ಗದಗ ಮುಖ್ಯ ರಸ್ತೆ ರೈಲ್ವೆ ಇಲಾಖೆಗೆ ಸಂಬಂಧಪಟ್ಟಿದ್ದು ಈ ರಸ್ತೆಯ ದುರಸ್ತಿ ಕಾಮಗಾರಿ ಮಾಡದೆ ಇರುವ ಕಾರಣ ರಸ್ತೆ ತುಂಬಾ ಹದಗೆಟ್ಟು ಹೋಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನೆಡೆಸಿದರು.
ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ರೈಲ್ವೆ ಸೇತುವೆ ಕೆಳಗಡೆ ಇರುವ ಹೊಳೆ ಆಲೂರಿನಿಂದ ರೋಣಕ್ಕೆ ಹೋಗುವ ಮುಖ್ಯ ರಸ್ತೆ ದುರಸ್ಥಿ ಮಾಡಬೇಕು. ರಸ್ತೆಯ ಮಧ್ಯಭಾಗಕ್ಕೆ ಹಾಕಿರುವ ಕಬ್ಬಿಣದ ರಾಡುಗಳು ವಾಹನಗಳ ಗಾಲಿಗೆ ಸಿಕ್ಕು ವಾಹನ ಸವಾರರ ಜೀವ ಹೋಗುವ ಪರಿಸ್ಥಿತಿ ಉಂಟಾಗಿದೆ. ಈಗ ಮಳೆಗಾಲ ಪ್ರಾರಂಭವಾದ ಕಾರಣ ಮಳೆಯ ನೀರು ಸೇತುವೆ ಕೆಳಗಡೆ ಬಂದು ನಿಂತು ಮುಖ್ಯರಸ್ತೆ ಸಂಪೂರ್ಣ ಜಲಾವೃತ ಆಗಿಬಿಡುತ್ತದೆ ಮತ್ತು ಮಳೆಯ ನೀರು ಹರಿದು ಹೋಗುವುದಿಲ್ಲ. ನೀರು ಹರಿದು ಹೋಗುವ ಮಾರ್ಗ ಸರಿಯಾಗಿಲ್ಲ ಇದರಿಂದ ವಾಹನ ಸವಾರರು, ಪಾದಾಚಾರಿಗಳು ಹಾಗೂ ಸಾರ್ವಜನಿಕರು ಚಿಕ್ಕ-ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
“ಇಷ್ಟೆಲ್ಲಾ ತೊಂದರೆ ಆದರೂ ಕೂಡ ಇದನ್ನೆಲ್ಲಾ ನೋಡಿ ಸಾರ್ವಜನಿಕರು ನಮ್ಮ ಜಯ ಕರ್ನಾಟಕ ಸಂಘಟನೆ ಮುಂದೆ ತಮ್ಮ ತೊಂದರೆ ಹೇಳಿದ ಕಾರಣ ನಾವು ನಿಮಗೆ ಎಂಟು ದಿನಗಳ ಕಾಲಾವಕಾಶದಲ್ಲಿ ಈ ರಸ್ತೆ ಮತ್ತು ನೀರು ಹರಿದು ಹೋಗುವುದಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡಬೇಕೆಂದು ತಮ್ಮಲ್ಲಿ ಸಾಂಕೇತಿಕ ಮನವಿ ನೀಡುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೆಂಕಿ ಅವಘಡ ; ಹೊತ್ತಿ ಉರಿದ ಜೆಸ್ಕಾಂ ಕಚೇರಿ
“ನಾವು ಕೊಟ್ಟ ಗಡುವ ಮುಗಿದ ನಂತರ ತಾವೇನಾದರೂ ಕಾಮಗಾರಿ ಮಾಡದೆ ಹೋದಲ್ಲಿ ಹೊಳೆ ಆಲೂರು ರೈಲ್ವೆ ಸ್ಟೇಷನ್‌ಗೆ ಬರುವ ಎಲ್ಲ ರೈಲುಗಳನ್ನು ತಡೆಯುತ್ತೇವೆ. ಈ ಕೆಲಸ ನಡೆಯುವ ಮುನ್ನವೇ ತಾವು ಎಚ್ಚೆತ್ತುಕೊಂಡು ಈ ಎಲ್ಲ ಕೆಲಸ ಮಾಡಿಕೊಟ್ಟು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು” ಎಂದು ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
