ಲೀಗ್ ಹಂತದ ಪಂದ್ಯಗಳಲ್ಲಿ ಬೌಲರ್‌ಗಳನ್ನು ಮನಬಂದಂತೆ ಚಚ್ಚಿ ಸುದ್ದಿಯಾಗುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್‌ಗಳು, ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರನ್ ಗಳಿಸಲು ಅಕ್ಷರಶಃ ಪರದಾಡಿದರು.
ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಮುಖ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವೈಫಲ್ಯಕ್ಕೊಳಗಾದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಕೆಕೆಆರ್‌ನ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ 19.3 ಓವರ್‌ಗಳಲ್ಲಿ 159 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ.
Starc sets the tone for Qualifier 1 with a ripper! 🔥#IPLonJioCinema #TATAIPL #KKRvSRH #TATAIPLPlayoffs #IPLinBengali pic.twitter.com/3AJG5BvZwT
— JioCinema (@JioCinema) May 21, 2024
ಫೈನಲ್‌ಗೆ ತಲುಪಲು ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಹೈದರಾಬಾದ್ ತಂಡವು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಆರಂಭಿಕ ಹಂತದಲ್ಲೇ ಮಿಚೆಲ್ ಸ್ಟಾರ್ಕ್ ಅವರ ಪ್ರಖರ ಬೌಲಿಂಗ್ ದಾಳಿಗೆ ಸಿಲುಕಿ ವೈಫಲ್ಯಕ್ಕೊಳಗಾದರು.
ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಸನ್‌ರೈಸರ್ಸ್ ಹೈದರಾಬಾದಿನ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್, ಕ್ಲೀನ್‌ಬೌಲ್ಡ್ ಆದರು. ಹೆಡ್ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು. ಆ ಮೂಲಕ ಆರಂಭದಲ್ಲೇ ಹೈದರಾಬಾದ್ ಬೃಹತ್ ಮೊತ್ತ ಹಾಕುವುದಕ್ಕೆ ಕಡಿವಾಣ ಹಾಕಿದರು.
ವೈಭವ್ ಅರೋರಾ ಹೈದರಾಬಾದ್‌ನ ಇನ್ನೋರ್ವ ಆರಂಭಿಕ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಕೆಕೆಆರ್‌ಗೆ ಎರಡನೇ ಯಶಸ್ಸನ್ನು ನೀಡಿದರು. ನಾಲ್ಕು ಎಸೆತಗಳಲ್ಲಿ ಮೂರು ರನ್ ಗಳಿಸಿ ಅಭಿಷೇಕ್ ಔಟಾದರು.
Crucial runs from captain Cummins gives SRH a total to bowl at
👉https://t.co/6cmgmyUXDs | #KKRvSRH | #IPL2024 pic.twitter.com/OmU5SkvSPh
— ESPNcricinfo (@ESPNcricinfo) May 21, 2024
ಪವರ್ ಪ್ಲೇ ಮುಗಿಯುವುದರೊಳಗೆ ಮತ್ತೆ ದಾಳಿಗಿಳಿದ ಮಿಚೆಲ್ ಸ್ಟಾರ್ಕ್, ತಮ್ಮ ಅದ್ಭುತ ಬೌಲಿಂಗ್ ಮೂಲಕ ನಿತೀಶ್ ರೆಡ್ಡಿಯವರ ವಿಕೆಟ್ ಪಡೆಯುವ ಮೂಲಕ ಹೈದರಾಬಾದ್‌ಗೆ ಮತ್ತೊಂದು ಹೊಡೆತ ನೀಡಿದರು. ನಿತೀಶ್ ರೆಡ್ಡಿ 9 ರನ್ ಗಳಿಸಿ ಔಟಾದರೆ, ಬಳಿಕ ಕ್ರೀಸ್‌ಗೆ ಬಂದ ಶಾಬಾಝ್ ಅಹ್ಮದ್‌ರನ್ನೂ ಕೂಡ ಮೊದಲ ಎಸೆತದಲ್ಲೇ ಕ್ಲೀನ್‌ಬೌಲ್ಡ್ ಮಾಡಿದರು. ಆ ಮೂಲಕ, ಕ್ರೀಸ್‌ಗೆ ಬಂದ ಶಾಬಾಝ್‌ರನ್ನು ಬಂದಷ್ಟೇ ವೇಗದಲ್ಲೇ ಪೆವಿಲಿಯನ್ ಕಡೆಗೆ ತೆರಳುವಂತೆ ಮಾಡಿದರು.
6 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ 5ನೇ ವಿಕೆಟ್‌ಗೆ ರಾಹುಲ್ ತ್ರಿಪಾಠಿ ಹಾಗೂ ಕ್ಲಾಸೆನ್ ಜೊತೆಯಾಟ ನಡೆಸಲು ಯತ್ನಿಸಿದರು. 62 ರನ್‌ಗಳ ಜೊತೆಯಾಟ ನಡೆಸಿ ಮುಂದುವರಿಯುತ್ತಿದ್ದಾಗ, ಸ್ಟಾರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಸ್ಪಿನ್ನರ್ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾಗಿ, ರಿಂಕು ಸಿಂಗ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಕ್ಲಾಸೆನ್, ಔಟಾಗುವುದಕ್ಕೂ ಮುನ್ನ 21 ಎಸೆತಗಳಲ್ಲಿ 32 ರನ್ ಗಳಿಸಿದರು.
Sport can be cruel sometimes 💔#IPLonJioCinema #TATAIPL #KKRvSRH #TATAIPLPlayoffs pic.twitter.com/zoZPaodavk
— JioCinema (@JioCinema) May 21, 2024
ಒಂದು ಕಡೆ ವಿಕೆಟ್ ಉರುಳಿತ್ತಿದ್ದರೂ ಇನ್ನೊಂದೆಡೆ ಕ್ರೀಸ್‌ನಲ್ಲಿ ನಿಂತು ರನ್ ಗಳಿಸುತ್ತಿದ್ದ ರಾಹುಲ್ ತ್ರಿಪಾಠಿ ಅರ್ಥಶತಕ ಪೂರೈಸಿಕೊಂಡರು. 35 ಎಸೆತಗಳಲ್ಲಿ 55 ರನ್(7 ಬೌಂಡರಿ, 1 ಸಿಕ್ಸ್) ಗಳಿಸಿ ಮುಂದುವರಿಯುತ್ತಿದ್ದಾಗ ಅಬ್ದುಲ್ ಸಮದ್ ಜೊತೆಗೆ ಸೇರಿ ಒಂದು ರನ್ ಕದಿಯಲೆತ್ನಿಸಿದ ವೇಳೆ, ರನೌಟ್‌ಗೆ ಬಲಿಯಾದರು. ಅಬ್ದುಲ್ ಸಮದ್ 16 ರನ್ ಗಳಿಸಿ, ಔಟಾದರು.
Onto the next 20 overs that matter the most! 👊 pic.twitter.com/6ep8MdjuEI
— KolkataKnightRiders (@KKRiders) May 21, 2024
ಹೈದರಾಬಾದ್ ಪರ IMPACT PLAYER ರೂಪದಲ್ಲಿ ಕ್ರೀಸ್‌ಗೆ ಬಂದಿದ್ದ ಸನ್ವೀರ್ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ಸ್ಪಿನ್ನರ್ ಸುನಿಲ್ ನರೈನ್ ಹೈದರಾಬಾದ್‌ಗೆ ಆಘಾತ ನೀಡಿದರು. ಮೊದಲ ಎಸೆತದಲ್ಲೇ ಕ್ಲೀನ್‌ಬೌಲ್ಡ್ ಆದ ಸನ್ವೀರ್, ಖಾತೆ ತೆರೆಯದೆ ನಿರ್ಗಮಿಸಿದರು. ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ನಾಯಕ ಪ್ಯಾಟ್ ಕಮ್ಮಿನ್ಸ್ 30 ರನ್ಗಳನ್ನು ಸೇರಿಸಿದರು.
24 ಎಸೆತಗಳನ್ನು ಎದುರಿಸಿದ ಪ್ಯಾಟ್ ಕಮಿನ್ಸ್ 2 ಬೌಂಡರಿ ಹಾಗೂ 2 ಸಿಕ್ಸರ್ ಅನ್ನು ಬಾರಿಸಿ, 30 ರನ್ ಮಾಡಿದರು. ಕೆಕೆಆರ್‌ನ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಹೈದರಾಬಾದ್, ನಿಗದಿತ 19.3 ಓವರ್‌ಗಳಲ್ಲಿ 159 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಆ ಮೂಲಕ ಕೆಕೆಆರ್ ಗೆಲುವಿಗೆ 160 ರನ್‌ಗಳ ಸಾಧಾರಣ ಮೊತ್ತ ನೀಡಿದೆ.
Dre-Russ produces a piece of magic 🔥💜#IPLonJioCinema #TATAIPL #KKRvSRH #TATAIPLPlayoffs #AndreRussell pic.twitter.com/eaZRQNkes5
— JioCinema (@JioCinema) May 21, 2024
ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಬೌಲಿಂಗ್‌ನಲ್ಲಿ ಮಿಂಚಿದ ಮಿಚೆಲ್ ಸ್ಟಾರ್ಕ್ 34ಕ್ಕೆ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಆ್ಯಂಡ್ರ್ಯೂ ರಸ್ಸೆಲ್, ಹರ್ಷಿತ್ ರಾಣಾ, ವೈಭವ್ ಅರೋರಾ, ಸುನಿಲ್ ನರೈನ್ ತಲಾ ಒಂದೊಂದು ವಿಕೆಟ್ ಗಳಿಸಿದರು.
ಇದನ್ನು ಓದಿದ್ದೀರಾ? ಆಲ್‌ರೌಂಡರ್ ಸ್ವಪ್ನಿಲ್ ಸಿಂಗ್: ಆರ್‌ಸಿಬಿ ತಂಡದ ‘ಹೊಸ ಲಕ್ಕಿ ಚಾರ್ಮ್’
ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದವರು ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತವರಿಗೆ ಮತ್ತೊಂದು ಅವಕಾಶ ಸಿಗಲಿದೆ. ನಾಳೆ(ಮೇ 22) ಇದೇ ಮೈದಾನದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದರಲ್ಲಿ ಜಯ ಗಳಿಸಿದವರು, ಮೇ 24ರಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡವನ್ನು ಎದುರಿಸಲಿದ್ದಾರೆ.
