ಉತ್ತರ ಪ್ರದೇಶದ ಲಕೀಮ್‌ಪುರ್ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಇವಿಎಂನಲ್ಲಿ ಮೋಸ ನಡೆದಿದೆ ಎಂದು ಮತದಾರರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮತದಾರರೊಬ್ಬರು ಗಂಭೀರ ಆರೋಪ ಮಾಡಿರುವ ದೃಶ್ಯ ವೈರಲ್ ಆಗುತ್ತಿದೆ. ಮತದಾರರು ಇವಿಎಂನಲ್ಲಿ ಸಮಾಜವಾದಿ ಪಕ್ಷದ ಗುರುತಿಗೆ ಮತ ಚಲಾಯಿಸಿದ್ದು, ವಿವಿಪ್ಯಾಟ್ ನಲ್ಲಿ ಬಿಜೆಪಿ ಗುರುತು ತೋರಿಸಿದೆ.
ಇವಿಎಂನಲ್ಲಿ ಯಾವುದೇ ಪಕ್ಷಕ್ಕೆ ಮತದಾನ ಮಾಡಿದರೂ ವಿವಿಪ್ಯಾಟ್‌ನಲ್ಲಿ ಬಿಜೆಪಿ ಪಕ್ಷದ ಚಿಹ್ನೆ ತೋರಿಸಲಾಗುತ್ತಿದೆ ಎಂದು ಈ ಮತದಾರ ಗಂಭೀರ ಆರೋಪ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಈ ದೃಶ್ಯ ಹಲವು ಕಡೆ ವೈರಲ್ ಆಗಿದ್ದು, ನೆಟ್ಟಿಗರು ಇವಿಎಂ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ 13 ಕ್ಷೇತ್ರ ಸೇರಿದಂತೆ ಹತ್ತು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಒಳಗೊಂಡು ದೇಶಾದ್ಯಂತ 4ನೇ ಹಂತದ ಲೋಕಸಭಾ ಚುನಾವಣೆಯಲ್ಲಿ 96 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
This is SHOCKING 😳
He voted for Cycle ( SP ) but got a slip of Lotus ( BJP symbol).
This should be investigated by the ECI ASAP.#Kannauj#LokSabhaElections2024 #Phase4
— Siddharth (@SidKeVichaar) May 13, 2024
