ತೀವ್ರ ರೆಮಲ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಭೂಕುಸಿತ ಉಂಟಾಗಿದ್ದು ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ರೆಮಲ್ ಚಂಡಮಾತುತವು ಪಶ್ಚಿಮ ಬಂಗಾಳದ ಸಾಗರ ದ್ವೀಪ ಮತ್ತು ಬಾಂಗ್ಲಾದೇಶದ ಖೆಪುಪಾರಾ ನಡುವೆ ರಾತ್ರಿ 9.15 ರ ಸುಮಾರಿಗೆ ಭೂಕುಸಿತ ಉಂಟು ಮಾಡಿದೆ. ಭಾನುವಾರ ತೀವ್ರಗೊಂಡ ರೆಮಲ್ ಚಂಡಮಾರುತವು ಉತ್ತರದ ಕಡೆಗೆ ಚಲಿಸಿದೆ.
ಭೂಕುಸಿತಕ್ಕೆ ಕಾರಣವಾದ ತೀವ್ರ ಚಂಡಮಾರುತ ‘ರೆಮಲ್’ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಸಾಗಿದೆ. ಮೇ 27ರಂದು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಇನ್ನೂ ಭಾರೀ ಮಳೆ ಮುಂದುವರಿದಿದೆ.
#WATCH | West Bengal: Rain continues to lash Kolkata, in the wake of Cyclone ‘Remal’
(Visuals from Kalighat) pic.twitter.com/DthIeSx3tp
— ANI (@ANI) May 27, 2024
ಪಶ್ಚಿಮ ಬಂಗಾಳದ ಆಡಳಿತವು ದಕ್ಷಿಣ 24 ಪರಗಣಗಳು, ಉತ್ತರ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ತಗ್ಗು ಪ್ರದೇಶಗಳಿಂದ ಮತ್ತು ಕರಾವಳಿ ಪ್ರದೇಶಗಳಿಂದ ಜನರನ್ನು ಚಂಡಮಾರುತದ ಆಶ್ರಯಕ್ಕೆ ಸ್ಥಳಾಂತರಿಸಿದೆ. ನಿನ್ನೆ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಕರಾವಳಿ ಮತ್ತು ದುರ್ಬಲ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. ಇನ್ನು ಬಾಂಗ್ಲಾದೇಶದಲ್ಲಿ 8 ಲಕ್ಷ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ರೆಮಲ್ ಚಂಡಮಾರುತ| ಬಂಗಾಳದಲ್ಲಿ ಭೂಕುಸಿತ ಸಾಧ್ಯತೆ; ವಿಮಾನ, ರೈಲುಗಳು ರದ್ದು
ಚಂಡಮಾರುತದ ಪರಿಣಾಮವಾಗಿ ಕೋಲ್ಕತ್ತಾ ಮತ್ತು ದಕ್ಷಿಣ ಬಂಗಾಳದ ಇತರ ಭಾಗಗಳಲ್ಲಿ ವಿಮಾನ, ರೈಲು ಮತ್ತು ರಸ್ತೆ ಸಾರಿಗೆಯಲ್ಲಿ ಅಡಚಣೆಯಾಗಿದೆ. ಪೂರ್ವ ಮತ್ತು ಆಗ್ನೇಯ ರೈಲ್ವೆಗಳು ಭಾನುವಾರ ಮತ್ತು ಸೋಮವಾರದವರೆಗೆ ಹಲವಾರು ರೈಲುಗಳನ್ನು ರದ್ದುಗೊಳಿಸಿವೆ. ಕೋಲ್ಕತ್ತಾ ಮತ್ತು ಸುಂದರಬನ್‌ಗಳಲ್ಲಿ ದೋಣಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮತ್ತು ದೇಶೀಯ 394 ವಿಮಾನಗಳು ರದ್ದಾಗಿದೆ. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರು ಭಾನುವಾರ ಸಂಜೆಯಿಂದ 12 ಗಂಟೆಗಳ ಕಾಲ ಸರಕು ಮತ್ತು ಕಂಟೈನರ್ ನಿರ್ವಹಣೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ರೆಮಲ್ ಚಂಡಮಾರುತದ ಪ್ರಭಾವಕ್ಕೆ ಹುಲ್ಲಿನ ಗುಡಿಸಲುಗಳ ಮೇಲ್ಛಾವಣಿಗಳು ಹಾರಿಹೋದರೆ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ. ಕೋಲ್ಕತ್ತಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ.