ದೇಶದಲ್ಲಿ ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸೀಸನ್ ಬೆನ್ನಲ್ಲೇ ಐಸಿಸಿಯ ಮೆಗಾ ಟೂರ್ನಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ, ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಟಿ20 ವಿಶ್ವಕಪ್ಗಾಗಿ ಬಲಿಷ್ಠ ತಂಡಗಳು ಪ್ರಕಟಿಸಿವೆ.
ಮೇ 18ರಂದು ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪ್ಲೇ-ಆಫ್ ಪ್ರವೇಶ ಅರ್ಹತೆಯನ್ನು ಪಡೆಯುವ ಫಂದ್ಯ ನಡೆಯಲಿದೆ. ಈ ರೋಚಕ ಪಂದ್ಯಕ್ಕೂ ಮುನ್ನವೇ ಆರ್ಸಿಬಿಗೆ ಆಘಾತ ಉಂಟಾಗಿದೆ. ಆರ್‌ಸಿಬಿ ಸೇರಿದಂತೆ ಕೆಲ ಪ್ರಮುಖ ತಂಡಗಳಲ್ಲಿ ಆಡುತ್ತಿದ್ದ ಇಂಗ್ಲೆಂಡ್‌ನ ಆಟಗಾರರು ತಮ್ಮ ತವರಿಗೆ ಮರಳಿದ್ದಾರೆ.
Jacksy and Toppers are heading back home for international duties and we wish them all the very best. ✈
You were incredible in the camp and on the field this IPL. See you soon, lads. 🤗#PlayBold #ನಮ್ಮRCB #IPL2024 pic.twitter.com/qxyT5rqvU1
— Royal Challengers Bengaluru (@RCBTweets) May 13, 2024
ಐಪಿಎಲ್ ಪ್ಲೇ ಆಫ್ಗೆ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ವಿಲ್ ಜಾಕ್ಸ್ ಇಂಗ್ಲೆಂಡ್ ತಂಡ ಸೇರಿಕೊಳ್ಳಬೇಕಿದೆ. ಟಿ20 ವಿಶ್ವಕಪ್ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್ ತಂಡವು ಪಾಕ್ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ವಿಲ್ ಜಾಕ್ಸ್ ಆರ್‌ಸಿಬಿ ತೊರೆದು ಇಂಗ್ಲೆಂಡ್ ತಂಡ ಸೇರಿಕೊಳ್ಳಲು ಹೊರಟಿದ್ದಾರೆ. ಈ ಬಗ್ಗೆ ಖುದ್ದು ಆರ್‌ಸಿಬಿ ಟ್ವೀಟ್ ಮಾಡಿದ್ದು, ವಿಲ್ ಜಾಕ್ಸ್ ಹಾಗೂ ಬೌಲರ್ ರೀಸ್ ಟೋಪ್ಲಿ ಅವರನ್ನು ತವರಿಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದೆ.
We’ll miss you, Jos bhai! 🥺💗 pic.twitter.com/gnnbFgA0o8
— Rajasthan Royals (@rajasthanroyals) May 13, 2024
ಗುಜರಾತ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿಲ್ ಜಾಕ್ಸ್, ಕೇವಲ 41 ಎಸೆತದಲ್ಲಿ ಶತಕ ಬಾರಿಸುವ ಮೂಲಕ ಮಿಂಚಿದ್ದರು. ಈ ಸಾಧನೆಯಲ್ಲಿ 10 ಸಿಕ್ಸರ್, 5 ಬೌಂಡರಿಗಳು ಕೂಡ ಇದ್ದವು. ಉತ್ತಮ ಫಾರ್ಮ್‌ನಲ್ಲಿರುವ ಮಧ್ಯೆಯೇ ವಿಲ್ ಜಾಕ್ಸ್ ಇಂಗ್ಲೆಂಡ್ ಮತ್ತೆ ವಾಪಸ್ ಆಗಲಿದ್ದು, ಇದು ಆರ್ಸಿಬಿಗೆ ಆಘಾತ ತಂದಿದೆ. ತೆರವಾಗಲಿರುವ ವಿಲ್ ಜಾಕ್ಸ್ ಸ್ಥಾನವನ್ನು ಗ್ಲೆನ್ ಮ್ಯಾಕ್ಸ್‌ವೆಲ್ ತುಂಬಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
ಆರ್‌ಸಿಬಿಯಿಂದ ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ, ಕೆಕೆಆರ್‌ನಿಂದ ಫಿಲ್ ಸಾಲ್ಟ್‌ನಿಂದ, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮೊಯೀನ್ ಅಲಿ, ರಾಜಸ್ಥಾನ ರಾಯಲ್ಸ್ ತಂಡದಿಂದ ಜೋಶ್ ಬಟ್ಲರ್ ಸೇರಿದಂತೆ ಪ್ರಮುಖ ಇಂಗ್ಲೆಂಡ್‌ನ ಆಟಗಾರರು ತಮ್ಮ ಫ್ರಾಂಚೈಸಿಗಳನ್ನು ತೊರೆದಿದ್ದಾರೆ.
For Last League stage matches & Playoffs matches Eng Players will not be available
KKR – Salt
RR – Buttler
CSK – Moeen AliThey have not good replacements available in their bench
Meanwhile RCB in place of Will Jacks —
— Fearless 🦁 (@ViratTheLegend) May 13, 2024
