ಚೀನಾದ ಕಮ್ಯೂನಿಸ್ಟ್ ಪಕ್ಷದೊಂದಿಗೆ 2008ರಿಂದ ಈವರೆಗೆ ಬಿಜೆಪಿಯು 12 ಸಭೆಗಳನ್ನು ನಡೆಸಿದ್ದು, ಆ ಸಭೆಗಳ ಸಂಪೂರ್ಣ ದಾಖಲೆಯನ್ನು ನೀಡುವಂತೆ ಕಾಂಗ್ರೆಸ್ ಸೋಮವಾರ ಹೇಳಿದೆ. ‘ಈ ಪ್ರತಿ ಸಭೆಗಳಲ್ಲಿ ಏನಾಗಿದೆ, ಎರಡು ಪಕ್ಷಗಳು ಏಕೆ ಆಗಾಗ್ಗೆ ಸಭೆ ನಡೆಸಿದೆ’ ಎಂದು ವಿವರಿಸಲು ಕಾಂಗ್ರೆಸ್ ಬಿಜೆಪಿಗೆ ಪ್ರಕಟಣೆಯಲ್ಲಿ ತಿಳಿಸಿದೆ.
“ಜೂನ್ 2020 ರಿಂದ ಪ್ರಧಾನಿ ಚೀನಾವು ಲಡಾಖ್‌ನಲ್ಲಿ ಮಾಡಿದ ಕಾರ್ಯಗಳಿಗೆ ಕ್ಲೀನ್ ಚಿಟ್ ನೀಡಿದ ನಂತರ ಭಾರತದ ಜನರು ಚೀನಾದ ವಿರುದ್ಧ ನಿಲ್ಲಲು ಬಿಜೆಪಿಗೆ ಏಕೆ ಇಷ್ಟವಿರಲಿಲ್ಲ ಎಂದು ಕೇಳುತ್ತಿದ್ದಾರೆ. ಬಿಜೆಪಿ ಮತ್ತು ಚೀನಾದ ಕಮ್ಯೂನಿಸ್ಟ್ ಪಕ್ಷದ ನಡುವಿನ ನಿಕಟ ಸಂಪರ್ಕಗಳು ಇದಕ್ಕೆ ಕಾರಣವೇ” ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ಪ್ರಶ್ನಿಸಿದ್ದಾರೆ.
“There have been at least 12 meetings since 2008 where BJP politicians have met with Communist Party of China officials, most of them in China itself. What happened at each of these meetings? Why have these two parties met so frequently? The Congress demands a complete record of… pic.twitter.com/TAmVR0b2Fc
— Congress (@INCIndia) May 20, 2024
ಇದನ್ನು ಓದಿದ್ದೀರಾ? ಕಲಬುರಗಿ | ಎಸ್‌ಯುಸಿಐ(ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
“2008ರಿಂದ ಈವರೆಗೆ ಕನಿಷ್ಠ 12 ಸಭೆಗಳು ನಡೆದಿವೆ. ಬಿಜೆಪಿ ರಾಜಕಾರಣಿಗಳು ಚೀನಾದ ಕಮ್ಯೂನಿಸ್ಟ್ ಪಕ್ಷದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಅದು ಕೂಡಾ ಬಹುತೇಕ ಸಭೆ, ಭೇಟಿ ಚೀನಾದಲ್ಲಿಯೇ ನಡೆದಿದೆ” ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಕೇಳಿದ ಖೇರಾ ‘ಪದೇ ಪದೇ ಸಭೆ’ ನಡೆಸು ಹಿಂದಿರುವ ಕಾರಣ ತಿಳಿಸುವಂತೆ ಹೇಳಿದ್ದಾರೆ. ಹಾಗೆಯೇ 2017ರಲ್ಲಿ ಡೋಕ್ಲಾಮ್ ಘರ್ಷಣೆಯ ನಂತರ ಈ ಭೇಟಿಗಳ ಹಿಂದಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿಯ ಮೂರು ಸುಳ್ಳುಗಳು | ಮಣಿಪುರ, ಚೀನಾ ಅತಿಕ್ರಮಣ ಮತ್ತು ಕೋವಿಡ್‌ನಿಂದ ಬಚಾವು- ಇದು ಜನದ್ರೋಹವಲ್ಲವೇ?
“ಈ ಪ್ರತಿಯೊಂದು ಸಭೆಗಳಲ್ಲಿ ಏನಾಗಿದೆ? ಈ ಎರಡು ಪಕ್ಷಗಳು ಏಕೆ ಆಗಾಗ್ಗೆ ಸಭೆ ನಡೆಸುತ್ತವೆ? ಬಿಜೆಪಿ ಕಾರ್ಯಕರ್ತರು ಕಮ್ಯೂನಿಸ್ಟ್ ಪಕ್ಷದ ‘ಶಾಲೆಗೆ’ ಹೋದಾಗ, ಅವರಿಗೆ ಏನು ಕಲಿಸಲಾಗಿದೆ? ಒಂದೇ ತಿಂಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್ ನಾಯಕರು ಸಿಸಿಪಿಯನ್ನು ಏಕೆ ಭೇಟಿ ಮಾಡಿದರು? ಜೂನ್ 2017ರ ಡೋಕ್ಲಾಮ್‌ನಲ್ಲಿ ಗಡಿ ಘರ್ಷಣೆಗೂ ಇದಕ್ಕೂ ಸಂಬಂಧವಿದೆಯೇ” ಎಂದು ಕೇಳಿದರು.
ಬಿಜೆಪಿ ಮತ್ತು ಚೀನಾದ ಕಮ್ಯೂನಿಸ್ಟ್ ಪಕ್ಷದ ನಡುವಿನ ಎಲ್ಲಾ ಸಭೆಗಳ ವಿವರಗಳನ್ನು ಹಂಚಿಕೊಂಡ ಖೇರಾ, “ಅಕ್ಟೋಬರ್ 2008ರಲ್ಲಿ, 15 ಸದಸ್ಯರ ಚೀನಾದ ನಿಯೋಗವು ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿತ್ತು. ನಂತರ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಯಾವಾಗಲೂ ಚೀನಾದೊಂದಿಗೆ ಸಕಾರಾತ್ಮಕ ಬಾಂಧವ್ಯವನ್ನು ಬೆಳೆಸಲು ಒಲವು ತೋರುತ್ತಾ ಬಂದಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.