವೋಟ್ ಬ್ಯಾಂಕ್ ರಾಜಕೀಯದ ಬೆನ್ನಟ್ಟುವಿಕೆಯ ನಡುವೆ ಬಂಗಾಳದ ಸಂಸ್ಕೃತಿಯ ಸಾರವೂ ಮಸುಕಾಗುತ್ತಿದೆ. ಮಹಿಳೆಯರ ಪರಿಸ್ಥಿತಿಗಳು ಮತ್ತು ಆರೋಗ್ಯ ಸೇವೆಗಳು ಹದಗೆಡುತ್ತಲೇ ಇವೆ” ಎಂದು ಮೋದಿ ಸುಳ್ಳಿನ ಸುರಿಮಳೆಗೈದಿದ್ದಾರೆ.
“ಬಿಜೆಪಿ ರಾಜ್ಯದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಕೇವಲ ಪ್ರಚಾರ ಮತ್ತು ವಿಭಜನೆಯ ರಾಜಕಾರಣದಿಂದ ಅಭಿವೃದ್ಧಿ ಆಗುವುದಿಲ್ಲ. ದೇಶವು ಸಾಲದ ಹೊರೆಯಲ್ಲಿ ಮುಳುಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ ವಜಾಗೊಳಿಸುವಿಕೆಯಿಂದಾಗಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
On this auspicious day of his birthday, I pay my homage to Gurudev Rabindranath Tagore in his own words –
“Where the mind is without fear and the head is held high;
Where knowledge is free;
Where the world has not been broken up into fragments by narrow domestic walls; ……— Mamata Banerjee (@MamataOfficial) May 8, 2024
“ಗುರುದೇವ ರವೀಂದ್ರನಾಥ ಠ್ಯಾಗೋರ್ ಅವರ ಜನ್ಮದಿನದ ಈ ಶುಭ ದಿನದಂದು, ನಾನು ಅವರಿಗೆ ಅವರ ಸ್ವಂತ ಮಾತುಗಳಲ್ಲಿ ನನ್ನ ಗೌರವವನ್ನು ಸಲ್ಲಿಸುತ್ತೇನೆ. “ಎಲ್ಲಿ ಮನಸ್ಸು ಭಯವಿಲ್ಲದೆ ಇರುತ್ತದೆಯೋ ಅಲ್ಲಿ ತಲೆಯನ್ನು ಮೇಲಕ್ಕೆತ್ತಲಾಗುತ್ತದೆ; ಅಲ್ಲಿ ಜಗತ್ತು ಕಿರಿದಾದ ದೇಶೀಯ ಗೋಡೆಗಳಿಂದ ತುಣುಕುಗಳಾಗಿ ವಿಂಗಡಿಸಲ್ಪಟ್ಟಿಲ್ಲ; ಆ ಸ್ವಾತಂತ್ರ್ಯದ ಸ್ವರ್ಗಕ್ಕೆ, ನನ್ನ ತಂದೆಯೇ, ನನ್ನ ದೇಶವು ಎಚ್ಚರಗೊಳ್ಳಲಿ” ಎಂದು ಮಮತಾ ಬ್ಯಾನರ್ಜಿ ಅವರು ತಮ್ಮ ‘X’ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಮೋದಿ ಹೇಳುವುದೇ ನಿಜವಾಗಿದ್ದರೆ, ಇಂತಹ ಮಹಾನ್ ನಾಯಕರುಗಳ ಕುರಿತು ಅವರು ತಮ್ಮ ಸ್ವಂತ ಖಾತೆಯಲ್ಲಿ ಬರೆದುಕೊಳ್ಳುವ ಅಗತ್ಯವಿತ್ತೇ?. ಹಾಗಾದರೆ ಮೋದಿಯವರು ಎಷ್ಟು ದಿನ ಎಷ್ಟು ಮಂದಿ ಮಹನೀಯರ ಕುರಿತು ಹೊಗಳಿಕೊಂಡು ಬರೆದುಕೊಂಡಿದ್ದಾರೆ. ಬದಲಿಗೆ ಎಲ್ಲೆಲ್ಲಿಯೂ ಅವರ ಗುಣಗಾನಗಳೇ ಇರುತ್ತವೆ. ನಾನೇ ದೇಶ ಎನ್ನುತ್ತಾರೆ. ಹೀಗಿರುವಾಗ ವಿಪಕ್ಷಗಳ ನಾಯಕರನ್ನು ಮೋದಿಜಿ ಸುಳ್ಳಿನ ಅಂಗಳದಲ್ಲಿಯೇ ಚೆಂಡಾಡುತ್ತಿದ್ದಾರೆ.
21:45-24:00 “ಕೇಂದ್ರ ಸರ್ಕಾರವು ನಿಮ್ಮ ಅನುಕೂಲಕ್ಕಾಗಿ ಯೋಜನೆಗಳನ್ನು ವಿನ್ಯಾಸಗೊಳಿಸುತ್ತದೆ, ಆದರೆ ಟಿಎಂಸಿ ಸರ್ಕಾರ ಅವುಗಳನ್ನು ತಡೆಯುತ್ತದೆ. ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಎಂಬ ಮಹತ್ವದ ಅಭಿಯಾನವನ್ನು ಮೋದಿ ಮುನ್ನಡೆಸುತ್ತಿದ್ದಾರೆ. ಈ ಜಿಲ್ಲೆಗಳಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿವೆ. ಆದರೆ ಮೋದಿ ಅವರು ಉನ್ನತ ಅಧಿಕಾರಿಗಳನ್ನು ಕಳುಹಿಸುವ ಮೂಲಕ, ದೆಹಲಿಯಿಂದ ಪ್ರಗತಿಯನ್ನು ಪರಿಶೀಲಿಸುವ ಮೂಲಕ ಈ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಈಗ, ಅವರು ಶಿಕ್ಷಣ, ಆರೋಗ್ಯ, ರಸ್ತೆ ನಿರ್ಮಾಣ ಮತ್ತು ನೀರು ಪೂರೈಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದರೂ, ಟಿಎಂಸಿ ಸರ್ಕಾರವು ಎಸ್‌ಸಿ ಸಮುದಾಯಗಳ ಅಭಿವೃದ್ಧಿಗೆ ಅಡ್ಡಿಪಡಿಸುತ್ತದೆ. ಅವರ ಪ್ರಗತಿಯನ್ನು ತಡೆಯುತ್ತದೆ” ಎಂದು ಮೋದಿಜಿ ಸುಳ್ಳುಗಳನ್ನೇ ಭಿತ್ತರಿಸುತ್ತಿದ್ದಾರೆ.
“ಪ್ರಧಾನಿ ಸುಳ್ಳು ಹೇಳಬಾರದು. ನೀವು 56 ಇಂಚಿನ ಎದೆಯನ್ನು ಹೊಂದಿದ್ದೀರೆಂದು ಹೇಳಿಕೊಳ್ಳುತ್ತೀರಿ. ಆದರೆ, ನೀವು ಕೇವಲ ಸುಳ್ಳನ್ನೇ ಆಶ್ರಯಿಸುತ್ತಿದ್ದೀರಿ. ʼ100 ದಿನಗಳ ಕನಿಷ್ಟ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರುವಲ್ಲಿ ಪಶ್ಚಿಮ ಬಂಗಾಳವು ಎಲ್ಲ ರಾಜ್ಯಗಳಿಗಿಂತ ಅತ್ಯುತ್ತಮವಾಗಿದೆʼ ಎಂದು ಭಾರತ ಸರ್ಕಾರದಿಂದ ಪ್ರಶಸ್ತಿ ಪಡೆದಿದೆ. ಆರ್ಥಿಕ ಸಂಕಷ್ಟದ ನಡುವೆಯೂ ಹಲವು ಸಮಾಜ ಕಲ್ಯಾಣ ಯೋಜನೆಗಳಿಗೆ ಅನುದಾನ ಹೆಚ್ಚಿಸಲಾಗಿದೆ. ಮಹಿಳೆಯರಿಗಾಗಿ ಲಕ್ಷ್ಮೀ ಭಂಡಾರ್ ಯೋಜನೆಯ ಭತ್ಯೆ ಹೆಚ್ಚಳದಿಂದ ಹಿಡಿದು ಸರ್ಕಾರಿ ನೌಕರರ ಡಿಎ ಹೆಚ್ಚಳದವರೆಗೆ ಎಲ್ಲ ವರ್ಗದ ಜನರಿಗೆ ಕಾಳಜಿ ವಹಿಸಲಾಗಿದೆ. ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
27:00-28:20 ಟಿಎಂಸಿಯ ಹಗರಣಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, “ಟಿಎಂಸಿ ಬಂಗಾಳವನ್ನು ಲೂಟಿ ಮಾಡುತ್ತಿರುವ ರೀತಿ, ಇದು ಗಂಭೀರ ಪಾಪ. ಶಿಕ್ಷಕರ ನೇಮಕಾತಿ ಹಗರಣ, ಪೊಂಜಿ ಯೋಜನೆಗಳು, ಕಲ್ಲಿದ್ದಲು ಹಗರಣಗಳು, ಚಿಟ್ ಫಂಡ್ ಹಗರಣಗಳು, ಪಡಿತರ ಹಗರಣಗಳು, ಪಟ್ಟಿ ವಿಸ್ತಾರವಾಗಿದೆ. ಟಿಎಂಸಿ ನಮ್ಮ ಆಹಾರ ಪೂರೈಕೆದಾರರನ್ನು-ನಮ್ಮ ರೈತರನ್ನು ಸಹ ಬಿಟ್ಟಿಲ್ಲ. ಟಿಎಂಸಿ ಅಧಿಕಾರಿಗಳು ಮಾರುಕಟ್ಟೆಗಳಲ್ಲಿ ಭತ್ತದ ರೈತರನ್ನು ಲೂಟಿ ಮಾಡುತ್ತಾರೆ. ಅವರು ರೈತರ ಅಕ್ಕಿಯನ್ನು ಕಡಿಮೆ ತೂಕ ಮಾಡುತ್ತಾರೆ ಮತ್ತು ಅವರಿಗೆ ಕಡಿಮೆ ಪಾವತಿಸುತ್ತಾರೆ. ಕನಿಷ್ಟ ಪಿಎಂ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ಕಳುಹಿಸುತ್ತಾರೆ. ಇದು ಸ್ವಲ್ಪ ಪರಿಹಾರವನ್ನು ನೀಡುತ್ತದೆ. ಇಲ್ಲದಿದ್ದರೆ, ಬಂಗಾಳದ ರೈತರನ್ನು ಹಾಳುಮಾಡುವ ಪ್ರಯತ್ನಗಳಿಗೆ ಕೊರತೆಯಿಲ್ಲ” ಎಂದು ಹೇಳಿದರು.
“ದೇಶದಲ್ಲಿ ಮೋದಿ ಆಡಳಿತದಲ್ಲಿ 12,000 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಆಡಳಿತದಲ್ಲಿ ರಾಜ್ಯದ ರೈತರ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ತಮ್ಮ ಸರ್ಕಾರವು ರಾಜ್ಯದ ಜನತೆಗೆ ಹೆಣ್ಣು ಮಕ್ಕಳಿಗೆ ‘ಕನ್ಯಾಶ್ರೀ’, ಯುವಜನರಿಗೆ ‘ಯುವಶ್ರೀ’ಯಂತಹ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದಿನ ಭಾಷಣದಲ್ಲಿಯೇ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ಮುಂಬೈ ದಾಳಿ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಲಿಲ್ಲವೇ? ವಾಸ್ತವ ಏನು?
ಮೋದಿ ಆಡಳಿತದ ಕೇವಲ ಹತ್ತು ವರ್ಷದಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದಾಗಿ ಸರ್ವೆಗಳೇ ಹೇಳುತ್ತಿವೆ. ಕೋವಿಶೀಲ್ಡ್ ಹಗರಣ, ಚುನಾವಣಾ ಬಾಂಡ್‌ಗಳಂತಹ ದೊಡ್ಡ ದೊಡ್ಡ ಭ್ರಷ್ಟಾಚಾರಗಳಿದ್ದರೂ ಕೂಡ ಮೋದಿ ಚಕಾರ ಎತ್ತುವುದೇ ಇಲ್ಲ. ಆದರೆ, ವಿಪಕ್ಷಗಳನ್ನು ಸುಳ್ಳಿನ ದಾಳದಿಂದಲೇ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ.