ದೇಶದಲ್ಲಿ ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದು, ಬಾಲಿವುಡ್ ಹಿರಿಯ ನಟ ಪರೇಶ್ ರಾವಲ್ ಸೋಮವಾರ ಬೆಳಗ್ಗೆ ಮುಂಬೈನ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಮತದಾನ ಮಾಡಿದ ನಂತರ, ರಾವಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು ಚುನಾವಣೆಯಲ್ಲಿ ಭಾಗವಹಿಸುವ ಮಹತ್ವವನ್ನು ಒತ್ತಿ ಹೇಳಿದರು.
#WATCH | Bollywood actor Paresh Rawal says, “…There should be some provisions for those who don’t vote, like an increase in tax or some other punishment.” pic.twitter.com/sueN0F2vMD
— ANI (@ANI) May 20, 2024
“ನೀವು ಸರ್ಕಾರ ಅದನ್ನು ಮಾಡಿಲ್ಲ, ಇದನ್ನು ಮಾಡಿಲ್ಲ ಎಂದು ಹೇಳುತ್ತೀರಿ. ನೀವು ಇಂದು ಮತದಾನ ಮಾಡದಿದ್ದರೆ, ಅದಕ್ಕೆ ನೀವು ಜವಾಬ್ದಾರರಾಗಿರುತ್ತೀರಿ, ಸರ್ಕಾರವಲ್ಲ” ಎಂದು ನಟ ಪರೇಶ್ ರಾವಲ್ ತಿಳಿಸಿದರು.
ಇದನ್ನು ಓದಿದ್ದೀರಾ? ನೀವು ಮನುಷ್ಯನಾಗಿರಲೇ ಅಯೋಗ್ಯ: ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಗರಂ
ಹಾಗೆಯೇ ನಾಗರಿಕರು ತಮ್ಮ ಕರ್ತವ್ಯಗಳು ಪಾಲಿಸುವ ಜವಾಬ್ದಾರಿಯನ್ನು ಹೊರುವಂತೆ ಮನವಿ ಮಾಡಿದ ಅವರು, ಇದೇ ಸಂದರ್ಭದಲ್ಲಿ ಮತ ಚಲಾವಣೆ ಮಾಡದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತದಾನಕ್ಕೆ ಗೈರು ಹಾಜರಾಗುವವರಿಗೆ ದಂಡ ವಿಧಿಸುವಂತೆಯೂ ಸೂಚಿಸಿದರು. “ಮತ ಚಲಾಯಿಸದವರಿಗೆ ತೆರಿಗೆ ಹೆಚ್ಚಳ ಅಥವಾ ಇತರ ಶಿಕ್ಷೆಯಂತಹ ಕೆಲವು ನಿಬಂಧನೆಗಳು ಇರಬೇಕು” ಎಂದು ಅಭಿಪ್ರಾಯಿಸಿದರು.
ಮುಂಬೈನ ಆರು ಲೋಕಸಭಾ ಸ್ಥಾನಗಳಿಗೆ 5ನೇ ಹಂತಕ್ಕೆ ಚುನಾವಣೆ ನಡೆಯುತ್ತಿದೆ. ಇಂದು ಮುಂಬೈ ಉತ್ತರ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ, ಮುಂಬೈ ಉತ್ತರ ಮಧ್ಯ, ಮುಂಬೈ ದಕ್ಷಿಣ ಮತ್ತು ಮುಂಬೈ ದಕ್ಷಿಣ ಸೆಂಟ್ರಲ್‌ನಲ್ಲಿ ಮತದಾನ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶ | ನೀತಿ ಸಂಹಿತೆ ಉಲ್ಲಂಘನೆ, ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲು
ಅಕ್ಷಯ್ ಕುಮಾರ್, ಶಾಹಿದ್ ಕಪೂರ್, ಸನ್ಯಾ ಮಲ್ಹೋತ್ರಾ, ರಾಜ್‌ಕುಮಾರ್ ರಾವ್, ಕರೀನಾ ಕಪೂರ್, ಸೈಫ್ ಅಲಿ ಖಾನ್, ವರುಣ್ ಧವನ್, ಅಮಿರ್ ಖಾನ್, ಕಿರಣ್ ರಾವ್, ಮತ್ತು ಜಾನ್ವಿ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈನ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.