ಪ್ರೀತಿಸಿದ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಬಿಸಿ ನೀರು ಎರಚಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಸುಹೇಲ್ (27) ಸಂತ್ರಸ್ತ ಯುವಕ. ಈತ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಗಣಪತಿ ಬೀದಿ ನಿವಾಸಿ. ಈ ಯುವಕನ ಮೇಲೆ ಬಿಸಿ ನೀರು ಎರಚಲಾಗಿದ್ದು, ಯುವಕನ ಮುಖ, ಗುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಇದೀಗ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುಹೇಲ್ ಮದೆನಾಡಿನ ಜೀನತ್ ಎಂಬಾಕೆಯನ್ನ ಪ್ರೀತಿ ಮಾಡುತ್ತಿದ್ದನು. ಜೀನತ್ ಸುಹೇಲ್‌ನಿಗೆ ಕರೆ ಮಾಡಿ ತನ್ನ ಮನೆಯಲ್ಲಿ ಹಿಂಸೆ ನೀಡುತ್ತಿದ್ದಾರೆ. ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿದ್ದಾಳೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ 5, 8 ಹಾಗೂ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಪಾಸ್
ಹೀಗಾಗಿ, ಜೀನತ್‌ನನ್ನು ಕರೆತರಲು ಸುಹೇಲ್ ಆಕೆಯ ಮನೆಗೆ ತೆರಳಿದ್ದಾನೆ. ಈ ವೇಳೆ, ಜೀನತ್ ತಂದೆ ಸಾಧಿಕ್ ಯುವಕನ ಜೊತೆ ಜಗಳ ಮಾಡಿದ್ದಾರೆ. ಜಗಳದ ವೇಳೆ, ಜೀನತ್ ತಂದೆ ಸುಹೇಲ್ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸುಹೇಲ್ನನ್ನು ಮಡಿಕೇರಿ ಕೊಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.