ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಚಿತ್ತ ರಂಜನ್ ದಶ್ ಮಂಗಳವಾರ(ಮೇ.20) ನಿವೃತ್ತರಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್‌ಎಸ್‌ಎಸ್) ನನ್ನ ವ್ಯಕ್ತಿತ್ವ ಬದಲಾಗಲು ಹಾಗೂ ದೇಶಭಕ್ತಿಯ ಬಗ್ಗೆ ದೈರ್ಯ ತುಂಬಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಬೀಳ್ಗೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು,” ನಾನು ಚಿಕ್ಕಂದಿನಿಂದಲೂ ಆರ್‌ಎಸ್‌ಎಸ್ ಜೊತೆ ನಂಟು ಹೊಂದಿದ್ದೇನೆ. ನಾನು ನನ್ನ ನಿಜ ಸ್ವರೂಪವನ್ನು ಬಿಚ್ಚಿಡಬೇಕು.ನಾನು ಒಂದು ಸಂಸ್ಥೆಗೆ ಹೆಚ್ಚು ಚಿರಋಣಿಯಾಗಿದ್ದೇನೆ. ನಾನು ಚಿಕ್ಕಂದಿನಿಂದ ಯುವಕನಾಗುವವರೆಗೂ ಆರ್‌ಎಸ್‌ಎಸ್‌ನಲ್ಲಿದ್ದೆ. ನಾನು ಅಲ್ಲಿಂದ ಧೈರ್ಯ, ಪ್ರಾಮಾಣಿಕತೆ, ಪರರ ಬಗ್ಗೆ ಸಮಾನ ಭಾವನೆಗಳು ಹಾಗೂ ದೇಶಭಕ್ತಿಯ ಭಾವನೆ, ಎಲ್ಲಿ ಕೆಲಸ ಮಾಡಿದರೂ ಭದ್ಧತೆಯಿಂದಿರುವುದನ್ನು ಕಲಿತ್ತಿದ್ದೇನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ
“ನಾನು ಆರ್‌ಎಸ್‌ಎಸ್‌ನಲ್ಲಿ ಆಗಲು ಇದ್ದೆ, ಈಗಲೂ ಇದ್ದೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನ್ಯಾಯಾಧೀಶರಾದ ಬಳಿಕ ಕೆಲಸದ ನಿಮಿತ್ತ ಕಳೆದ 37 ವರ್ಷಗಳಿಂದ ನಾನು ಆರ್‌ಎಸ್‌ಎಸ್‌ನಿಂದ ಅಂತರವನ್ನು ಕಾಯ್ದುಕೊಂಡಿದ್ದೆ. ನನ್ನ ವೃತ್ತಿ ಜೀವನದ ಏಳಿಕೆಯಲ್ಲಿ ಆರ್‌ಎಸ್‌ಎಸ್ ಸದಸ್ಯತ್ವವನ್ನು ಬಳಸಿಕೊಳ್ಳಲಿಲ್ಲ. ಏಕೆಂದರೆ ಅದು ನನ್ನ ತತ್ವಗಳಿಗೆ ವಿರುದ್ಧವಾಗಿತ್ತು” ಎಂದು ಹೇಳಿದರು.
“ತೀರ್ಪು ನೀಡುವಾಗ ನಾನು ಪಕ್ಷತೀತವಾಗಿ ಕಾರ್ಯನಿರ್ವಹಿಸಿದ್ದೇನೆ. ಬಿಜೆಪಿ, ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ಟಿಎಂಸಿ ಯಾರೆ ಇರಲಿ ಎಲ್ಲರಿಗೂ ಸಮಾನವಾಗಿ ಪರಿಗಣಿಸಿದ್ದೇನೆ. ನಾನು ಯಾರ ವಿರುದ್ಧವಾಗಿ ಇರಲಿಲ್ಲ.ನನಗೆ ಎಲ್ಲರೂ ಸಮಾನರು. ನಾನು ನ್ಯಾಯ ನೀಡುವಾಗ ಎರಡು ತತ್ವಗಳನ್ನು ಅನುಸರಿಸುತ್ತಿದ್ದೆ. ಮೊದಲನೆಯದು ಸಹಾನುಭೂತಿ, ಎರಡನೆಯದು ನ್ಯಾಯಕ್ಕಾಗಿ ಕಾನೂನನ್ನು ಬಗ್ಗಿಸಬಹುದು ಆದರೆ ಕಾನೂನಿಗಾಗಿ ನ್ಯಾಯವನ್ನು ಬಗ್ಗಿಸಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ಒಡಿಶಾ ಮೂಲದವರಾದ ದಶ್ ಒಡಿಶಾ ಹಾಗೂ ಕಲ್ಕತ್ತಾ ಹೈಕೋರ್ಟ್‌ಗಳಲ್ಲಿ ನ್ಯಾಯಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ.
