ರಾಯ್‌ಪುರದಿಂದ 110 ಕಿಮೀ ದೂರದಲ್ಲಿರುವ ಛತ್ತೀಸ್‌ಗಢದ ಕವರ್ಧಾ ಜಿಲ್ಲೆಯಲ್ಲಿ ಟೆಂಡು ಎಲೆಗಳನ್ನು ಸಂಗ್ರಹಿಸುವವರ ಗುಂಪನ್ನು ಸೋಮವಾರ ಸಾಗಿಸುತ್ತಿದ್ದಾಗ ಪಿಕ್ ಅಪ್ ವ್ಯಾನ್ ಪಲ್ಟಿ ಆಗಿದ್ದು, 18 ಮಹಿಳೆಯರು ಸೇರಿದಂತೆ 19 ಬುಡಕಟ್ಟು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಹಪಾನಿ ಗ್ರಾಮದ ಬಳಿಯ ಬಂಜಾರಿ ಘಾಟ್‌ನಲ್ಲಿ ಅಪಘಾತ ಸಂಭವಿಸಿದ್ದು ಈ ಬಗ್ಗೆ ಮಾಹಿತಿ ನೀಡಿದ ಕವರ್ಧಾ ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಪಲ್ಲವ, “ಹದಿಮೂರು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಆರು ಜನರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರು. ವಾಹನದಲ್ಲಿ ಸುಮಾರು 25 ಮಂದಿ ಇದ್ದರು. ಅವರು ಕಾಡಿನಲ್ಲಿ ಟೆಂಡು ಎಲೆಗಳನ್ನು ಕೀಳುವ ಕೆಲಸ ಮುಗಿಸಿ ಹಿಂತಿರುಗುತ್ತಿದ್ದರು” ಎಂದು ಹೇಳಿದ್ದಾರೆ.
#WATCH | Chhattisgarh: On the Kawardha accident, IG Deepak Jha says, “… 36 villagers, 18 men and 18 women were seated in a pickup truck while returning after collecting tendu patta… It is suspected that the brakes of the pickup truck failed because of this it fell into a deep… pic.twitter.com/DhBc3uLYZ8
— ANI (@ANI) May 20, 2024
ಚಾಲಕನ ನಿಯಂತ್ರಣ ತಪ್ಪಿದ ನಂತರ ವಾಹನವು ರಸ್ತೆಯಿಂದ ಸ್ಕಿಡ್ ಆಗಿದ್ದು, ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿ ಕಣಿವೆಯ ಕೆಳಗೆ ಅಪ್ಪಳಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ನದಿಗೆ ಬಿದ್ದು ಐವರು ವಿದ್ಯಾರ್ಥಿಗಳು ದುರ್ಮರಣ
ಕವರ್ಧಾ ಅಪಘಾತದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ, “ಇದು ದುರದೃಷ್ಟಕರ, ಟೆಂಡು ಎಲೆ ಸಂಗ್ರಹಿಸಿ ಹಿಂತಿರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ವಾಹನದ ಬ್ರೇಕ್ ವಿಫಲವಾದ ಕಾರಣ ವಾಹನವು ಆಳಕ್ಕೆ ಬಿದ್ದಿದೆ. ಇಲ್ಲಿ ರಸ್ತೆ ಅಷ್ಟೊಂದು ಹದಗೆಟ್ಟಿಲ್ಲ, ವಾಹನ ನಿಯಂತ್ರಣ ತಪ್ಪಿದೆ. ಸಿಎಂ ಭರವಸೆಯಂತೆ ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತೇವೆ” ಎಂದು ತಿಳಿಸಿದರು.
#WATCH | On the Kawardha accident, Chhattisgarh Deputy CM Vijay Sharma says, “It is unfortunate. 19 people died in the accident which took place when these people were returning after collecting tendu patta. The brakes of the vehicle failed causing the vehicle to fall into the… pic.twitter.com/sQjZrPu1Z9
— ANI (@ANI) May 20, 2024
ಈ ಬಗ್ಗೆ ಅಧಿಕ ಮಾಹಿತಿ ನೀಡಿದ ಐಜಿ ದೀಪಕ್ ಝಾ, “36 ಗ್ರಾಮಸ್ಥರು, 18 ಪುರುಷರು ಮತ್ತು 18 ಮಹಿಳೆಯರು ಪಿಕಪ್ ಟ್ರಕ್‌ನಲ್ಲಿ ಕುಳಿತು ಟೆಂಡು ಎಲೆ ಸಂಗ್ರಹಿಸಿ ಹಿಂತಿರುಗುತ್ತಿದ್ದಾಗ ಪಿಕಪ್ ಟ್ರಕ್‌ನ ಬ್ರೇಕ್ ವಿಫಲವಾಗಿರುವ ಶಂಕೆ ಇದೆ. ಇದರಿಂದಾಗಿ ವ್ಯಾನ್ ಆಳವಾದ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ರೈಲಿಗೆ ಸಿಲುಕಿ ಮೂವರು ಯುವಕರು ದುರ್ಮರಣ
“ಅಪಘಾತದ ಕಾರಣ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ಜನರನ್ನು ಸಾಗಿಸಲು ನಾವು ಪಿಕಪ್ ವಾಹನಗಳನ್ನು ಬಳಸದಂತೆ ಜಾಗೃತಿ ಮೂಡಿಸುತ್ತೇವೆ. ವಾಹನವು ನಿಯಂತ್ರಣ ತಪ್ಪಿದ ತಕ್ಷಣ ಚಾಲಕನು ವಾಹನದಿಂದ ಜಿಗಿದಿದ್ದ ಸುರಕ್ಷಿತನಾಗಿದ್ದಾನೆ” ಎಂದು ತಿಳಿಸಿದರು.
ಮೃತರು ಬೈಗಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಅಪಘಾತ ಮತ್ತು ಮರಣಕ್ಕೆ ಸಂತಾಪ ವ್ತಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸಿಎಂ ಸೂಚಿಸಿದ್ದಾರೆ.