ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಕೇಂದ್ರದ ಸರ್ಕಾರಿ ನೌಕರರ ಸಂಘದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಆಚರಿಸಿದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ರಾಜೇಂದ್ರ ಪ್ರಸಾದ್ ಧಮ್ಮಾಚಾರಿಯವರು ಬುದ್ಧನ ಪಂಚಶೀಲಗಳ ಉಪಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, “ಬುದ್ಧನ ನೆಲೆಯನ್ನು ಕಂಡುಕೊಳ್ಳುವ ಅನಿವಾರ್ಯತೆ ಈಗ ದೇಶಕ್ಕೆ ತುರ್ತು ಇದೆ. ಧರ್ಮಾಂಧತೆಯಲ್ಲಿ ಯುವಶಕ್ತಿಯನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಪ್ರಸ್ತುತ ಸಮಾಜವು ಅಶಾಂತಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಕೋಮುವಾದಿ ಶಕ್ತಿಗಳು ಹಗಲಿರುಳು ಕಾರ್ಯ ನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ತಥಾಗತ ಗೌತಮ ಬುದ್ಧನ ಸಂದೇಶ ಅತ್ಯವಶ್ಯಕ” ಎಂದು ತಿಳಿಸಿದರು.
ಇದೇ ವೇಳೆ ಗುಡಿಬಂಡೆ ತಾಲೂಕಿನ ರಾಮಕೃಷ್ಣಪುರ ಸತ್ಯನಾರಾಯಣ-ಚಿತ್ರ ದಂಪತಿಯ ಮಗುವಿಗೆ ಅಶ್ವಘೋಷ್ ಎಂದು ನಾಮಕರಣ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿಯ ರೈತ ನಾಯಕಿ, ಜಯಶ್ರೀ ಎಂಬ ಮಾಸ್ ಲೀಡರ್
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಎನ್ ವೆಂಕಟೇಶಣ್ಣ, ಜಿ ಜಿ ಗಂಗಪ್ಪ, ಕೋಲಾರ ರವಿ, ಮುನಿ ವೆಂಕಟಪ್ಪ, ಪಿ ವಿ ನಾಗಪ್ಪ, ಗುಡಿಬಂಡೆ ಗಂಗಪ್ಪ, ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾರಾಯಣಮ್ಮ ಮನೆ-ಮನೆಗೆ ಬುದ್ಧನ ಸಂದೇಶ ಸಾರಲು ತಿಳಿಸಿದರು.
