ನನ್ನ ತಂದೆಯಂತೆ ನಾನು ನಿಮಗಾಗಿ ಇರುತ್ತೇನೆ: ಬ್ರಿಜ್ ಭೂಷಣ್ ಪುತ್ರ

Date:

Advertisements

ಬಿಜೆಪಿಯ ಕೈಸರ್‌ಗಂಜ್ ಲೋಕಸಭಾ ಅಭ್ಯರ್ಥಿ ಕರಣ್ ಭೂಷಣ್ ಸಿಂಗ್ ತಮ್ಮ ತಂದೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಹೊರಿಸಲಾಗಿರುವ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದು, ಇದು ರಾಜಕೀಯ ಪ್ರೇರಿತ ಎಂದಿದ್ದಾರೆ. ಹಾಗೆಯೇ ನನ್ನ ತಂದೆಯಂತೆ ನಾನು ನಿಮಗಾಗಿ ಇರುತ್ತೇನೆ ಎಂದು ಹೇಳಿದ್ದಾರೆ.

ಕರಣ್ ಭೂಷಣ್ ತನ್ನ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರತಿದಿನ ಸರಾಸರಿ 10 ಸಣ್ಣ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಶುಕ್ರವಾರ ಸಭೆಯೊಂದರಲ್ಲಿ ಮಾತನಾಡಿದ ಅವರು, “ಮತದಾನಕ್ಕೂ ಮುನ್ನ ಕ್ಷೇತ್ರದ ಪ್ರತಿ ಗ್ರಾಮಗಳ ಜನರನ್ನು ತಲುಪಿ ಬೆಂಬಲ ನೀಡುವಂತೆ ಮನವಿ ಮಾಡಲು ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಮಿತ್ರಪಕ್ಷ ಆರ್‌ಎಲ್‌ಡಿ ವಕ್ತಾರ ರಾಜೀನಾಮೆ

Advertisements

“ನೀವೆಲ್ಲರೂ ನನ್ನ ಕುಟುಂಬವನ್ನು ಬೆಂಬಲಿಸಿದ್ದೀರಿ. ನನ್ನ ತಂದೆಯೊಂದಿಗೆ ನಿಂತಿದ್ದೀರಿ. ನಮಗೆ ನೀಡುವ ಬೆಂಬಲ ಹೀಗೆಯೇ ಮುಂದುವರಿಸಬೇಕು ಎಂಬುವುದು ನಮ್ಮ ಆಶಯ. ನನ್ನ ತಂದೆಯಂತೆ ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ” ಎಂದು ಹೇಳಿದರು.

“ನಾವು ಕಳೆದ ಚುನಾವಣೆಯಲ್ಲಿ 2.8 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೇವೆ. ಈಗ ವಾತಾವರಣ ಬಿಜೆಪಿ ಪರವಾಗಿದ್ದು ಮತ್ತೆ ಅಗಾಧ ಅಂತರದಲ್ಲಿ ಗೆಲುವು ಪಡೆಯಲಿದ್ದೇವೆ. ಯಾರದಾದರೂ ವಿರುದ್ಧ ದೌರ್ಜನ್ಯ ನಡೆದಾಗ ಜನರು ಅವರ ಪರವಾಗಿ ನಿಲ್ಲುತ್ತಾರೆ. ಒಂದುವರೆ ವರ್ಷದಿಂದ ಕೆಲವು ಜನರು ನಮ್ಮ ವಿರುದ್ಧ ಕೆಟ್ಟ ಭಾಷೆ ಬಳಸುತ್ತಿದ್ದಾರೆ. ಆದರೆ ಅದ್ಭುತ ಮತಗಳ ಅಂತರದಿಂದ ಕರಣ್ ಭೂಷಣ್ ಗೆಲ್ಲುವಂತೆ ಜನರು ಬಯಸುತ್ತಾರೆ” ಎಂದು ಬ್ರಿಜ್ ಭೂಷಣ್ ಹೇಳಿಕೊಂಡಿದ್ದಾರೆ.

ಬ್ರಿಜ್ ಭೂಷಣ್ ಕುಟುಂಬಕ್ಕೆ ಗೊಂಡಾ ಮತ್ತು ಹತ್ತಿರದ ಜಿಲ್ಲೆಗಳ ಮೇಲ್ಜಾತಿಯವರ ಬೆಂಬಲ ಅಧಿಕವಾಗಿದ್ದು, ಅದನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಕುಟುಂಬವಿದೆ. ಗೊಂಡಾ, ಬಲರಾಂಪುರ ಮತ್ತು ಕೈಸರ್‌ಗಂಜ್ ಕ್ಷೇತ್ರಗಳನ್ನು ಪ್ರತಿನಿಧಿಸಿ ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ.

ಇದನ್ನು ಓದಿದ್ದೀರಾ? ಬ್ರಿಜ್ ಭೂಷಣ್‌ಗೆ ತಪ್ಪಿದ ಲೋಕಸಭಾ ಟಿಕೆಟ್: ಪುತ್ರನಿಗೆ ಮಣೆ ಹಾಕಿದ ಬಿಜೆಪಿ

ಆರು ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ಆರೋಪವನ್ನು ಬ್ರಿಜ್ ಭೂಷಣ್ ಹೊತ್ತಿದ್ದಾರೆ. ಈ ಆರೋಪದ ಬಳಿಕ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಸ್ಥಾನದಿಂದ ಬ್ರಿಜ್ ಭೂಷಣ್ ಕೆಳಕ್ಕಿಳಿದಿದ್ದಾರೆ. ಇನ್ನು ಕರಣ್ ಭೂಷಣ್ ಅವರ ಹಿರಿಯ ಸಹೋದರ ಪ್ರತೀಕ್ ಭೂಷಣ್ ಸಿಂಗ್ ಬಿಜೆಪಿ ಶಾಸಕರಾಗಿದ್ದಾರೆ. ಅವರ ತಾಯಿ ಕೇತ್ಕಿ ದೇವಿ ಸಿಂಗ್ ಗೊಂಡಾದ ಮಾಜಿ ಸಂಸದೆಯಾಗಿದ್ದಾರೆ. ಒಟ್ಟಾರೆಯಾಗಿ ಈ ಕುಟುಂಬದ ಬಹುತೇಕ ಎಲ್ಲ ಸದಸ್ಯರು ಬಿಜೆಪಿಯಿಂದ ಒಮ್ಮೆಯಾದರೂ ಟಿಕೆಟ್‌ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ.

ಕೈಸರ್‌ಗಂಜ್‌ ಕ್ಷೇತ್ರದಲ್ಲಿ ಇಂಡಿಯಾ ಒಕ್ಕೂಟದಿಂದ ಸಮಾಜವಾದಿ ಪಕ್ಷದ ರಾಮ್ ಭಗತ್ ಮಿಶ್ರಾ ಅವರು ಕರಣ್ ಎದುರು ಸ್ಪರ್ಧಿಸಲಿದ್ದಾರೆ. ಬಿಎಸ್‌ಪಿಯಿಂದ ನರೇಂದ್ರ ಪಾಂಡೆ ಕಣಕ್ಕಿಳಿದಿದ್ದಾರೆ. ಮೇ 20 ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X