ಅಂಜಲಿ ನಿವಾಸಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ; ವೈಯಕ್ತಿಕವಾಗಿ 2 ಲಕ್ಷ ಪರಿಹಾರ ವಿತರಣೆ

Date:

Advertisements

ಪ್ರೀತಿ ನಿರಾಕರಿಸಿದ್ದಾಳೆ ಎನ್ನುವ ಕಾರಣಕ್ಕೆ ವಿಕೃತ ಪ್ರೇಮಿಯಿಂದ ಹತ್ಯೆಯಾದ ಅಂಜಲಿ ನಿವಾಸಕ್ಕೆ ಸಚಿವ ಸಂತೋಷ್ ಲಾಡ್ ಶನಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಈ ಪ್ರಕರಣವನ್ನು ಕೂಡ ಸಿಐಡಿ ತನಿಖೆಗೆ ಸರ್ಕಾರ ಕೊಡಬೇಕು ಅಂತ ನಾನು ಮನವಿ ಮಾಡುತ್ತೇನೆ. ಗೃಹ ಸಚಿವರು ಕೂಡ ಬರುತ್ತಾರೆ ಅಂತ ಹೇಳಿದ್ದಾರೆ. ಈಗಾಗಲೇ ಕುಟುಂಬಸ್ಥರು ಹೇಳಿದ್ದಾರೆ ದೂರು ಮೊದಲು ಕೊಟ್ಟಿದ್ದೆವು ಅಂತ. ಈಗಾಗಲೇ ಕ್ರಮ ಕೂಡ ಆಗಿದೆ” ಎಂದರು.

“ನೇಹಾ ಹತ್ಯೆ ಘಟನೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗುತ್ತಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.

Advertisements

“ಬೆಳೆದ ಮಗಳನ್ನು ಕಳೆದುಕೊಂಡ ಅವರ ನೋವು ಕಂಡು ನಿಜಕ್ಕೂ ಬೇಸರವಾಯಿತು. ಅಂಜಲಿ ಕುಟುಂಬಕ್ಕೆ ವೈಯುಕ್ತಿಕವಾಗಿ 2 ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದೇನೆ. ಅಂಜಲಿ ಸಾವಿಗೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ” ಎಂದರು.

“ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕೋದು ಪೋಲಿಸರ ಕರ್ತವ್ಯ. ದಿನಾ ನಡೆಯುವ ಕೆಲಸಗಳು ನಮಗೆ ಕೂಡ ಗೊತ್ತಾಗುವುದಿಲ್ಲ. ಅಂತಹ ಅಹಿತಕರ ಘಟನೆಗಳು ನಡೆದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ಸಾರಾಯಿ ವಿಚಾರ ವಾಗಿ ಜನರು ಕೂಡ ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಬೇಕು. ಎಲ್ಲವನ್ನು ನಾವು ಒಬ್ಬರೇ ತೆಗೆದು ಹಾಕಲು ಸಾಧ್ಯವಿಲ್ಲ. ಎಲ್ಲರೂ ಕೈ ಜೋಡಿಸಿದಾಗ ಇಂತಹದ್ದನ್ನು ತೆಗೆದುಹಾಕಬಹುದು. ನಾನು ಬಿಜೆಪಿ ರಾಜಕಾರಣ ಮಾಡುತ್ತಿದ್ದಾರೆ ಅಂತ ಹೇಳೋದಿಲ್ಲ. ನನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಬರಲು ಆಗಿಲ್ಲ” ಎಂದರು.

https://x.com/SantoshSLadINC/status/1791721607238389933

ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, “ನಾನು ಇಂತಹ ಘಟನೆಯನ್ನ ಖಂಡಿಸುತ್ತೇನೆ. ಈಗಾಗಲೇ ಎರಡು ಪ್ರಕರಣಗಳು ನಡೆದಿದೆ. ಡ್ರಗ್ಸ್ ವಿಚಾರವಾಗಿ ನಾನು ಮೊದಲು ತೆಗೆದುಹಾಕಬೇಕು ಅಂತ ಮೊದಲಿಂದ ಹೇಳಿ ಕೊಂಡು ಬಂದಿದ್ದೇನೆ. ಅದನ್ನ ತಡೆಗಟ್ಟಲು ನಾನು ಹಲವಾರು ಬಾರಿ ಇಲಾಖೆ ಮೀಟಿಂಗ್ ಮಾಡಿದ್ದೇನೆ. ಕೊಲೆಯಾದ ಸಂದರ್ಭದಲ್ಲಿ ನಾನು ಬಂದಿಲ್ಲ ಅಂತ ಟೀಕೆ ಮಾಡ್ತಿದ್ದಾರೆ.ಇಂತಹ ಘಟನೆಯಾದಾಗ ಫೋಟೋ ಪೋಸ್ ಬರುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

Download Eedina App Android / iOS

X