ಸಿಬಿಎಸ್‌ಸಿ 10 ಮತ್ತು 12ನೇ ತರಗತಿಯ 2024ನೇ ಸಾಲಿನ ಫಲಿತಾಂಶ ಇಂದು ಪ್ರಕಟಗೊಂಡಿದ್ದು, 10ನೇ ತರಗತಿಯಲ್ಲಿ ಶೇ. 93.60 ಹಾಗೂ 12ನೇ ತರಗತಿಯಲ್ಲಿ ಶೇ. 87.98 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಿರುವನಂತಪುರ, ವಿಜಯವಾಡ, ಚೆನ್ನೈ ಹಾಗೂ ಬೆಂಗಳೂರು ಹೆಚ್ಚು ಉತ್ತೀರ್ಣರಾದ ಮೊದಲ ನಾಲ್ಕು ಜಿಲ್ಲೆಗಳಾಗಿವೆ. ಪ್ರತಿಸಲದಂತೆ ಈ ಬಾರಿಯೂ ವಿದ್ಯಾರ್ಥಿನಿಯರೆ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ.
10ನೇ ತರಗತಿಯಲ್ಲಿ ಬಾಲಕಿಯರು ಶೇ. 95.75, 12ನೇ ತರಗತಿಯಲ್ಲಿ ಶೇ. 91.52 ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕರು 10ನೇ ತರಗತಿಯಲ್ಲಿ ಶೇ. 92.71 ಹಾಗೂ 12ನೇ ತರಗತಿಯಲ್ಲಿ ಶೇ. 85.12 ಮಂದಿ ತೇರ್ಗಡೆ ಹೊಂದಿದ್ದಾರೆ.
ಸಿಬಿಎಸ್‌ಸಿ ಫಲಿತಾಂಶ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
