ನಾಟಕೀಯ ಬೆಳವಣಿಗೆಯಲ್ಲಿ ಲೈಂಗಿಕ ದೌರ್ಜನ್ಯ ಆರೋಪಿಯನ್ನು ಬಂಧಿಸಲು ಆಸ್ಪತ್ರೆ ವಾರ್ಡ್‌ನೊಳಗೆ ಜೀಪ್‌ನಲ್ಲಿ ಪೊಲೀಸರು ಆಗಿಮಿಸಿದ ಘಟನೆ ಉತ್ತರಾಖಂಡ್‌ನ ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಮಹಿಳಾ ವೈದ್ಯರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಅದೇ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಾರ್ಡ್‌ನೊಳಗೆ ಪ್ರವೇಶಿಸಿದ ಉತ್ತರಾಖಂಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗಿದ್ದು, ವೈದ್ಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಸೇವೆಯಿಂದ ಅಮಾನತುಗೊಳಿಸಿದೆ. ಆರೋಪಿಯು ಮಹಿಳಾ ವೈದ್ಯರಿಗೆ ಲೈಂಗಿಕ ದೌರ್ಜನ್ಯವೆಸಗಿದ್ದು, ನಂತರ ತನ್ನ ಕೃತ್ಯಕ್ಕೆ ಕ್ಷಮಿಸುವಂತೆ ಸಂದೇಶವನ್ನು ಕಳಿಸಿದ್ದ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುಪಿ-ಬಿಹಾರದಲ್ಲಿ ಧೂಳೆಬ್ಬಿಸಿದೆ ʼಖಟಾಖಟ್ ಖಟಾಖಟ್ʼ ಮಹಾಲಕ್ಷ್ಮೀ ಯೋಜನೆ
ಘಟನೆಯಿಂದ ಮಹಿಳಾ ವೈದ್ಯರು ಮಾನಸಿಕವಾಗಿ ಹಿಂಸೆಗೊಳಗಾದ ನಂತರ ಆಸ್ಪತ್ರೆ ಮಂಡಳಿ ಆಂತರಿಕ ತನಿಖೆ ಕೈಗೊಂಡು ಪೊಲೀಸರಿಗೆ ದೂರು ದಾಖಲಿಸಿದೆ.
“ವೈದ್ಯರ ದೂರಿನ ಆಧಾರದ ಮೇಲೆ ಆರೋಪಿಯನ್ನು ಅಮಾನತುಗೊಳಿಸಲಾಗಿದೆ.ಆಂತರಿಕ ದೂರು ಮಂಡಳಿ ‘ಪೊಶ್’ ಕಾಯ್ದೆಯ ಅನುಗುಣವಾಗಿ ತನಿಖೆ ಕೈಗೊಂಡಿದೆ. ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ” ಎಂದು ಏಮ್ಸ್‌ನ ಪಿಆರ್‌ಒ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಸುದ್ದಿ ಹರಡುತ್ತಿದ್ದಂತೆ ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆ ಎದುರು ನರ್ಸಿಂಗ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉತ್ತರಾಖಂಡ್ ಮಹಿಳಾ ಆಯೋಗದ ಅಧ್ಯಕ್ಷರಾದ ಕುಸುಮ್ ಕಂದ್ವಾಲ್ ಅವರು ಆಸ್ಪತ್ರೆ ವೈದ್ಯರನ್ನು ಭೇಟಿ ಮಾಡಿದ್ದು ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
We have become a circus.
Police jeep in a hospital ward.
The video is rumoured to be from AIIMS Rishikesh. pic.twitter.com/b42Ue5qzjo
— Ravi Handa (@ravihanda) May 23, 2024
