ಪ್ರಧಾನಿ ಮೋದಿ ಅವರು ಮೇ 20ರಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರೆ. ”ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ನಮ್ಮ ಯುವಜನರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವಲ್ಲಿ ನಮ್ಮ ಸರ್ಕಾರ ದಾಖಲೆ ಮಾಡಿದೆ. ಉತ್ತಮವಾಗಿ ಕೆಲಸ ಮಾಡಿದೆ” ಅಂತ ಮೋದಿ ಹೇಳಿಕೊಂಡಿದ್ದಾರೆ.
ವಾಸ್ತವ ಮತ್ತು ಜನಾಭಿಪ್ರಾಯ: ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ದೇಶದ ಜನರು ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ಎರಡು ಸಮಸ್ಯೆಗಳು ತಮ್ಮ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ‘ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಪಡೆಯುವುದು ತುಂಬಾ ಸುಲಭವೆಂದು ಭಾವಿಸುತ್ತೀರಾ’ ಎಂಬ ಪ್ರಶ್ನೆಗೆ ಉತ್ತರಿಸಿರುವ ಜನರಲ್ಲಿ 62% ಜನರು ಉದ್ಯೋಗ ಪಡೆಯುವುದು ಅತ್ಯಂಕ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಈದಿನ.ಕಾಮ್ ಕೂಡ ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿದ್ದು, 77.67% ಜನರು ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಉದ್ಯೋಗ ಸಿಗದೆ ಗುಳೆಹೋಗುವ ಪರಿಸ್ಥಿತಿ ಇದೆ ಎಂದಿದ್ದಾರೆ. ಅದರಲ್ಲೂ, 37.89% ಜನರು ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ನೇರ ಕಾರಣ ಎಂದು ಹೇಳಿದ್ದಾರೆ.
ನಿರುದ್ಯೋಗ ಮತ್ತು ಸತ್ಯಗಳು:
- ಭಾರತದಲ್ಲಿ ನಿರುದ್ಯೋಗ ದರವು 2023-24ರಲ್ಲಿ 8%ಕ್ಕೆ ಏರಿದೆ
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಜನರಲ್ಲಿ ನಿರುದ್ಯೋಗ ದರವು ಹಿಂದಿನ ಎರಡು ಆರ್ಥಿಕ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಏರಿಕೆಯಾಗಿದೆ. ಹಿಂದಿನ ಎರಡು ವರ್ಷಗಳಲ್ಲಿ 7.5 ಮತ್ತು 7.7% ಇದ್ದ ನಿರುದ್ಯೋಗ ದರ, 2023-24ರ ಆರ್ಥಿಕ ವರ್ಷದಲ್ಲಿ 8% ಕ್ಕೆ ಏರಿದೆ.
CMIE ಅಂಕಿಅಂಶಗಳ ಪ್ರಕಾರ, ಉದ್ಯೋಗಕ್ಕಾಗಿ ಸಕ್ರಿಯವಾಗಿ ಹುಡುಕುತ್ತಿರುವ ನಿರುದ್ಯೋಗಿಗಳ ಸಂಖ್ಯೆಯು ಸುಮಾರು 3.7 ಕೋಟಿ ಇದೆ. ಅಲ್ಲದೆ, 2019ರಲ್ಲಿ ನಿರುದ್ಯೋಗ ದರವು ಭಾರೀ ಏರಿಕೆಯಾಗಿತ್ತು. ಕಳೆದ 45 ವರ್ಷಗಳಲ್ಲಿಯೇ ಎಂದೂ ಕಂಡರಿಯದ ನಿರುದ್ಯೋಗ ಪ್ರಮಾಣ ಎದುರಾಗಿತ್ತು.
ಕಾರ್ಮಿಕ ಬಲದ ಭಾಗವಹಿಸುವಿಕೆ
ಹೆಚ್ಚುವರಿಯಾಗಿ, ಕಾರ್ಮಿಕ ಮಾರುಕಟ್ಟೆಯ ಪ್ರಮುಖ ಸೂಚಕವಾದ ಕಾರ್ಮಿಕ ಭಾಗವಹಿಸುವಿಕೆಯ ದರವು ಕೊರೋನ ಸಮಯದಲ್ಲಿ ಗಂಭೀರವಾಗಿ ಕುಸಿದಿತ್ತು. ಈಗಲೂ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ.
2016-17ರಲ್ಲಿ ಭಾರತದ ಕಾರ್ಮಿಕರ ಭಾಗವಹಿಸುವಿಕೆ ದರವು 46.2% ರಷ್ಟಿತ್ತು. ಆದರೆ, 2020-21ರಲ್ಲಿ 40% ಕುಸಿತ ಕಂಡಿತು. ಅಲ್ಲಿಂದ ಚೇತರಿಕೆಗಾಗಿ ಹರಸಾಹಸ ಪಡುತ್ತಿರುವ ದರವು, 2023-24ರಲ್ಲಿ 40.4%ನಲ್ಲಿ ನಿಂತಿದೆ. 2016-17ರಂದ 2023-24ರ ನಡುವೆ ಬರೋಬ್ಬರಿ 5.8%ರಷ್ಟು ಕಡಿಮೆಯಾಗಿದೆ.
- ಭಾರತದಲ್ಲಿ ನಿರುದ್ಯೋಗವು 2019ರಲ್ಲಿ 45 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ
2019ರಲ್ಲಿ, ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2017-18ರಲ್ಲಿ ನಿರುದ್ಯೋಗ ದರವು 6.1% ಆಗಿತ್ತು. ಈ ಮಾಹಿತಿಯನ್ನು 2019ರ ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರ ಬಿಡುಗಡೆ ಮಾಡಿತ್ತು. ಈ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲೇ ಗರಿಷ್ಠ ನಿರುದ್ಯೋಗ ದರವೆಂದು ಗುರುತಿಸಲಾಗಿತ್ತು. ಆದರೆ, ವರದಿಯನ್ನು ಮೋದಿ ಸರ್ಕಾರ ಮರೆಮಾಚಿತು. ಸರ್ಕಾರದ ನಡೆಯನ್ನು ಪ್ರತಿಭಟಿಸಿ ಇಬ್ಬರು ಅಧಿಕಾರಿಗಳು ರಾಜೀನಾಮೆಯನ್ನೂ ನೀಡಿದರು.
- ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವ ನಿರುದ್ಯೋಗಿಗಳ ದರ ಹೆಚ್ಚಳ
2022 ರಲ್ಲಿ, ಭಾರತದ ಯುವ ನಿರುದ್ಯೋಗಿಗಳ ದರವು ಪಾಕಿಸ್ತಾನದಲ್ಲಿ 11.3%, ಬಾಂಗ್ಲಾದೇಶದಲ್ಲಿ 12.9%, ಮತ್ತು ಭೂತಾನ್‌ನಲ್ಲಿ 14.4% ಇದ್ದರೆ, ಈ ದರವು ಆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ದುಪ್ಪಟ್ಟಾಗಿದೆ. ದೇಶದ ಯುವ ನಿರುದ್ಯೋಗಿಗಳ ದರ 23.22%ರಷ್ಟಿದೆ ಎಂದು ವಿಶ್ವ ಬ್ಯಾಂಕ್ ವರದಿಯು ಕಂಡುಹಿಡಿದಿದೆ. ಅದೇ ವರ್ಷದಲ್ಲಿ, ಚೀನಾದ ಯುವ ನಿರುದ್ಯೋಗಿಗಳ ದರವು 13.2% ಇತ್ತು.
- ನಿರುದ್ಯೋಗಿಗಳ ಪೈಕಿ ಯುವಜನರು ದಾಖಲೆ ಸಂಖ್ಯೆಯಲ್ಲಿದ್ದಾರೆ
2022 ರಲ್ಲಿ, ಒಟ್ಟು ನಿರುದ್ಯೋಗಿ ಜನಸಂಖ್ಯೆಯಲ್ಲಿ ನಿರುದ್ಯೋಗಿ ಯುವಜನರ ಪಾಲು 82.9% ಆಗಿತ್ತು. ಭಾರತ ಉದ್ಯೋಗ ವರದಿ-2024 (ILO) ಇದನ್ನು ಬಹಿರಂಗ ಪಡಿಸಿದೆ.
ಎಲ್ಲ ನಿರುದ್ಯೋಗಿಗಳಲ್ಲಿ ವಿದ್ಯಾವಂತ ಯುವಜನರ ಪಾಲು 2000ನೇ ಇಸವಿಯಲ್ಲಿ 54.2% ಇತ್ತು. ಅದು 2022ರ ವೇಳೆಗೆ 82.9%ಗೆ ಏರಿಕೆಯಾಗಿದೆ. ಇವರಲ್ಲಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕ ಪದವಿ ಹಾಗೂ ವೃತ್ತಿಪರ ಕೋರ್ಸುಗಳನ್ನು ಮಾಡಿದವರ ಸಂಖ್ಯೆಯೇ ಹೆಚ್ಚಾಗಿದೆ.
- ಕೇಂದ್ರ ಸರ್ಕಾರದ ಅಡಿಯಲ್ಲಿ ಅಧಿಕ ಹುದ್ದೆಗಳ ಖಾಲಿ
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಲವಾರು ಸೇವಾ ವಲಯಗಳಲ್ಲಿ ಭಾರೀ ಸಂಖ್ಯೆಯ ಉದ್ಯೋಗಗಳು ಖಾಲಿ ಇವೆ. ಕೇಂದ್ರ ಅಡಿಯಲ್ಲಿ ಸುಮಾರು 30 ಲಕ್ಷ ಸರ್ಕಾರಿ ಹುದ್ದೆಗಳು ಭರ್ತಿಗೆ ಬಾಕಿ ಇವೆ ಎಂದು ವರದಿಗಳು ಹೇಳುತ್ತಿವೆ.
ಇನ್ನು, ಸಶಸ್ತ್ರ ಪಡೆಗಳು ಉದ್ಯೋಗದ ದೊಡ್ಡ ಮೂಲಗಳಾಗಿವೆ. ಆದರೆ, ಕೇಂದ್ರ ಸರ್ಕಾರವು ‘ಅಗ್ನಿವೀರ್’ ಯೋಜನೆಯ ಮೂಲಕ ಅಲ್ಲಿನ ಉದ್ಯೋಗಗಳನ್ನೇ ಅಭದ್ರಗೊಳಿಸಿದೆ. ಅಗ್ನಿವೀರ್ ಅಡಿಯಲ್ಲಿ ನಾಲ್ಕು ವರ್ಷಗಳ ಅವಧಿಗಾಗಿನ ನೇಮಕಾತಿಗಳು ಸೇನೆಯ ಮೇಲೂ ಪರಿಣಾಮ ಬೀರುತ್ತಿದೆ. ಆದರೆ, ಅಗ್ನಿವೀರ್ ಯೋಜನೆಯಿಂದಾದ ಕುಸಿತದ ಬಗ್ಗೆ ಮೋದಿ ಸರ್ಕಾರ ಹೇಳಿಕೊಳ್ಳುತ್ತಿಲ್ಲ ಮತ್ತು ಯೋಜನೆಯನ್ನು ಪ್ರಚಾರವನ್ನೂ ಮಾಡುತ್ತಿಲ್ಲ. ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದರೆ. ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸುವುದಾಗಿ ಪಣ ತೊಟ್ಟಿವೆ.
- ಐಟಿ ವಲಯದ ಉದ್ಯೋಗಗಳ ಕುಸಿತ
ನೇಮಕಾತಿ ಸಂಸ್ಥೆ ಫೌನಿಟ್‌ನ ಅಂಕಿಅಂಶಗಳ ಪ್ರಕಾರ, “ಐಟಿ ಕ್ಷೇತ್ರದಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎರಡೂ ವಿಭಾಗಗಳಲ್ಲಿಯೂ ಆನ್‌ಲೈನ್ ನೇಮಕಾತಿ ಚಟುವಟಿಕೆಯು 2022ಕ್ಕೆ ಹೋಲಿಸಿದರೆ, 2023ರಲ್ಲಿ 18% ರಷ್ಟು ಕುಸಿದಿದೆ” ಎಂದು ಹೇಳಿದೆ.
ಅಂದಹಾಗೆ, 2014ರಲ್ಲಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಅದರಂತೆ, ಈ 10 ವರ್ಷದಲ್ಲಿ 20 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಆದರೆ, ಈ 10 ವರ್ಷಗಳಲ್ಲಿ 1.5 ಕೋಟಿ ಉದ್ಯೋಗಗಳನ್ನು ಮಾತ್ರವೇ ಸೃಷ್ಟಿಸಿರುವುದಾಗಿ ಮೋದಿ ಸಂಪುಟದ ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
ಮುಖ್ಯ ವಿಷಯವೆಂದರೆ, 2022ರಲ್ಲಿ ದೇಶಾದ್ಯಂತ ಒಟ್ಟು 15,783 ಯುವಜನರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಿಂದ 2022ರ ನಡುವೆ 28,464 ಯುವಜನರು ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಅಂದರೆ, ‘ಯುವಜನರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವಲ್ಲಿ ದಾಖಲೆ ಮಾಡಿದೆ’ ಎಂದು ಮೋದಿ ಹೇಳಿಕೊಳ್ಳುತ್ತಿರುವುದು ಅವರದ್ದೇ ಭಾಷೆಯಲ್ಲಿ ‘ಜುಮ್ಲಾ’ ಅಷ್ಟೇ…
good article , revealing to those who disbelieve ,but
employment unemployment underemployment , workers migration skill migration for example
part time ola operators,-swiggy zamoto delivery works not only government change and vagaries of supply chan management has caused disarray in work worker employed unemployed definitions and its derivatives , a thorough knowledge spreading and awareness should also be carried out by all concerned , Mr Somashekar chalya
your writing is good ,it can be more towards alternative suggestions for issues – for example is it difficult to find out district wise unemployed in our country -our expressions can be more adequate then locating shortfalls and untruths ,we can locate possibilities too.
productivity usefulness in terms of earning (includes agriculture plus all services)is the only answer for the nations upkeeping and progress ,thanks for KOTORA SATHYA -THOUGH NOT A WHOLESOME IN NATURE