ಇಸ್ರೇಲ್ ಹಮಾಸ್ ಯುದ್ಧ| ರಫಾದಲ್ಲಿ ಇಸ್ರೇಲ್ ದಾಳಿಗೆ 35 ಮಂದಿ ಬಲಿ

Date:

ಇಸ್ರೇಲ್ ಹಮಾಸ್ ಯುದ್ಧ ಆರಂಭವಾಗಿ ಸುಮಾರು ಎಂಟು ತಿಂಗಳುಗಳಾಗಿದ್ದು ಇನ್ನೂ ಕೂಡಾ ನಿಂತಿಲ್ಲ. ಈಗಾಗಲೇ ಸಾವಿರಾರು ಜೀವಗಳನ್ನು ಬಲಿ ಪಡೆದುಕೊಂಡ ಈ ಯುದ್ಧದಲ್ಲಿ ಮತ್ತೆ 35 ಮಂದಿ ಸಾವನ್ನಪ್ಪಿದ್ದಾರೆ.

ಪ್ಯಾಲೇಸ್ತಿನ್‌ನ ರಫಾದಲ್ಲಿ ಇಸ್ರೇಲ್ ದಾಳಿಗೆ 35 ಮಂದಿ ಬಲಿಯಾಗಿದ್ದು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮತ್ತು ಗಾಯಾಳುಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಪ್ಯಾಲೇಸ್ತಿನ್‌ ಆರೋಗ್ಯ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.

2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಗಾಜಾದಿಂದ ಹಮಾಸ್ 5000 ರಾಕೆಟ್‌ಗಳ ಪ್ರಯೋಗ ಮಾಡಿದ ಬಳಿಕ ಇಸ್ರೇಲ್ ಪ್ಯಾಲೇಸ್ತಿನ್‌ ಸಂಘರ್ಷವು ಇಸ್ರೇಲ್ ಹಮಾಸ್ ಯುದ್ಧವಾಗಿ ಮಾರ್ಪಟ್ಟಿದೆ. ಇತರ ದೇಶಗಳು ಮತ್ತು ಯುಎನ್ ಸಂಸ್ಥೆಗಳು ಮಧ್ಯಸ್ಥಿಕೆ ವಹಿಸಲು ಎಷ್ಟು ಪ್ರಯತ್ನ ಮಾಡಿದರೂ ಕೂಡಾ ಈ ಯುದ್ಧ ಇನ್ನೂ ನಿಂತಿಲ್ಲ, ಶೀಘ್ರವೇ ಶಾಂತಿ ಮಾತುಕತೆ ಸಫಲವಾಗುವ ನಿರೀಕ್ಷೆಯೂ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ? ಇಸ್ರೇಲ್ ವಿರುದ್ಧದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಹಮಾಸ್: ನೆತನ್ಯಾಹು ಸರ್ಕಾರದ ಮೇಲೆ ಒತ್ತಡ

ಇನ್ನು “35 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯವಿರುವ ಯಾವುದೇ ಆಸ್ಪತ್ರೆ ರಾಫಾದಲ್ಲಿಲ್ಲ. ಈ ಗಾಯಾಳುಗಳನ್ನು ಎಲ್ಲಿಗೆ ವರ್ಗಾಯಿಸುವುದು ಎಂಬ ಗೊಂದಲ ಆಂಬ್ಯುಲೆನ್ಸ್ ತಂಡಕ್ಕಿದೆ” ಎಂದು ಪ್ಯಾಲೇಸ್ತಿನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹ್ಯಾಕ್ ಆಗುವ ಸಾಧ್ಯತೆ; ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದ ಎಲಾನ್‌ ಮಸ್ಕ್‌

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನ ಮಾಲೀಕ ಎಲಾನ್‌ ಮಸ್ಕ್‌, ಕೃತಕ ಬುದ್ಧಿಮತ್ತೆ(ಎಐ) ಅಥವಾ...

ದಕ್ಷಿಣ ಆಫ್ರಿಕಾ ಅಧ್ಯಕ್ಷ ರಮಾಫೋಸ ಎರಡನೇ ಅವಧಿಗೆ ಪುನರಾಯ್ಕೆ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸ ಅವರು ಮತದಾನಕ್ಕೆ ಕೆಲವೇ ಗಂಟೆಗಳ...

ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರು ಮೃತ್ಯು; ಉನ್ನತಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

ಕುವೈತ್‌ನ ಕಾರ್ಮಿಕರ ಶಿಬಿರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ 40 ಮಂದಿ...

ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಇಟಲಿಯಲ್ಲಿ ಮಹಾತ್ಮ ಗಾಂಧಿ ವಿಗ್ರಹ ಧ್ವಂಸ

ಉದ್ಘಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿಗಳು ಮಹಾತ್ಮ ಗಾಂಧಿ ಅವರ ವಿಗ್ರಹವನ್ನು...