17ನೇ ಆವೃತ್ತಿಯ ಐಪಿಎಲ್ನ ಕೊನೆಯ ಲೀಗ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ.
ಈಗಾಗಲೇ ಪ್ಲೇ-ಆಫ್ ಪ್ರವೇಶಿಸಿದ್ದ
ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಧ್ಯೆ ಈ ಪಂದ್ಯ ನಡೆಯಬೇಕಿತ್ತು. ಆದರೆ ಮಳೆಯಿಂದ ಒಂದೂ ಎಸೆತ ಕಾಣದೆ ಈ ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.
10 ಗಂಟೆ ಸುಮಾರಿಗೆ ಮಳೆ ನಿಂತಿತು. ಮಳೆ ನಿಂತ ಕಾರಣ 10.45ಕ್ಕೆ ಪಂದ್ಯವನ್ನು ನಿಗದಿಪಡಿಸಿ, ಡಕ್ವರ್ತ್ ನಿಯಮದ ಪ್ರಕಾರ 7 ಓವರ್ಗೆ ಸೀಮಿತಗೊಳಿಸಿ, ಟಾಸ್ ಕೂಡ ಹಾರಿಸಲಾಯಿತು.
KKR VS SRH IN THE QUALIFIER ON TUESDAY. 🏆
– Winning team will head to the Final of IPL 2024. pic.twitter.com/o1laze8mwF
— Mufaddal Vohra (@mufaddal_vohra) May 19, 2024
ಟಾಸ್ ಗೆದ್ದು ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿತು. ಇನ್ನೇನು ಆಟಗಾರರು ಮೈದಾನಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮತ್ತೆ ಮಳೆ ಸುರಿಯತೊಡಗಿತು. ಹೀಗಾಗಿ ಅಂಪೈರ್ಗಳು ಕೊನೆಗೆ ಬೇರೆ ದಾರಿ ಕಾಣದಾಗದೆ, ಪಂದ್ಯವನ್ನು ರದ್ದು ಎಂದು ಘೋಷಿಸಿದರು.
ಕೆಕೆಆರ್ ಮಣಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿ ಕ್ವಾಲಿಫೈಯರ್ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್ಗೆ ಮಳೆ ತಣ್ಣೀರೆರಚಿತು. ಸನ್ರೈಸರ್ಸ್ ಹೈದರಾಬಾದ್ 2ನೇ ತಂಡವಾಗಿ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು. ರಾಜಸ್ಥಾನ್ ಮತ್ತು ಹೈದರಾಬಾದ್ ಸಮಾನ 17 ಅಂಕ ಹೊಂದಿದರೂ ರನ್ ರೇಟ್ನಲ್ಲಿ ಮುಂದಿದ್ದ ಕಾರಣ, ಕಮಿನ್ಸ್ ಪಡೆ ಲಾಭ ಪಡೆಯಿತು.
Qualifier 1 – Kolkata Knight Riders v Sunrisers Hyderabad on May 21, Ahmedabad
Eliminator – Rajasthan Royals v Royal Challengers Bangalore on May 22, Ahmedabad
Qualifier 2 – Losing team in Qualifier 1 vs Winner of Eliminator on May 24, Chennai
Final – Winner of Qualifier 1… pic.twitter.com/tsjWwdmGvL
— Cricketopia (@CricketopiaCom) May 19, 2024
ಮಂಗಳವಾರ(ಮೇ 21) ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೈದರಾಬಾದ್ ಕಣಕ್ಕಿಳಿಯಲಿದೆ.
ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡವು, ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಎರಡೂ ಪಂದ್ಯಗಳು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
RCB – No matches lost in May.
RR – No matches won in May.
– RCB WILL MEET RR IN THE ELIMINATOR ON WEDNESDAY. 🏆 pic.twitter.com/1fVrqWkJEs
— Mufaddal Vohra (@mufaddal_vohra) May 19, 2024
ಸತತವಾಗಿ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಫ್ಗೆ ಲಗ್ಗೆಯಿಟ್ಟ ಆರ್ಸಿಬಿಗೆ ಎಲಿಮಿನೇಟರ್ ಪಂದ್ಯದಲ್ಲೂ ಅದೃಷ್ಟ ಕೈ ಹಿಡಿಯಬಹುದೇ ಎಂದು ಕಾದು ನೋಡಬೇಕಿದೆ.
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಾಕೌಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ್ದ ಆರ್ಸಿಬಿ, ಫೈನಲ್ಗೇರುವ ಹುಮ್ಮಸ್ಸಿನಲ್ಲಿದೆ. ಅಭಿಮಾನಿಗಳು ಕೂಡ ಈ ಸಲ ಆರ್ಸಿಬಿ ಕಪ್ ಗೆದ್ದು, ‘ಹೊಸ ಅಧ್ಯಾಯ’ ಬರೆಯಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
